ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಪ್ರಯಾಣಿಕರ ಮೇಲೆ ಬೆಲೆ ಏರಿಕೆ ಹೊರೆ?

By Mahesh
|
Google Oneindia Kannada News

ನವದೆಹಲಿ, ಡಿ.14: ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ 2015ರ ಜನವರಿಯಲ್ಲಿ ಮಂಡನೆಯಾಗಲಿರುವ ರೈಲು ಬಜೆಟ್‌ನಲ್ಲಿ ಪ್ರಯಾಣ ದರವನ್ನು ಗಣನೀಯವಾಗಿ ಏರಿಕೆ ಮಾಡುವ ಬಗ್ಗೆ ಇಲಾಖೆ ಸೂಚನೆ ನೀಡಿದೆ.

ಇತ್ತೀಚಿನ ಕೆಲ ತಿಂಗಳುಗಳಿಂದ ಇಂಧನ ಬೆಲೆ ಶೇ.4ಕ್ಕಿಂತ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಬಜೆಟ್‌ನಲ್ಲಿ ರೈಲು ಪ್ರಯಾಣ ದರ ಏರಿಸಲೇಬೇಕಾಗುತ್ತದೆ.ಇದರಿಂದ ಸಾರ್ವಜನಿಕರಿಗೆ ಹೊರೆಯಾಗಲಿದೆ. ಆದರೆ ಜನತೆ ಅದನ್ನು ಭರಿಸುವುದು ಅನಿವಾರ್ಯ ಎಂದು ರೈಲ್ವೆ ಖಾತೆ ಸಚಿವ ಸುರೇಶ್‌ಪ್ರಭು ಅವರನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.

ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರಗಳನ್ನು ಇಂಧನ ಬೆಲೆಯನ್ನು ಅನುಸರಿಸಿ ಪ್ರಯಾಣ ದರವನ್ನು ಪರಿಷ್ಕರಿಸಬೇಕಾಗುತ್ತದೆ. ಇಂಧನ ದರ ಶೇ.4ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣದರ ಪರಿಷ್ಕರಣೆ ಅನಿವಾರ್ಯವಾಗಿದ್ದು, ಶೇ.4.2ರಷ್ಟು ಪ್ರಯಾಣಿಕರ ದರ ಹಾಗೂ ಶೇ1.4ರಷ್ಟು ಸರಕು ಸಾಗಣೆ ದರಗಳನ್ನು ಪರಿಷ್ಕರಣೆಗೊಳಪಡಿಸಲಾಗುವುದು.

Indian Railways passenger fares likely to go up early next year

ಈಗಾಗಲೇ ಘೋಷಣೆ ಮಾಡಿರುವ ಯೋಜನೆಯನ್ನು ಪೂರ್ಣಗೊಳಿಸಲು 6 ಲಕ್ಷ ಕೋಟಿಯಿಂದ 8 ಲಕ್ಷ ಕೋಟಿ ವರೆಗೆ ಬೇಕಾಗುತ್ತದೆ ಎಂದೂ ಸಚಿವ ಸುರೇಶ್ ಪ್ರಭು ಇತ್ತೀಚೆಗೆ ಸಮಾರಂಭವೊಂದರಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ರೈಲ್ವೆ ಬಜೆಟ್ ಗೂ ಮುನ್ನ ಎಲ್ಲಾ ರಾಜ್ಯಗಳ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುತ್ತದೆ. ಬೇಡಿಕೆಗಳನ್ನು ಈಡೇರಿಸಲು ಸುಮಾರು 20,000 ಕೋಟಿ ರು ಹೆಚ್ಚುವರಿ ಮೊತ್ತ ಬೇಕಾಗುತ್ತದೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ. ಸುಧಾರಣೆಗಳ ನಡುವೆಯೂ ಕಳೆದ ವರ್ಷದ ಏಪ್ರಿಲ್ ನಿಂದ ನವೆಂಬರ್ ತನಕದ ಅಂಕಿ ಅಂಶದಂತೆ ರೈಲ್ವೆ ಟಿಕೆಟ್ ಬುಕ್ಕಿಂಗ್ ಶೇ 1.43ರಷ್ಟು ಇಳಿಮುಖವಾಗಿರುವುದು ಇಲಾಖೆಗೆ ಹಿನ್ನಡೆಯಾಗಿದೆ ಎಂದು ಸಚಿವ ಪ್ರಭು ಅಭಿಪ್ರಾಯಪಟ್ಟಿದ್ದಾರೆ.(ಪಿಟಿಐ)

English summary
The next Rail Budget to be presented early next year could contain a proposal for raising fares to pass on the burden of rising power cost to passengers. The last revision was done in June wherein passenger fares were revised by 4.2 per cent and freight rates by 1.4 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X