ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸವಾಲು

|
Google Oneindia Kannada News

Recommended Video

ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿ ಸವಾಲ್ ಹಾಕಿದ ನರೇಂದ್ರ ಮೋದಿ | Oneindia Kannada

ಅಂಬಿಕಾನಗರ, ನವೆಂಬರ್ 16: "ಗಾಂಧಿ ಕುಟುಂಬದ ಹೊರತಾಗಿ ಬೇರೆಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ ನೋಡೋಣ" ಎಂದು ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸವಾಲೆಸೆದಿದ್ದಾರೆ.

ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ ಮತ್ತೆ ಪ್ರಧಾನಿ?ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ ಮತ್ತೆ ಪ್ರಧಾನಿ?

ಛತ್ತೀಸ್ ಗಢದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ rally ಯೊಂದರಲ್ಲಿ ಭಾಗವಹಿಸಿದ್ದ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಲೋಕಸಭೆ ಚುನಾವಣೆ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಧೂಳಿಪಟ?!ಲೋಕಸಭೆ ಚುನಾವಣೆ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಧೂಳಿಪಟ?!

"ಕಳೆದ ಐದು ವರ್ಷಗಳಿಂದ ಗಾಂಧಿ ಕುಟುಂಬವೇ ಪಕ್ಷದ ಅಧ್ಯಕ್ಷರ ಸ್ಥಾನದಲ್ಲಿದೆಯಲ್ಲ... ಗಾಂಧಿ ಕುಟುಂಬದ ಹೊರತಾಗಿ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ನೋಡೋಣ" ಎಂದು ಸವಾಲೆಸೆದರು.

ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ

ನೆಹರು ಅವರನ್ನು ನಾವು ನಂಬುತ್ತೇವೆ, ಆದರೆ...

ನೆಹರು ಅವರನ್ನು ನಾವು ನಂಬುತ್ತೇವೆ, ಆದರೆ...

"ಗಾಂಧಿ ಕುಟುಂಬದ ಹೊರಗಿನವರೊಬ್ಬರನ್ನು ಕಡೇ ಪಕ್ಷ ಐದು ವರ್ಷದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ. ಆಗ ನಾವೂ ಪಂಡಿತ್ ಜವಾಹರಲಾಲ್ ನೆಹರು ಅವರ ಪ್ರಜಾಪ್ರಭುತ್ವವನ್ನು ನಂಬುತ್ತೇವೆ. ನೆಹರು ಅವರು ನಿಜವಾದ ಪ್ರಜಾಪ್ರಭುತ್ವ ಪದ್ಧತಿಯನ್ನು ಸೃಷ್ಟಿಸಿದರು ಎಂದು ನಾವು ನಂಬುತ್ತೇವೆ" ಎಂದು ಮಾತಿನಲ್ಲೇ ಛಾಟಿ ಏಟು ನೀಡಿದರು.

ಕಾಂಗ್ರೆಸ್ ನನ್ನನ್ನು ಪ್ರಧಾನಿ ಎಂದು ಇನ್ನೂ ನಂಬಿಲ್ಲ!

ಕಾಂಗ್ರೆಸ್ ನನ್ನನ್ನು ಪ್ರಧಾನಿ ಎಂದು ಇನ್ನೂ ನಂಬಿಲ್ಲ!

"ಕಾಂಗ್ರೆಸ್ಸಿಗರಿಗೆ ಇಂದಿಗೂ ನನ್ನನ್ನು ಪ್ರಧಾನಿ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಪ್ರಧಾನಿಯಾಗಿ ನಾಲ್ಕೂವರೆ ವರ್ಷವಾದರೂ, ಒಬ್ಬ ಚಹಾ ವ್ಯಾಪಾರಿ ಹೇಗೆ ಪ್ರಧಾನಿಯಾದ ಎಂದೇ ಅವರು ಯೋಚಿಸುತ್ತಿದ್ದಾರೆ" ಎಂದು ಮೋದಿ ಕುಟುಕಿದರು.

ಶಶಿ ತರೂರ್ ಗೆ ಟಾಂಗ್!

ಶಶಿ ತರೂರ್ ಗೆ ಟಾಂಗ್!

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್, ಮಾಜಿ ಪ್ರಧಾನಿ ಪಂ.ಜವಾಹರಲಾಲ್ ನೆಹರು ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ತಳಪಾಯ ಹಾಕಿದ್ದರಿಂದಲೇ ನರೇಂದ್ರ ಮೋದಿ ಎಂಬ ಚಾಯ್ ವಾಲಾ ಸಹ ಪ್ರಧಾನಿಯಾಗಿದ್ದು ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಛತ್ತೀಸ್ ಗಢದ rally ಯಲ್ಲಿ ಮೋದಿ ಮಾತನಾಡಿದರು.

ಛತ್ತೀಸ್ ಗಢದಲ್ಲಿ ಚುನಾವಣೆ ಎಂದು?

ಛತ್ತೀಸ್ ಗಢದಲ್ಲಿ ಚುನಾವಣೆ ಎಂದು?

ಛತ್ತೀಸ್ ಗಢದಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 12 ರಂದು ನಡೆದಿದ್ದು, ಎರಡನೇ ಹಂತದ ಮತದಾನ ನ.20 ರಂದು ನಡೆಯಲಿದೆ. ಒಟ್ಟು 90 ಕ್ಷೇತ್ರಗಳ ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿ.11 ರಂದು ಹೊರಬೀಳಲಿದೆ.

English summary
Prime Minister Narendra Modi on Friday threw an open challenge to the Congress and asked the party to have someone outside of the Gandhi family as its president for five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X