Get Updates
Get notified of breaking news, exclusive insights, and must-see stories!

ಬಯಸಿದಂತೆ ಸುರೇಶ್ ಪ್ರಭುಗೆ ರೈಲ್ವೆ ಖಾತೆಯಿಂದ ಮುಕ್ತಿ

ನವದೆಹಲಿ, ಸೆಪ್ಟೆಂಬರ್ 03 : ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಯಸಿದಂತೆ ರೈಲ್ವೆ ಖಾತೆಯಿಂದ ಅವರಿಗೆ ಮುಕ್ತಿ ನೀಡಲಾಗಿದೆ. ಪಿಯೂಷ್ ಗೋಯೆಲ್ ನೂತನ ರೈಲ್ವೆ ಸಚಿವರಾಗಿ ನೇಮಕವಾಗಿದ್ದಾರೆ.

ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಿತು. 9 ಸಚಿವರು ಹೊಸದಾಗಿ ಸಂಪುಟ ಸೇರಿಕೊಂಡರು, ಹಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್‌, ಧರ್ಮೇಂದ್ರ ಪ್ರಧಾನ್‌, ಪಿಯೂಷ್‌ ಗೋಯಲ್‌ ಹಾಗೂ ಮುಖ್ತರ್‌ ಅಬ್ಬಾಸ್‌ ನಖ್ವಿ ಅವರು ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಬಡ್ತಿ ಪಡೆದರು.

Modi cabinet reshuffle : Piyush Goyal gets railway ministry

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣಾ ಖಾತೆ ನೀಡಲಾಗಿದ್ದು, ಪಿಯೂಷ್ ಗೋಯೆಲ್ ನೂತನ ರೈಲ್ವೆ ಸಚಿವರಾಗಿ ನೇಮಕವಾಗಿದ್ದಾರೆ. ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಹೊಣೆ ನೀಡಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಬಳಿಕ ಸುರೇಶ್ ಪ್ರಭು ಅವರಿಗೆ ರೈಲ್ವೆ ಇಲಾಖೆಯಿಂದ ಮುಕ್ತಿ ನೀಡಲಾಗಿದೆ. ದೇಶದಲ್ಲಿ ನಡೆದ ಸರಣಿ ರೈಲು ಅಪಘಾತಗಳ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಸುರೇಶ್ ಪ್ರಭು ಬಯಸಿದ್ದರು. ಈ ಕುರಿತು ಅವರು ಟ್ವಿಟ್ ಮಾಡಿದ್ದರು. ಆದರೆ, ನರೇಂದ್ರ ಮೋದಿ ಅವರು ರಾಜೀನಾಮೆ ಅಂಗೀಕಾರ ಮಾಡಿರಲಿಲ್ಲ.

ಖಾತೆಗಳ ಮರು ಹಂಚಿಕೆ ಸಂದರ್ಭದಲ್ಲಿ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ನೀಡಲಾಗಿದೆ. ಟ್ವಿಟರ್‌ ಮೂಲಕ ಇಷ್ಟು ದಿನಗಳ ಕಾಲ ಸಹಕಾರ ನೀಡಿದ ಎಲ್ಲರಿಗೂ ಸುರೇಶ್ ಪ್ರಭು ಧನ್ಯವಾದ ಅರ್ಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+