ಮೋದಿ ಕ್ಯಾಬಿನೆಟ್ ವಿಸ್ತರಣೆ: 20 ಹೊಸ ಮುಖಗಳಿಗೆ ಮಣೆ?
ನವದೆಹಲಿ, ಜುಲೈ 6: ಕೊರೊನಾ ಸಂಕಷ್ಟದ ನಡುವೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟ ಪುನರ್ ರಚನೆ ಕಮ್ ವಿಸ್ತರಣೆಗೆ ಮುಂದಾಗಿದ್ದಾರೆ. ಈ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಜುಲೈ 7ರಂದು ಸಂಜೆ 5;30ಕ್ಕೆ ಅಥವಾ ಜುಲೈ 8ರಂದು ಬೆಳಗ್ಗೆ 10.30ಕ್ಕೆ ಹೊಸ ಸಚಿವರ ಸೇರ್ಪಡೆಗೆ ಸಮಾರಂಭ ಸರಳವಾಗಿ ನಡೆಸಲು ಮುಹೂರ್ತ ನಿಗದಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆ ಕಳೆದ ವಾರಾಂತ್ಯದಿಂದ ಮೋದಿ ಮ್ಯಾರಥಾನ್ ಮೀಟಿಂಗ್ ನಡೆಸಿದ್ದಾರೆ.
ಮಂಗಳವಾರದಂದು ಕೂಡಾ ನಂ.7, ಲೋಕ್ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ. ಹಾಲಿ ಸಚಿವರ ಮೌಲ್ಯಮಾಪನ, ಕಾರ್ಯಕ್ಷಮತೆ ವರದಿ ಪಡೆದುಕೊಳ್ಳಲಾಗಿದ್ದು, ಹಲವರು ಸಚಿವರು ಸ್ಥಾನ ತೊರೆಯಲಿದ್ದು, ಬಹುತೇಕ 20 ಹೊಸಮುಖಗಳಿಗೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಕಲ್ಪಿಸಲು ಮೋದಿ ಮುಂದಾಗಿದ್ದಾರೆ.
ಪ್ರಾದೇಶಿಕ ಸಮತೋಲನ, ಜಾತಿವಾರು ಕೋಟಾದ ನಡುವೆ ಮುಂಬರುವ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಸೇರಿದಂತೆ ಐದು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸಬರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಸಮಯಕ್ಕೆ ಸಂಪುಟ ಸೇರಲಿರುವ ಸದಸ್ಯರ ಪಟ್ಟಿ ಅಂತಿಮಗೊಂಡಿದ್ದರೂ ಯಾರೂ ಗುಟ್ಟು ಬಿಟ್ಟುಕೊಟ್ಟಿಲ್ಲ ಎಂಬ ಸುದ್ದಿ ಬಂದಿದೆ.. ಮೋದಿ ಮೀಟಿಂಗ್, ಸಂಪುಟ ಗಾತ್ರ, ಸಂಭವನೀಯ ಹೊಸ ಮುಖಗಳ ಬಗ್ಗೆ ಹೆಚ್ಚಿನ ವಿವರ ಮುಂದಿದೆ..

ಮೋದಿ ಜೊತೆ ಸಭೆ ಯಾರು ಯಾರು ಭಾಗಿ
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಈ ಕುರಿತಂತೆ ಚರ್ಚಿಸಲು ಮಹತ್ವದ ಸಭೆ ನಡೆಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಗೃಹ ಸಚಿವ ಅಮಿತ್ ಶಾ ಅಲ್ಲದೆ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಪಿಯೂಶ್ ಗೋಯೆಲ್, ನರೇಂದ್ರ ಸಿಂಗ್ ತೋಮಾರ್ ಮುಂತಾದವರು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಅಧಿಕಾರವಹಿಸಿಕೊಂಡ ಬಳಿಕ ಮೇ 2019ರಿಂದ ಇಲ್ಲಿ ತನಕ ಸಂಪುಟ ವಿಸ್ತರಣೆ, ಪುನರ್ ರಚನೆಯಾಗಿರಲಿಲ್ಲ.

ಸಂಪುಟದ ಗಾತ್ರ 60 ರಿಂದ 79ಕ್ಕೇರಲಿದೆ
ಸಂಪುಟ ವಿಸ್ತರಣೆ ಬಳಿಕ ಹಾಲಿ ಸಂಪುಟದ ಗಾತ್ರ 60 ರಿಂದ 79ಕ್ಕೇರಲಿದೆ. ಈಗ 21 ಕ್ಯಾಬಿನೆಟ್ ದರ್ಜೆ ಸಚಿವರು, 9 ರಾಜ್ಯ ಸಚಿವರು(ಸ್ವತಂತ್ರ ಖಾತೆ) ಹಾಗೂ 29 ರಾಜ್ಯ ಸಚಿವರಿದ್ದಾರೆ. 81 ಸ್ಥಾನಗಳನ್ನು ಹೊಂದಬಹುದಾಗಿದೆ. ಇಬ್ಬರು ಸಚಿವರ ನಿಧನ, ಮಿತ್ರಪಕ್ಷಗಳಾಗಿದ್ದ ಅಕಾಲಿದಳ, ಶಿವಸೇನೆ ಮೈತ್ರಿ ಕಳೆದುಕೊಂಡಿದ್ದರಿಂದ ಉಂಟಾಗಿರುವ ಖಾಲಿ ಸ್ಥಾನ ಸೇರಿಸಿ 28 ಸ್ಥಾನಗಳನ್ನು ತುಂಬಬಹುದಾಗಿದೆ. ಜೊತೆಗೆ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ ನಿಭಾಯಿಸುತ್ತಿರುವ ಹೆಚ್ಚುವರಿ ಖಾತೆಗಳನ್ನು ಮೋದಿ ಅವರು ಹೊಸಬರಿಗೆ ಹಂಚಬೇಕಾಗಿದೆ. ಮುರ್ನಾಲ್ಕು ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಸೂಚನೆ ಸಿಕ್ಕಿದೆ.

ಸಂಭವನೀಯ ಸಚಿವರ ಪಟ್ಟಿ 1
ಜ್ಯೋತಿರಾದಿತ್ಯ ಸಿಂಧಿಯಾ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮುಖ ನಾಯಕ ಸಿಂಧಿಯಾ ಅವರು ಮಧ್ಯಪ್ರದೇಶದಿಂದ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳ್ಳುವುದು ಖಚಿತವಾಗಿದೆ.
ಪಶುಪತಿ ಪರಸ್: ಎಲ್ ಜೆ ಪಿ ಮುಖಂಡ ಪರಸ್ ಅವರು ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಬಣ ಮೇಲಕ್ಕೇಳದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈಗ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.ಸರ್ಬಾನಂದ್ ಸೋನೊವಾಲ್: ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರು ಹಿಮಂತಾ ಬಿಸ್ವ ಶರ್ಮ ಅವರಿಗೆ ಸಿಎಂ ಪಟ್ಟು ಬಿಟ್ಟುಕೊಟ್ಟಿದ್ದು, ಕೇಂದ್ರ ಸಂಪುಟ ಸೇರುವ ತವಕದಲ್ಲಿದ್ದಾರೆ.
ಸಂಭವನೀಯ ಸಚಿವರ ಪಟ್ಟಿ 2
ಸುಶೀಲ್ ಮೋದಿ: ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್ ಮೋದಿ ಅವರು ಚುನಾವಣೆ ಸಂದರ್ಭದಲ್ಲೇ ದೆಹಲಿಗೆ ಮರಳಿದ್ದು, ಕೇಂದ್ರ ಸಂಪುಟಕ್ಕೆ ಸೇರಲಿದ್ದಾರೆ.
ನಾರಾಯಣ ರಾಣೆ: ಮಹಾರಾಷ್ಟದ ಬಿಜೆಪಿ ಮುಖಂಡ ಪ್ರಾದೇಶಿಕ ಕೋಟಾದಡಿಯಲ್ಲಿ ಸಂಪುಟಕ್ಕೆ ಸೇರಲಿದ್ದಾರೆ.
ಸಂತೋಶ್ ಕುಶ್ವಾಹ: ಜೆಡಿಯು ಮುಖಂಡ ಸಂತೋಶ್ ಹೆಸರು ಬಲವಾಗಿ ಕೇಳಿ ಬಂದಿದ್ದು, ದೆಹಲಿಗೆ ಬರುವಂತೆ ಬುಲಾವ್ ಬಂದಿದೆ.
ಆರ್ ಸಿಪಿ ಸಿಂಗ್: ಎನ್ ಡಿಎ ಮಿತ್ರಪಕ್ಷದ ಅಧ್ಯಕ್ಷ ಆರ್ ಸಿಪಿ ಸಿಂಗ್ ಅವರು ಸಂಪುಟ ಸೇರುವ ಸಾಧ್ಯತೆ ಹೆಚ್ಚಿದೆ.
ಸಂಭವನೀಯ ಸಚಿವರ ಪಟ್ಟಿ -3
ಜಮ್ಯಾಂಗ್ ಸೆರಿಂಗ್ ನಮ್ ಗ್ಯಾಲ್: ಲಡಾಕ್ ಸಂಸದ ಜಮ್ಯಾಂಗ್ ಅವರು ಸಂಪುಟದಲ್ಲಿ ಹೊಸ ಮುಖವಾಗುವ ಸಾಧ್ಯತೆಯಿದೆ.
ಲಾಕೆಟ್ ಚಟರ್ಜಿ: ಪಶ್ಚಿಮ ಬಂಗಾಳದ ಪ್ರತಿನಿಧಿಯಾಗಿ ಸಂಪುಟ ಸೇರಲಿದ್ದಾರೆ.
ದಿಲೀಪ್ ಘೋಶ್, ಜಾಫರ್ ಇಸ್ಲಾಂ: ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರಾಗಿರುವ ದಿಲೀಪ್ ಜೊತೆಗೆ ದಿನೇಶ್ ತ್ರಿವೇದಿ, ಜಾಫರ್ ಇಸ್ಲಾಂ ಕೂಡಾ ಸಂಪುಟ ಸೇರುವ ಸಾಧ್ಯತೆಯಿದೆ.
ಇವರಲ್ಲದೆ ಜೆಡಿಯುನ ಲಾಲನ್ ಸಿಂಗ್, ರಾಜಸ್ಥಾನದ ರಾಹುಲ್ ಕಸ್ವಾನ್,ಉತ್ತರಪ್ರದೇಶದ ವರುಣ್ ಗಾಂಧಿ, ರಾಮಶಂಕರ್ ಕತಾರಿಯಾ, ಜಿತಿನ್ ಪ್ರಸಾದ್ ಹೆಸರು ಕೂಡಾ ಕೇಳಿ ಬಂದಿದೆ.

ಕರ್ನಾಟಕದಿಂದ ಯಾರಿಗಿದೆ ಅದೃಷ್ಟ
ಕರ್ನಾಟಕದಿಂದ ಇಬ್ಬರಿಂದ ಮೂವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಸಿಎಂ ಯಡಿಯೂರಪ್ಪ ಪುತ್ರ ಬಿ. ವೈ ರಾಘವೇಂದ್ರಗೆ ಸ್ಥಾನ ಸಿಗುವ ಬಗ್ಗೆ ಸುದ್ದಿಯಿದೆ. ಉಳಿದಂತೆ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣ ಸ್ವಾಮಿಗೆ ದಲಿತ ಕೋಟಾದಲ್ಲಿ, ಸದಾನಂದ ಗೌಡರು ತಮ್ಮ ಸ್ಥಾನ ತೊರೆದರೆ ಆ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅಥವಾ ಪ್ರತಾಪ್ ಸಿಂಹ ಸೇರುವ ಸಾಧ್ಯತೆಯಿದೆ. ರಮೇಶ್ ಜಿಗಜಿಣಗಿ ಕೂಡಾ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications