ಸೆಪ್ಟೆಂಬರ್ 25ರಂದು ಆರೋಗ್ಯ ಸುರಕ್ಷೆ ಯೋಜನೆ ಜಾರಿ: ಮೋದಿ
ನವದೆಹಲಿ, ಆಗಸ್ಟ್ 15: ಬಹು ನಿರೀಕ್ಷಿತ ಆರೋಗ್ಯ ಸುರಕ್ಷೆ ಯೋಜನೆ ಬಗ್ಗೆ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನವ್ಉ ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಜತೆಗೆ ಶುರುವಾಗುತ್ತದೆ ಎಂದರು.
ಇದರಿಂದ ಐವತ್ತು ಕೋಟಿ ಮಂದಿಗೆ ವರ್ಷಕ್ಕೆ ಐದು ಲಕ್ಷ ರುಪಾಯಿ ಆರೋಗ್ಯ ವಿಮೆ ದೊರೆಯುತ್ತದೆ. ಈ ಯೋಜನೆಯು ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನವಾದ ಸೆಪ್ಟೆಂಬರ್ 25ರಂದು ಜಾರಿಗೆ ಬರಲಿದೆ. ಇಂದಿನಿಂದ ಆರು ವಾರಗಳ ಕಾಲ ಜನ್ ಆರೋಗ್ಯ ಅಭಿಯಾನದ ತಾಂತ್ರಿಕತೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
72ನೇ ಸ್ವಾತಂತ್ರ್ಯ ದಿನಾಚರಣೆ 2018

ಆರೋಗ್ಯ ಸುರಕ್ಷತೆ ಯೋಜನೆಯು ಐವತ್ತು ಕೋಟಿ ಭಾರತೀಯರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಯಾವ ಬಡವರಿಗೂ ಬಾರದಿರುವಂತೆ ನೋಡಿಕೊಳ್ಳುವಂತೆ ಮಾಡುವುದು ನಮ್ಮ ಗುರಿ. ಬಡವರಿಗೆ ಆರೋಗ್ಯ ಸೇವೆ ಕೈಗೆಟುಕುವಂತೆ ಆಗಬೇಕು ಎಂದು ಅವರು ಹೇಳಿದರು.












Click it and Unblock the Notifications