Mobile Recharge: TRAI ಹೊಸ ನಿಯಮ: ಡೇಟಾ ಬೇಡ, ಕರೆ-ಎಸ್‌ಎಂಎಸ್‌ ಮಾತ್ರ ಸಾಕು; ಮೊಬೈಲ್ ರೀಚಾರ್ಜ್‌ಗೆ ಹೊಸ ನಿಯಮ

Mobile Recharge: ಮೊಬೈಲ್ ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಮೊಬೈಲ್ ಬಳಕೆದಾರರ ಅನುಕೂಲಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಮೊಬೈಲ್ ರೀಚಾರ್ಜ್‌ನಲ್ಲಿದ್ದ ಗೊಂದಲಗಳು ಕಡಿಮೆ ಆಗಲಿದ್ದು, ಇಂಟರ್‌ನೆಟ್ ಬೇಡ ಕೇವಲ ಮಾತನಾಡುವುದಕ್ಕೆ ರೀಚಾರ್ಜ್ ಸಾಕು ಎಂದು ಬಯಸುವ ಮೊಬೈಲ್ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ. ಟ್ರಾಯ್ ಈ ಸಂಬಂಧ ತೆಗೆದುಕೊಂಡಿರುವ ಪ್ರಮುಖ ನಿರ್ಧಾರವೇನು ಇನ್ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್‌ಗೆ ಇದು ಹೇಗೆ ಅನುಕೂಲವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಗ್ರಾಹಕ ರಕ್ಷಣೆ (Thirteenth Amendment) ನಿಯಮಗಳು, 2026 ಅನ್ನು ಬಿಡುಗಡೆ ಮಾಡಿದೆ. ಇದು ಟೆಲಿಕಾಂ ಆಪರೇಟರ್‌ಗಳು ಮಾತನಾಡುವ ಹಾಗೂ ಮೆಸೇಜ್ ಮಾತ್ರ ಮಾಡುವ ರೀಚಾರ್ಜ್ ಆಯ್ಕೆಗಳನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದೆ. ಇದರಿಂದ ಡೇಟಾ ಹೆಚ್ಚು ಬಳಕೆ ಮಾಡದ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗಲಿದೆ. ಮೊಬೈಲ್ ಇಂಟರ್ನೆಟ್ ಬಳಸದೆ ಕೇವಲ ಮಾತನಾಡುವ ಮತ್ತು ಎಸ್‌ಎಂಎಸ್ / ಮೆಸೇಜ್ ಮಾತ್ರ ಬಳಸುವ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಇದೀಗ ದೊಡ್ಡ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ.

Mobile Recharge TRAI New Rules Make Voice amp amp SMS-Only Plans Mandatory for Users

ಡೇಟಾರಹಿತ (Internet) ಕಡಿಮೆ ಅವಧಿಯ ಮತ್ತು ಕೈಗೆಟುಕುವ ದರದ ರೀಚಾರ್ಜ್ ಪ್ಯಾಕ್‌ಗಳನ್ನು ಒದಗಿಸುವುದು ಟೆಲಿಕಾಂ ಕಂಪನಿಗಳಿಗೆ ಕಡ್ಡಾಯ ಮಾಡಲಾಗಿದೆ. ಅಲ್ಲದೆ 30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪ್ಯಾಕ್‌ಗಳು, ಪ್ರತಿ ತಿಂಗಳು ಒಂದೇ ದಿನಾಂಕದಂದು ರಿಫ್ರೆಶ್ ಆಗುವ ಮಾಸಿಕ ಪ್ಲ್ಯಾನ್‌ಗಳು ಹಾಗೂ ದೀರ್ಘಾವಧಿಯ ಆಯ್ಕೆಗಳನ್ನು ಗ್ರಾಹಕರಿಗೆ ಕಡ್ಡಾಯವಾಗಿ ಕೊಡಬೇಕು ಎಂದೂ ಸೂಚಿಸಲಾಗಿದೆ.

ಮಾತನಾಡುವ ಮತ್ತು ಎಸ್‌ಎಂಎಸ್ ಮಾತ್ರ ರೀಚಾರ್ಜ್ ಆಯ್ಕೆಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕರೆ ಮತ್ತು ಎಸ್‌ಎಂಎಸ್ ಮಾತ್ರ ಬೇಕಿರುವ ಗ್ರಾಹಕರಿಗೆ, ಡೇಟಾ ಇರುವ ಪ್ಯಾಕ್‌ ಬದಲು ಕಡಿಮೆ ದರದ ಪ್ರತ್ಯೇಕ ರೀಚಾರ್ಜ್‌ ಆಯ್ಕೆ ನೀಡಬೇಕು ಎಂದು ನಿಯಮಗಳು ಹೇಳುತ್ತವೆ. ಪ್ರಸ್ತಾವಿತ ತಿದ್ದುಪಡಿಯ ಕುರಿತು ಮುಕ್ತ ಸಭೆಯ ಚರ್ಚೆಯೊಂದಿಗೆ ಟ್ರಾಯ್ ಪಾಲುದಾರರಿಂದ 1,132 ಪ್ರತಿಕ್ರಿಯೆಗಳನ್ನು ಪಡೆದ ಸಮಾಲೋಚನಾ ಪ್ರಕ್ರಿಯೆಯ ನಂತರ ಸೋಮವಾರ ಹೊಸ ನಿಯಮಗಳನ್ನು ಹೊರಡಿಸಲಾಗಿದೆ.

Mobile Recharge: ಟ್ರಾಯ್ ಹೊಸ ನಿಯಮ: ಯಾವ ವಿಷಯಗಳು ಬದಲಾಗಲಿವೆ ?

ಇನ್ನು ಟ್ರಾಯ್ ತಿದ್ದುಪಡಿಯ ಪ್ರಕಾರ ಟೆಲಿಕಾಂ ಸೇವಾ ಪೂರೈಕೆದಾರರು ಮಾತನಾಡುವುದು ಮತ್ತು ಮೆಸೇಜ್‌ಗಾಗಿ ಪ್ರತ್ಯೇಕವಾಗಿ ಸೂಕ್ತವಾದ ಸುಂಕ ಕಡಿತಗಳೊಂದಿಗೆ ವಿಶೇಷ ಸುಂಕ ವೋಚರ್‌ಗಳನ್ನು (STV ಗಳು - ವಿಶೇಷ ದರದ ರೀಚಾರ್ಜ್‌ ವೋಚರ್) ನೀಡಬೇಕಾಗುತ್ತದೆ. ವೋಚರ್‌ಗಳು ವಿಭಿನ್ನ ಮಾನ್ಯತೆಯ ಅವಧಿಗಳನ್ನು ಒಳಗೊಂಡಿರುವ ಆಯ್ಕೆಗಳನ್ನು ಒಳಗೊಂಡಿರಬೇಕು ಎಂದು ಹೇಳಲಾಗಿದೆ.

ಮುಂದುವರಿದು 30 ದಿನಗಳು ಮತ್ತು 30 ದಿನಗಳಿಗಿಂತ ಕಡಿಮೆ ಅವಧಿಯ ವಾಯ್ಸ್‌, ಎಸ್‌ಎಂಎಸ್ ಮತ್ತು ಡೇಟಾ ಸೇವೆಗಳಿಗೆ ಸಂಬಂಧಿಸಿದ ವಾಯ್ಸ್-ಮತ್ತು-ಎಸ್‌ಎಂಎಸ್ ಆಯ್ಕೆಗಳ ಜೊತೆಗೆ ಎಸ್‌ಟಿವಿಗಳು

ಪ್ರತಿ ತಿಂಗಳು ಅದೇ ದಿನಾಂಕದಂದು ನವೀಕರಿಸಬಹುದಾದ ವಾಯ್ಸ್-ಮತ್ತು-ಎಸ್‌ಎಂಎಸ್ ಮತ್ತು ಆ ದಿನಾಂಕವು ನಿರ್ದಿಷ್ಟ ತಿಂಗಳಲ್ಲಿ ಅಸ್ತಿತ್ವದಲ್ಲಿಲ್ಲದಿದ್ದಾಗ, ಆ ತಿಂಗಳ ಕೊನೆಯ ದಿನಾಂಕದಂದು ನವೀಕರಣ ಮಾಡಬೇಕು.

ನಿಯಮಿತ ವಾಯ್ಸ್, ಎಸ್‌ಎಂಎಸ್ ಮತ್ತು ಡೇಟಾ ಯೋಜನೆಗಳಿಗೆ ನೀಡಲಾಗುವ ದೀರ್ಘಾವಧಿಯ ವಾಯ್ಸ್-ಮತ್ತು-ಎಸ್‌ಎಂಎಸ್-ಮಾತ್ರ ಎಸ್‌ಟಿವಿಗಳಂತೆಯೇ, ದೀರ್ಘಾವಧಿಯ ವಾಯ್ಸ್-ಮತ್ತು-ಎಸ್‌ಎಂಎಸ್-ಮಾತ್ರ ಎಸ್‌ಟಿವಿಗಳು

Mobile Recharge: ಟ್ರಾಯ್ ಹೊಸ ನಿಯಮಗಳನ್ನು ಪರಿಚಯಿಸಲು ಕಾರಣವೇನು ?

2024ರ ಟೆಲಿಕಾಂ ಗ್ರಾಹಕ ರಕ್ಷಣೆ (ಹನ್ನೆರಡನೇ ತಿದ್ದುಪಡಿ) ನಿಯಮಗಳು ನಂತರ ವಾಯ್ಸ್-ಮತ್ತು-ಎಸ್‌ಎಂಎಸ್-ಮಾತ್ರ ಎಸ್‌ಟಿವಿಗಳ ಲಭ್ಯತೆ ಸೀಮಿತವಾಗಿದೆ ಎಂದು ಟ್ರಾಯ್ ಗಮನಿಸಿದೆ. ಅಂದರೆ ಕೆಲವರು ಮಾತನಾಡುವುದಕ್ಕೆ ಮಾತ್ರ ರೀಚಾರ್ಜ್ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದಾರೆ. ಆದರೆ ಮೊಬೈಲ್ ರೀಚಾರ್ಜ್‌ ಆಪರೇಟರ್‌ಗಳು ಕಡಿಮೆ ಅವಧಿಯ ಆಯ್ಕೆಗಳನ್ನು ನೀಡುತ್ತಿದ್ದಾರೆ, ಇದು ಕಡಿಮೆ ಆದಾಯದ ಗ್ರಾಹಕರಿಗೆ ಸೀಮಿತ ಕೈಗೆಟುಕುವ ಆಯ್ಕೆಗಳನ್ನು ನೀಡಬಹುದು ಎಂದು ಹೇಳಲಾಗಿದೆ.

ಇದೀಗ ಟ್ರಾಯ್ ಮಾಡಿರುವ ಹೊಸ ಬದಲಾವಣೆಗಳಿಂದಾಗಿ ಗ್ರಾಹಕರಿಗೆ ಅವರ ಅವಶ್ಯಕತೆ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ರೀಚಾರ್ಜ್‌ಗಳನ್ನು ಆಯ್ಕೆ ಮಾಡಲು ಹೆಚ್ಚು ಆಯ್ಕೆಗಳು ಸಿಗಲಿವೆ. ವಿಶೇಷವಾಗಿ ಅವರ ಮೊಬೈಲ್ ಯೋಜನೆಗಳೊಂದಿಗೆ ಡೇಟಾ / ಇಂಟರ್‌ನೆಟ್ ಸಹ ತೆಗೆದುಕೊಳ್ಳಬೇಕಾದ ಅಗತ್ಯವಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+