Get Updates
Get notified of breaking news, exclusive insights, and must-see stories!

ಸನಾತನ ಧರ್ಮ ವಿವಾದ: ಪುತ್ರನ ಬೆನ್ನಿಗೆ ನಿಂತ ಎಂಕೆ ಸ್ಟಾಲಿನ್- ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ತಮಿಳುನಾಡು ಸಿಎಂ

ಚೆನ್ನೈ, ಸೆಪ್ಟೆಂಬರ್‌ 07: ಸನಾತನ ಧರ್ಮ ವಿವಾದದಲ್ಲಿ ಸಿಲುಕಿರುವ ಉದಯನಿಧಿ ಅವರ ಬೆಂಬಲಕ್ಕೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ನಿಂತಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿರುವ ಸ್ಟಾಲಿನ್‌, 'ನಕಲಿ ಸುದ್ದಿಗಳನ್ನು ನಂಬಿದ್ದೀರಾ' ಎಂದು ಕೇಳಿದ್ದಾರೆ.

ಸಮಾನತೆಯನ್ನು ಸಾರದ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್‌ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಬಿಜೆಪಿ ಸಚಿವರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ.

MK Stalin backs Udhayanidhi’s Sanatana Dharma remarks, questions PM Modi for believing ‘fake news’

ಈ ಕುರಿತು ಟ್ವೀಟ್‌ ಮಾಡಿರುವ ಎಂಕೆ ಸ್ಟಾಲಿನ್‌, 'ಪರಿಶಿಷ್ಟ ಜಾತಿಗಳು, ಬುಡಕಟ್ಟು ಜನಾಂಗಗಳು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಸನಾತನ ತತ್ವಗಳ ಕುರಿತು ಉದಯನಿಧಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಉದಯನಿಧಿ ಅವರು ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಹೀಗಳೆಯುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

MK Stalin backs Udhayanidhi’s Sanatana Dharma remarks, questions PM Modi for believing ‘fake news’

ಅವರ ಹೇಳಿಕೆಯನ್ನು ಬಿಜೆಪಿ ತಿರುಚಿದೆ. 'ಜನಾಂಗೀಯ ಹತ್ಯೆ'ಗೆ ಅವರು ಕರೆ ನೀಡಿಲ್ಲ. ತಾರತಮ್ಯದ ವಿರುದ್ಧ ಮಾತ್ರ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಗೌರವಾನ್ವಿತ ಪ್ರಧಾನಿ, ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಸತ್ಯವನ್ನು ಪರಿಶೀಲಿಸಲು ಮನಸ್ಸಿಲ್ಲ. ಇದನ್ನು ಮಾಡಲು ಅವರಿಗೆ ಎಲ್ಲ ರೀತಿಯ ಅವಕಾಶಗಳಿವೆ. ಎಲ್ಲ ತರದ ಸಂಪನ್ಮೂಲಗಳನ್ನು ಅವರು ಹೊಂದಿದ್ದಾರೆ. ಆದರೂ, ಸತ್ಯವನ್ನು ಅರಿಯುವ ಗೋಜಿಗೆ ಅವರು ಹೋಗಿಲ್ಲ. ಸತ್ಯವನ್ನು ನಿರ್ಲಕ್ಷಿಸಿ ನಕಲಿ ನಿರೂಪಣೆಗಳ ಮೇಲೆ ಆಧಾರವಾಗಿರುವುದು ನನಗೆ ಬೇಸರ ತಂದಿದೆ ಎಂದು ಸ್ಟಾಲಿನ್‌ ಹೇಳಿದ್ದಾರೆ.

ಉದಯನಿಧಿ ಅವರ ಹೇಳಿಕೆಗಳಿಗೆ ಸರಿಯಾದ ಪ್ರತಿಕ್ರಿಯೆಯ ಅಗತ್ಯವಿದೆ ಎಂಬುದಾಗಿ ಪ್ರಧಾನಿ ತಿಳಿಸಿದ್ದಾರೆ ಎಂದು ಕೇಳಿ ಬೇಸರವಾಗಿದೆ. ಉದಯ್ ಬಗ್ಗೆ ಹರಡಿರುವ ಸುಳ್ಳುಗಳ ಬಗ್ಗೆ ಪ್ರಧಾನಿಗೆ ತಿಳಿದಿಲ್ಲವೇ ಅಥವಾ ಅವರು ಹಾಗೆ ತಿಳಿಯಲು ಇಷ್ಟಪಡುತ್ತಾರೆಯೇ? ಸ್ಟಾಲಿನ್ ಕೇಳಿದ್ದಾರೆ.

ಯಾವುದೇ ಭರವಸೆಗಳನ್ನು ಈಡೇರಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸನಾತನ ಧರ್ಮದ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಕಳೆದ 9 ವರ್ಷಗಳಿಂದ ಪ್ರಧಾನಿ ಮೋದಿ ಅವರು ಯಾವುದೇ ಉತ್ತಮ ಕಾರ್ಯಗಳನ್ನು ಮಾಡಿಲ್ಲ. ನೋಟು ಅಮಾನ್ಯ ಮಾಡಿದ್ದಾರೆ. ಹೊಸ ಸಂಸತ್‌ ಭವನದಲ್ಲಿ ಸಿಂಗೋಲ್‌ ಅನ್ನು ಇರಿಸಿದ್ದಾರೆ. ಇಂಡಿಯಾದ ಹೆಸರನ್ನು ಭಾರತ್‌ ಎಂದು ಬದಲಾಯಿಸಲು ಹೊರಟಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+