Mizoram Election Exit Poll Results 2023: ಆಡಳಿತಾರೂಢ ಪಕ್ಷಕ್ಕೆ ಮುಖಭಂಗ: ಅತಂತ್ರ ಫಲಿತಾಂಶದಲ್ಲಿ ಅಧಿಕಾರ ಯಾರಿಗೆ?

ಮಿಜೋರಾಂ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಇಂಡಿಯಾ ಟಿವಿ- ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ನಿರೀಕ್ಷೆ ಮಾಡಲಾಗಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್‌ (ಎಂಎನ್‌ಎಫ್‌) ಭಾರಿ ಮುಖಭಂಗವಾಗಿದ್ದು, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಇಂಡಿಯಾ ಟಿವಿ- ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಪ್ರಕಾರ ಮಿಜೋರಾಂ ವಿಧಾನಸಭೆಯಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್‌ (ಎಂಎನ್‌ಎಫ್‌) 14-18 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) 12-16 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿದೆ. ಕಾಂಗ್ರೆಸ್ ಇಲ್ಲಿ 8-10 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿಗೆ 0-2 ಸ್ಥಾನಗಳು ಸಿಗಬಹುದು ಎನ್ನಲಾಗಿದೆ.

Mizoram Election Exit Poll Results 2023: MJM vs ZPM, Congress King Maker, India TV-CNX Prediction

ಮಿಜೋರಾಂನಲ್ಲಿ ಸರ್ಕಾರ ರಚನೆಗೆ 21 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಸಮೀಕ್ಷೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಕಾಂಗ್ರೆಸ್‌ನ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.

ಮುಖ್ಯಮಂತ್ರಿ ಝೋರಮ್‌ತಂಗಾಗೆ ಮುಖಭಂಗ

2018 ವಿಧಾನಸಭಾ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್‌ (ಎಂಎನ್‌ಎಫ್‌) 26 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಝೋರಮ್‌ತಂಗಾ ಸದ್ಯ ಮಿಜೋರಾಂನ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸಿದ್ದರು. ಮತ್ತೊಮ್ಮೆ ಸಿಎಂ ಆಗುವ ಅವರ ಆಸೆಯನ್ನು ಸಮೀಕ್ಷೆಗಳು ಭಂಗಪಡಿಸಿವೆ.

40 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 174 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಝೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM), ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ಗಳಿಸಲು ವ್ಯಾಪಕ ಪ್ರಚಾರ ನಡೆಸಿದ್ದವು.

ಮಿಜೋರಾಂನಲ್ಲಿ ನವೆಂಬರ್ 7 ರಂದು ಚುನಾವಣೆ ನಡೆದಿದ್ದು, ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. 81.25% ಮಹಿಳಾ ಮತದಾರರು ಮತ ಹಾಕಿದ್ದು, ಪುರುಷ ಮತದಾರರು 80.04% ರಷ್ಟು ಮತ ಹಾಕಿದ್ದಾರೆ ಎಂದು ಮಿಜೋರಾಂನ ಮುಖ್ಯ ಚುನಾವಣಾಧಿಕಾರಿ ಕಚೇರಿ ಹೇಳಿದೆ. ಡಿಸೆಂಬರ್ 3ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+