ಕಾಂಗ್ರೆಸ್ ಅಧಿಪತ್ಯದ ಮಿಜೋರಾಂನಲ್ಲಿ ನ.28ರಂದು ಮತದಾನ
ಐಜ್ವಾಲ್, ನವೆಂಬರ್ 27: ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಪೈಕಿ, ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಬುಧವಾರ ನವೆಂಬರ್ 28ರಂದು ಮತದಾನ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಹೊರಬರಲಿದೆ.
2003ರಿಂದ ಮುಖ್ಯಮಂತ್ರಿ ಲಾಲ್ ಥಾಹಾವ್ಲಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಅಧಿಕಾರವನ್ನು ಗಳಿಸುವ ಹುಮ್ಮಸ್ಸಿನಲ್ಲಿದೆ. ಮಿಜೋರಾಂ ಅಲ್ಲದೆ, ಪಂಜಾಬ್, ಕರ್ನಾಟಕ ಹಾಗೂ ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ಮಿಜೋರಾಂನಲ್ಲಿ ಬಿಜೆಪಿ ನೇತೃತ್ವದ ಈಶಾನ್ಯದ ಡೆಮೊಕ್ರಾಟಿಕ್ ಅಲೈಯನ್ಸ್ ನ ಭಾಗವಾಗಿರುವ ಮಿಜೋ ನ್ಯಾಷನಲ್ ಫ್ರಂಟ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಕಾಣಬಹುದು.

ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ. ಕ್ರೈಸ್ತ ಸಮುದಾಯ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಕ್ರೈಸ್ತ ವಿರೋಧಿ ಎಂದೇ ಬಿಂಬಿಸಿ, ಕಾಂಗ್ರೆಸ್ ಪ್ರಚಾರ ನಡೆಸಿದೆ.
2013ರಲ್ಲಿ ಕಾಂಗ್ರೆಸ್ ಪಕ್ಷವು 40ರಲ್ಲಿ 34ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿತ್ತು. ಎಂಎನ್ಎಫ್ 5 ಸ್ಥಾನಗಳನ್ನು ಗೆದ್ದಿತ್ತು. ಮಿಜೋರಾಂ ಪೀಪಲ್ಸ್ ಕಾನ್ಫ್ ರೆನ್ಸ್ 1 ಸ್ಥಾನ ಗೆದ್ದುಕೊಂಡಿತ್ತು.
ಮಿಜೋರಾಂನಲ್ಲಿ ಸಿಎಂ ಥಾನ್ಹವ್ಲಾ ಅವರು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ, ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಈ ಬಾರಿ ಒಟ್ಟು 209 ಸ್ಪರ್ಧಿಗಳು ಕಣದಲ್ಲಿದ್ದಾರೆ. ಸಿಎಂ ಥಾನ್ಹವ್ಲಾ ಸೆರ್ಚಿಪ್ ಹಾಗೂ ಛಂಪಾಯಿ ದಕ್ಷಿಣ ಸ್ಥಾನದಲ್ಲಿ ಸ್ಪರ್ಧಿಸಿದ್ದಾರೆ.












Click it and Unblock the Notifications