Women's Reservation Bill: ಮಸೂದೆ ಬಗ್ಗೆ ವಿವಿಧ ಪಕ್ಷಗಳ ನಾಯಕಿಯರು ಹೇಳಿದ್ದೇನು?
ಬೆಂಗಳೂರು, ಸೆಪ್ಟಂಬರ್ 21: ಕೇಂದ್ರ ಸರ್ಕಾರ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಜಾರಿಗೆ ತಂದಿದ್ದರ ಬಗ್ಗೆ ಕಾಂಗ್ರೆಸ್‌ನ ಅಮೀ ಯಾಜ್ಞಿಕ್ ಅವರು, ಜಯಾ ಬಚ್ಚನ್, ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ವಿವಿಧ ಪಕ್ಷಗಳ ಮಹಿಳಾ ನಾಯಕಿಯರು ಮಿಶ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಕೆಲವು ಷರತ್ತು, ಎಚ್ಚರಿಕೆಗಳೊಂದಿಗೆ ಮಸೂದೆಯನ್ನು ಜಾರಿಗೆ ತಂದಿದೆ. ಅಂದರೆ ನಿಮ್ಮ ಉದ್ದೇಶ ನ್ಯಾಯಯುತವಾಗಿಲ್ಲ. ಮಹಿಳೆಯರಿಗೆ ಸಬಲೀಕರಣವನ್ನು ನೀಡಲು ನೀವು ಬಯಸುವುದಿಲ್ಲ ಎಂದು ಗುಜರಾತ್‌ನ ಕಾಂಗ್ರೆಸ್, ಅಮೀ ಯಾಜ್ಞಿಕ್ ಗುರುವಾರ ಅಧಿವೇಶನದಲ್ಲಿ ಆರೋಪಿಸಿದ್ದಾರೆ.

2029ರ ನಂತರ ಮಸೂದೆಯ ಅನುಷ್ಠಾನದ ಕುರಿತು ಎನ್‌ಡಿಎ ಸರ್ಕಾರವು ಒಂಬತ್ತು ವರ್ಷಗಳಿಂದ ಕೇವಲ ಬಾಯಿ ಮಾತಿನ ಮೂಲಕ ಜಾರಿ ಪ್ರಯತ್ನದಲ್ಲಿ ತೊಡಗಿತ್ತು ಎಂದು ಆರೋಪಿಸಿದರು. ವಿಂಗಡಣೆ ಮತ್ತು ಜನಗಣತಿಯ ಅಂಶಗಳು ಮಸೂದೆಯ ಮೇಲೆ ಪರಿಣಾಮ ಬೀರಲು ಏಕೆ ಅನುಮತಿಸಲಾಗಿದೆ ಎಂದು ಸದಸ್ಯರು ತಿಳಿಸಿದರು.
ಸಮಾಜವಾದಿ ಪಕ್ಷದಿಂದ ಮಸೂದೆಗೆ ಬಂಬಲ
ಮಹಿಳಾ ಮೀಸಲಾತಿ ಮಸೂದೆಯನ್ನು ಸಮಾಜವಾದಿ ಪಕ್ಷ ವಿರೋಧಿಸುವುದಿಲ್ಲ ಎಂದು ಸಮಾಜವಾದಿ ಪಾರ್ಟಿಯ ಜಯಾ ಬಚ್ಚನ್ ಅವರು ಹೇಳಿದರು. ಪಕ್ಷವು ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸಮಾಜವಾದಿ ಪಕ್ಷವು ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡು ನಾರಿ ಶಕ್ತಿ ಮಸೂದೆಯನ್ನು ಬೆಂಬಲಿಸುತ್ತದೆ. ಆದರೆ ಕೆಲವು ಷರತ್ತುಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಮಸೂದೆಯಡಿ ಮೀಸಲಾತಿಯೊಳಗೆ ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಶೇಕಡ 15-20ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ಅವರು ಸಮಾಜವಾದಿ ಪಕ್ಷದ ಪರವಾಗಿ ವಿನಂತಿಸಿಕೊಂಡರು.

ಮಸೂದೆ ಟೀಕಿಸಿದ ಪ್ರಿಯಾಂಕಾ ಚತುರ್ವೇದಿ
ಇನ್ನು ಮತ್ತೊಬ್ಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಮಹಿಳಾ ಮೀಸಲಾತಿ ಮಸೂದೆಯ 2029 ಅನುಷ್ಠಾನ ಬಗ್ಗೆ ಟೀಕೆ ಮಾಡಿದ್ದಾರೆ. 2010ರ ಮಹಿಳಾ ಮಸೂದೆಯನ್ನು ಮುಂದಿನ ಲೋಕಸಭಾ ಚುನಾವಣೆಯಿಂದ ಜಾರಿಗೆ ತರಲಾಗುವುದು ಎಂದು ಹೇಳುವ ಮೂಲಕ ಅವರ ಸಂಸತ್ತಿನ ಗಮನ ಸೆಳೆದರು.
73 ಮತ್ತು 74 ನೇ ತಿದ್ದುಪಡಿಗಳು ಸಹ ಆಗಿಲ್ಲ ಮತ್ತು ತಕ್ಷಣವೇ ಕಾರ್ಯಗತಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಡೀ ಪ್ರಪಂಚದಲ್ಲಿ 2010ರ ಮಹಿಳಾ ಮಸೂದೆಯಂತಹ ಕಾನೂನು ಇರಲಿಲ್ಲ. ಇದು ಜಾರಿಗೆ ಬರಬೇಕಿದೆ ಎಂದರು.
ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಐದು ದಿನಗಳ ವಿಶೇಷ ಸಂಸತ್ತು ಅಧಿವೇಶವು ನಾಳೆ ಶುಕ್ರವಾರ ಅಂತ್ಯಗೊಳ್ಳಲಿದೆ. ಮಂಗಳವಾರವೇ ಈ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಮೂಸೂದೆ ಜಾರಿಗೆ ತರಲಾಗಿದೆ. ಇದಕ್ಕೆ ಎಲ್ಲರ ಸಮ್ಮುಖದಲ್ಲಿ ಅನುಮೋದನೆ ನೀಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಒಪ್ಪಿಗೆ ಸೂಚಿಸುವ ಜೊತೆಗೆ ಅಪಸ್ವರ ತೆಗೆದಿವೆ. ಇದು ಒಬಿಸಿ ಕೋಟಾ ಇಲ್ಲದೇ ಪೂರ್ಣವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ. ಹಲವು ನಾಯಕ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.












Click it and Unblock the Notifications