ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರು

|
Google Oneindia Kannada News

ಕೊಚ್ಚಿ, ಸೆಪ್ಟೆಂಬರ್ 14: ಅತ್ಯಾಚಾರ ಸಂತ್ರಸ್ಥೆಯ ಗುರುತು ಪತ್ತೆ ಆಗುವ ಯಾವುದೇ ಮಾಹಿತಿಯನ್ನೂ ಯಾರೂ ಹೊರಹಾಕಬಾರದು ಎಂದು ಕಾನೂನಿದೆ ಆದರೆ ಕ್ರೈಸ್ತ ಮಿಷನರಿ ಈ ಕಾನೂನು ಉಲ್ಲಂಘಿಸಿದ್ದು, ಕೇರಳ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ..

ಕೇರಳದಾದ್ಯಂತ ಬಿರುಗಾಳಿ ಎಬ್ಬಿಸಿರುವ ಕ್ರೈಸ್ತ ಸನ್ಯಾಸಿಸಿ (ನನ್) ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ಕರೆದಿದ್ದ ಜೀಸಸ್ ಮಿಷನರಿಗಳು ಅತ್ಯಾಚಾರ ಸಂತ್ರಸ್ಥೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣ

ಬಿಶಪ್ ಫ್ರಾಂಕೋ ವಿರುದ್ಧ ಅತ್ಯಾಚಾರ ಮಾಡಿರುವ ಕ್ರೈಸ್ತ ಸನ್ಯಾಸಿನಿ (ನನ್)ಯು ಆರೋಪಿ ಬಿಶಪ್ ಫ್ರಾಂಕೋ ಮುಲಕ್ಕಲ್ ಅವರ ಪಕ್ಕದಲ್ಲೇ ಕಾರ್ಯಕ್ರಮವೊಂದರಲ್ಲಿ ಕೂತಿರುವ ಚಿತ್ರವನ್ನು ಮಿಷನರಿ ಬಿಡುಗಡೆ ಮಾಡಿದೆ. ಇದು ಮೇ 23 2015ರಲ್ಲಿ ತೆಗೆದ ಚಿತ್ರ ಎಂದು ಮಿಷನರಿ ಹೇಳಿದೆ.

ಅತ್ಯಾಚಾರ ಆರೋಪ ಮಾಡಿರುವ ಕ್ರೈಸ್ತ ಸನ್ಯಾಸಿನಿ ತನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ನೀಡಿರುವ ದೂರಿನಲ್ಲಿ ಹೇಳಿರುವ ಮರುದಿನವೇ ಈ ಚಿತ್ರವನ್ನು ತೆಗೆಯಲಾಗಿದೆ. ಈ ಚಿತ್ರದಲ್ಲಿ ಇಬ್ಬರೂ ಆರಾಮವಾಗಿ ಕೂತಿದ್ದಾರೆ. ತನ್ನ ಮೇಲೆ ಒಂದು ದಿನದ ಹಿಂದೆ ಅತ್ಯಾಚಾರ ಮಾಡಿದ ವ್ಯಕ್ತಿಯ ಜೊತೆಗೆ ಯಾವ ಹೆಣ್ಣಾದರೂ ಹೋಗುತ್ತಾಳೆಯೇ, ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಮಿಷನರಿ ಹೇಳಿದೆ.

ಸಂತ್ರಸ್ಥೆಯ ಗುರುತು ಬಹಿರಂಗ ಪಡಿಸುವಂತಿಲ್ಲ

ಸಂತ್ರಸ್ಥೆಯ ಗುರುತು ಬಹಿರಂಗ ಪಡಿಸುವಂತಿಲ್ಲ

ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ಥೆಯ ಚಿತ್ರಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ. ಚಿತ್ರ ಮಾತ್ರವೇ ಅಲ್ಲ ಸಂತ್ರಸ್ಥೆಯ ಗುರುತು ಪತ್ತೆ ಆಗಬಹುದಾದ ಯಾವುದೇ ವಿಷಯವನ್ನು ಬಹಿರಂಗಪಡಿಸುವಂತಿಲ್ಲ. ಹಾಗೆ ಮಾಡಿದಲ್ಲಿ ಸೆರೆವಾಸ ಹಾಗೂ ದಂಡವನ್ನು ತೆರಬೇಕಾಗುತ್ತದೆ.

ಸಾಕ್ಷ್ಯದ ಕಾರಣಕ್ಕೆ ಚಿತ್ರ ಬಹಿರಂಗ

ಸಾಕ್ಷ್ಯದ ಕಾರಣಕ್ಕೆ ಚಿತ್ರ ಬಹಿರಂಗ

ಆದರೆ ಮಿಷನರಿಯು ಅತ್ಯಾಚಾರ ಸಂತ್ರಸ್ಥೆಯ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಸಾಕ್ಷ್ಯದ ಕಾರಣಕ್ಕೆ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದ್ದು, ಈ ಚಿತ್ರ ಸಾರ್ವಜನಿಕವಾದರೆ ನಾವು ಜವಾಬ್ದಾರರಲ್ಲ ಎಂದು ಮಿಷನರಿ ಹೇಳಿದೆ.

ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್‌ಗೆ ಪೊಲೀಸ್ ಸಮನ್ಸ್‌ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್‌ಗೆ ಪೊಲೀಸ್ ಸಮನ್ಸ್‌

2014-2016ರ ನಡುವೆ ಅತ್ಯಾಚಾರ

2014-2016ರ ನಡುವೆ ಅತ್ಯಾಚಾರ

ಕ್ರೈಸ್ತ ಸನ್ಯಾಸಿನಿಯು, ಬಿಶಪ್ ಫ್ರಾಂಕೋ ಮುಲಕ್ಕಲ್ 2014-2016 ರ ನಡುವೆ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಕ್ರೈಸ್ತ ಸನ್ಯಾಸಿನಿ ಪರ ಹಾಗೂ ಬಿಶಪ್ ಪರ ಹಲವರು ಅಖಾಡಕ್ಕೆ ಇಳಿದಿದ್ದು, ಕೇರಳದಾದ್ಯಂತ ಈ ಪ್ರಕರಣ ವಿವಾದ ಸೃಷ್ಠಿಸಿದೆ.

ಆರೋಪಿ ಬಿಶಪ್ ಅನ್ನು ಬಂಧಿಸಿಲ್ಲ

ಆರೋಪಿ ಬಿಶಪ್ ಅನ್ನು ಬಂಧಿಸಿಲ್ಲ

ಬಿಶಪ್‌ ಫ್ರಾಂಕೋನನ್ನು ಕೂಡಲೇ ಬಂಧಿಸಬೇಕು ಎಂದು ಹಲವು ಕ್ರೈಸ್ತ ಸನ್ಯಾಸಿನಿಯರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇನ್ನು ಕೆಲವು ಬಿಶಪ್ ಪರವಾಗಿ ಪ್ರತಿಭಟನೆ, ಸುದ್ದಿಗೋಷ್ಠಿಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಬಿಶಪ್‌ ಫ್ರಾಂಕೋಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರ

English summary
Missionaries of Jesus releases the picture of Rape survivor Nun with accused rapist Bishop. Bishop was summonsed by police to attend investigation about the case on September 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X