ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ಕ್ಕೆ ಮಿಷನ್‌ ಚಂದ್ರಯಾನ ಪ್ರಾರಂಭ: ಇಸ್ರೋ ಅಧ್ಯಕ್ಷ ಸೋಮನಾಥ್‌

|
Google Oneindia Kannada News

ನವದೆಹಲಿ, ಅಕ್ಟೋಬರ್‌ 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಎಸ್. ಸೋಮನಾಥ್ ಅವರು ಮುಂದಿನ ವರ್ಷ ಜೂನ್‌ನಲ್ಲಿ ತನ್ನ ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಭಾನುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋಮನಾಥ್, ಮಿಷನ್ ಚಂದ್ರಯಾನ- 3 ಮುಂದಿನ ವರ್ಷದ ಜೂನ್‌ನಲ್ಲಿ ಉಡಾವಣೆ ಮಾಡಲು ಬಹುತೇಕ ಸಿದ್ಧವಾಗಿದೆ. ಚಂದ್ರಯಾನ-3 ಬಹುತೇಕ ಸಿದ್ಧವಾಗಿದೆ. ಅಂತಿಮ ಏಕೀಕರಣ ಮತ್ತು ಪರೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಇನ್ನೂ, ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಉಳಿದಿವೆ, ಆದ್ದರಿಂದ ನಾವು ಅದನ್ನು ಸ್ವಲ್ಪ ಸಮಯದ ನಂತರ ಮಾಡಲು ಬಯಸುತ್ತೇವೆ. ಎರಡು ಸ್ಲಾಟ್‌ಗಳು ಫೆಬ್ರವರಿಯಲ್ಲಿ ಮತ್ತು ಇನ್ನೊಂದು ಜೂನ್‌ನಲ್ಲಿ ಲಭ್ಯವಿವೆ. ಉಡಾವಣೆಗಾಗಿ ನಾವು ಜೂನ್ (2023) ಸ್ಲಾಟ್ ಅನ್ನು ತೆಗೆದುಕೊಳ್ಳಲು ಬಯಸುತ್ತೇವೆ ಎಂದು ಅವರು ಹೇಳಿದರು.

ಇಸ್ರೋದಿಂದ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆಇಸ್ರೋದಿಂದ 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆ

ಭಾನುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಸಂವಹನ ಉಪಗ್ರಹಗಳನ್ನು ಇಸ್ರೋದ ಅತ್ಯಂತ ಭಾರವಾದ ರಾಕೆಟ್, ಎಲ್‌ವಿಎಂ3-ಎಂ2/ಒನ್‌ವೆಬ್ ಇಂಡಿಯಾ-1 ಮೂಲಕ ಉಡಾವಣೆ ಮಾಡಿದ ನಂತರ ಡಾ ಎಸ್ ಸೋಮನಾಥ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

36 ಉಪಗ್ರಹಗಳ ಪೈಕಿ 16 ಉಪಗ್ರಹಗಳನ್ನು ಸುರಕ್ಷಿತವಾಗಿ ಬೇರ್ಪಡಿಸಲಾಗಿದ್ದು, ಉಳಿದ 20 ಉಪಗ್ರಹಗಳನ್ನು ಬೇರ್ಪಡಿಸಲಾಗುವುದು. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಭಾರ್ತಿ ಬೆಂಬಲಿತ ಒನ್‌ ವೆಬ್‌, ಲೋ ಅರ್ಥ್ ಆರ್ಬಿಟ್ ಉಪಗ್ರಹ ಸಂವಹನ ಕಂಪನಿಯೊಂದಿಗೆ ಎರಡು ಉಡಾವಣಾ ಸೇವಾ ಒಪ್ಪಂದಗಳಿಗೆ ಸಹಿ ಹಾಕಿದೆ.

ಉಡಾವಣೆ ಸ್ವಲ್ಪ ಸಮಯದ ನಂತರ ಡೇಟಾ

ಉಡಾವಣೆ ಸ್ವಲ್ಪ ಸಮಯದ ನಂತರ ಡೇಟಾ

ನಾವು ಈಗಾಗಲೇ (ದೀಪಾವಳಿ) ಆಚರಣೆಯನ್ನು ಪ್ರಾರಂಭಿಸಿದ್ದೇವೆ. 36 ಉಪಗ್ರಹಗಳಲ್ಲಿ 16 ಯಶಸ್ವಿಯಾಗಿ ಬೇರ್ಪಟ್ಟಿವೆ. ಉಳಿದ 20 ಉಪಗ್ರಹಗಳನ್ನು ಬೇರ್ಪಡಿಸಲಾಗುವುದು. ಉಡಾವಣೆ ಸ್ವಲ್ಪ ಸಮಯದ ನಂತರ ಡೇಟಾ ಬರಲಿದೆ ಮತ್ತು ವೀಕ್ಷಣೆಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ತಿಳಿಸಿದ್ದಾರೆ.

ಇಂಧನ ಖಾಲಿ, ಸಿಗ್ನಲ್ ಖತಂ; ಭಾರತದ ಮಂಗಳಯಾನ ಅಂತಿಮಯಾತ್ರೆ?ಇಂಧನ ಖಾಲಿ, ಸಿಗ್ನಲ್ ಖತಂ; ಭಾರತದ ಮಂಗಳಯಾನ ಅಂತಿಮಯಾತ್ರೆ?

ವಾಣಿಜ್ಯ ಮಾರುಕಟ್ಟೆಗೆ ಎಲ್‌ವಿಎಂ 3 ಬರಬೇಕೆಂಬ ಬಯಕೆ

ವಾಣಿಜ್ಯ ಮಾರುಕಟ್ಟೆಗೆ ಎಲ್‌ವಿಎಂ 3 ಬರಬೇಕೆಂಬ ಬಯಕೆ

ಈ ಮೈಲಿಗಲ್ಲಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಎಸ್ ಸೋಮನಾಥ್, ಇದೊಂದು ಐತಿಹಾಸಿಕ ಕಾರ್ಯವಾಗಿದೆ. ನಮ್ಮ ಉಡಾವಣೆಯನ್ನು ಕಾರ್ಯಗತಗೊಳಿಸಲು ವಾಣಿಜ್ಯ ಡೊಮೇನ್ ಅನ್ನು ಅನ್ವೇಷಿಸಲು ಮತ್ತು ವಿಸ್ತರಿಸಲು ನ್ಯೂ ಸ್ಟೇಸ್‌ ಇಂಡಿಯಾ ಲಿಮಿಟೆಡ್‌ ವಾಹನಗಳು ಮುಂಚೂಣಿಯಲ್ಲಿದ್ದು, ವಾಣಿಜ್ಯ ಮಾರುಕಟ್ಟೆಗೆ ಎಲ್‌ವಿಎಂ 3 ಬರಬೇಕೆಂದು ಅವರು ಬಯಸಿದ್ದರಿಂದ ಪ್ರಧಾನಿ ಮೋದಿಯವರ ಬೆಂಬಲದಿಂದಾಗಿ ಇದು ಸಾಧ್ಯವಾಯಿತು ಎಂದರು.

ಎಲ್‌ವಿಎಂ3 ರಾಕೆಟ್ 36 ಉಪಗ್ರಹಗಳ ಹೊತ್ತೊಯ್ಯಲಿದೆ

ಎಲ್‌ವಿಎಂ3 ರಾಕೆಟ್ 36 ಉಪಗ್ರಹಗಳ ಹೊತ್ತೊಯ್ಯಲಿದೆ

ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಉಡಾವಣೆಯ ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷರು ಈ ಹಿಂದೆ ತಿರುಪತಿ ಜಿಲ್ಲೆಯ ಸುಳ್ಳೂರುಪೇಟೆಯಲ್ಲಿರುವ ಶ್ರೀ ಚೆಂಗಾಲಮ್ಮ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು. ಇಸ್ರೋದ ಎಲ್‌ವಿಎಂ3 ರಾಕೆಟ್ ಖಾಸಗಿ ಸಂವಹನ ಸಂಸ್ಥೆ ಒನ್‌ ವೆಬ್‌ನ 36 ಉಪಗ್ರಹಗಳನ್ನು ಹೊತ್ತೊಯ್ಯಲಿದೆ ಎಂದು ಸೋಮನಾಥ್ ಶನಿವಾರ ಸಂಜೆ ತಿಳಿಸಿದ್ದಾರೆ.

ಸಂವಹನಕ್ಕಾಗಿ 36 ಉಪಗ್ರಹಗಳು

ಸಂವಹನಕ್ಕಾಗಿ 36 ಉಪಗ್ರಹಗಳು

ಉಡಾವಣೆಗೆ 24 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ. 36 ಒನ್‌ ವೆಬ್‌ ಉಪಗ್ರಹಗಳ ಮತ್ತೊಂದು ಸರಣಿಯನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ಎಲ್‌ವಿಎಂ 3 ಉಡಾವಣೆ ಮಾಡಲಿದೆ. ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಕೌಂಟ್ ಡೌನ್ ಪ್ರಕ್ರಿಯೆ ಮುಂದುವರಿಯಲಿದೆ. ಇಂದು ಮಧ್ಯರಾತ್ರಿ 00.07ಕ್ಕೆ ಎರಡನೇ ಉಡಾವಣಾ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಉಡಾವಣೆಯಾಗಿದೆ. ಯುಕೆ ಜೊತೆಗಿನ 108 ಉಪಗ್ರಹಗಳ ಒಪ್ಪಂದದ ಭಾಗವಾಗಿ ಮೊದಲ ಹಂತದಲ್ಲಿ 36 ಉಪಗ್ರಹಗಳೊಂದಿಗೆ ಜಿಎಸ್ಎಲ್ವಿ ಮಾರ್ಕ್-3 ಅನ್ನು ಉಡಾವಣೆ ಮಾಡಲಾಗುತ್ತಿದೆ. ಮೂವತ್ತಾರು ಉಪಗ್ರಹಗಳು ಸಂಪೂರ್ಣವಾಗಿ ಸಂವಹನಕ್ಕಾಗಿ ಮಾಡಲಾಗಿದೆ. ಈ ವರ್ಷ ಪಿಎಸ್‌ಎಲ್‌ವಿ ಮತ್ತು ಎಸ್‌ಎಲ್‌ವಿ ರಾಕೆಟ್‌ಗಳ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.

English summary
Indian Space Research Organization (ISRO) Chairman Dr.S. Somnath said on Sunday that it is likely to launch its Chandrayaan-3 mission in June next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X