ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ 8 ತಿಂಗಳಲ್ಲಿ 41 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ: ಸದಾನಂದಗೌಡ

By Nayana
|
Google Oneindia Kannada News

ಬೆಂಗಳೂರು, ಜು.4: ಎಂಟು ತಿಂಗಳಲ್ಲಿ ದೇಶದಲ್ಲಿ 41 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. 2017ರ ಸೆಪ್ಟೆಂಬರ್‌ ತಿಂಗಳಿಂದ 2018ರ ಏಪ್ರಿಲ್‌ ತಿಂಗಳವರೆಗೆ 41.26 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ರಾವಿಡೆಂಟ್‌ ಫಂಡ್‌ ಮತ್ತು ಇಎಸ್‌ಐಗಳಿಂದ ದೊರೆತಿರುವ ಮಾಹಿತಿ ಆಧಾರದ ಮೇಲೆ ಈ ಸಂಖ್ಯೆಯನ್ನು ನಿರ್ಧರಿಸಲಾಗಿದೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೃಷ್ಟಿಯಾಗಿರುವ ಉದ್ಯೋಗಗಳ ನಿಖರ ಮಾಹಿತಿ ಈ ವರ್ಷದ ಡಿಸೆಂಬರ್‌ ವೇಳೆಗೆ ಲಭ್ಯವಾಗಲಿದೆ.

ಕರ್ನಾಟಕ ಪೊಲೀಸ್ ಇಲಾಖೇಲಿ 2113 ಪುರುಷ- ಮಹಿಳಾ ಕಾನ್ಸ್ ಟೇಬಲ್ ಹುದ್ದೆಗಳುಕರ್ನಾಟಕ ಪೊಲೀಸ್ ಇಲಾಖೇಲಿ 2113 ಪುರುಷ- ಮಹಿಳಾ ಕಾನ್ಸ್ ಟೇಬಲ್ ಹುದ್ದೆಗಳು

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿಂದ ನಿಯಮಿತವಾಗಿ ಉದ್ಯೋಗ ಹೆಚ್ಚಳ ಬಗ್ಗೆ ಅಂದಾಜು ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆ ವ್ಯವಸ್ಥೆಯನ್ನು ಆಧರಿಸಿ ಕಳೆದ ಏಪ್ರಿಲ್‌ ತಿಂಗಳವರೆಗಿನ ಎಂಟು ತಿಂಗಳ ಅವಧಿಯಲ್ಲಿ 41.26 ಲಕ್ಷ ಉದ್ಯೋಗ ಸೃಷ್ಟಿಯಾಗಿರುವ ಕುರಿತು ಮಾಹಿತಿ ನೀಡಲಾಗಿದೆ ಎಂದರು.

Ministry of planning claims 41 lakh jobs created in last 8 months

ಬೇರೇ ಬೇರೆ ರಾಜ್ಯಗಳಲ್ಲಿ ಕೇದ್ರ ಸರ್ಕಾರ ಕೈಗೆತ್ತಿಕೊಂಡಿರುವ ರೂ.150 ಕೋಟಿಗಿಂತ ಹೆಚ್ಚು ವೆಚ್ಚದ ಯೋಜನೆಗಳ ಜಾರಿಯ ಉಸ್ತುವಾರಿ ನೋಡಿಕೊಳ್ಳುವುದು ತಮ್ಮ ಇಲಾಖೆಯ ಹೊಣೆಗಾರಿಕೆಯಾಗಿದ್ದು, ಅದಕ್ಕಾಗಿ ಆನ್‌ಲೈನ್‌ ಕಂಪ್ಯೂಟರ್‌ ಮಾನಿಟರಿಂಗ್‌ ಸಿಸ್ಟಮ್‌ ಅಳವಡಿಸಲಾಗಿದೆ. ಈ ಸಮರ್ಪಕ ವ್ಯವಸ್ಥೆಯಿಂದಾಗಿ ಯೋಜನೆಗಳನ್ನು ನಿಗದಿತ ಸಮಯದೊಳಗೆ ಮತ್ತು ನಿಗದಿತ ವೆಚ್ಚದೊಳಗೆ ಮುಗಿಸುವ ಪ್ರಮಾಣ ಹೆಚ್ಚಳವಾಗಿದೆ.

English summary
Union minister of planning and statistics has claimed that there were 41 lakh jobs created between September 2017 to April 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X