ಬೆಂಗಳೂರು ಏರ್ ಶೋ: ರಕ್ಷಣಾ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟ

ನವದೆಹಲಿ, ಡಿಸೆಂಬರ್ 10: ಬೆಂಗಳೂರಿನಲ್ಲಿ ನಡೆಯಲಿರುವ 2021ರ ಏರೋ ಇಂಡಿಯಾ ಶೋಗೆ ಇನ್ನು 54 ದಿನಗಳ ಮಾತ್ರ ಬಾಕಿ ಉಳಿದಿದ್ದು, ರಕ್ಷಣಾ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಏರ್‌ ಶೋ ಫೆಬ್ರವರಿ 3ರಿಂದ 7ರವರೆಗೆ ಒಟ್ಟು ಐದು ದಿನಗಳ ಕಾಲ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ.

ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿದ್ದು, ಕೊರೊನಾ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ಪಾಲಿಸಬೇಕಾಗಿದೆ.ಹಾಗೆಯೇ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಪರೀಕ್ಷೆ, ಕ್ವಾರಂಟೈನ್ ನಿಯಮಗಳನ್ನು ಘೋಷಿಸಲಾಗಿದೆ. ಏರೋ ಶೋ ಸ್ಥಳದಲ್ಲಿ ಯಾವ್ಯಾವ ನಿಯಮಗಳನ್ನು ಪಾಲಿಸಬೇಕು

Ministry Of Defence Issues Guidelines For Aero India 2021

* ಮಾಸ್ಕ್ ಇಲ್ಲದಿದ್ದರೆ ಪ್ರವೇಶವಿಲ್ಲ, ಟಾಯ್ಲೆಟ್, ವಾಷ್ ಬೇಸಿನ್‌ಗಳಲ್ಲಿ ಸೆನ್ಸರ್ ಅಳವಡಿಕೆ.
* ಕರ್ನಾಟಕದಲ್ಲಿ 48 ಗಂಟೆಗಳ ಕಾಲ ಉಳಿಯುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ
* 96 ಗಂಟೆಗಳ ಮೊದಲು ಕೊರೊನಾ ಪರೀಕ್ಷೆಗೆ ಒಳಗಾಗಿರಬೇಕು, ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು
* ಬ್ಯಾಗೇಜ್ ಸ್ಕ್ಯಾನರ್ ಹಾಗೂ ಯುವಿ ಸ್ಯಾನಿಟೈಸೇಷನ್
* ಯಾರಿಗಾದರೂ ಕೊರೊನಾ ಲಕ್ಷಣಗಳಿದ್ದರೆ ಅವರನ್ನು ಐಸೊಲೇಷನ್‌ಗೆ ಒಳಪಡಿಸಲಾಗುತ್ತದೆ. ಸ್ಥಳದಲ್ಲಿ ಸ್ಯಾನಿಟೈಸರ್, ಆಕ್ಸಿಮೀಟರ್, ಮಾಸ್ಕ್, ಮೆಡಿಕಲ್ ಅಟೆಂಡೆಂಟ್, ಡಿಜಿಟಲ್ ಥರ್ಮೋಮೀಟರ್, ಪಿಪಿಇ ಸೂಟ್, ಗ್ಲೌಸ್ ಇರಿಸಿಬೇಕು.
* ಏರೋ ಶೋಗೆ ಕೆಲವೇ ಕೆಲವು ಮಂದಿಗೆ ಮಾತ್ರ ಅವಕಾಶ
* ಸಿಸಿಟಿವಿ ಕ್ಯಾಮರಾ ಬಳಕೆ ಮಾಡಿ, ಸಾಮಾಜಿಕ ಅಂತರದ ಮೇಲೆ ನಿಗಾ ಇಡಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+