• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಇಂಧನ ಬೆಲೆ ಏಕಾಏಕಿ ಏರಿಕೆಗೆ ಕಾರಣ ಕೊಟ್ಟ ಸಚಿವರು...

|

ನವದೆಹಲಿ, ಜನವರಿ 19: ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾಗಿರುವುದೇ ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗಲು ಪ್ರಮುಖ ಕಾರಣ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಕೊರೊನಾ ಸೋಂಕು ಇಂಧನ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಇಂಧನ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಇಂಧನಕ್ಕೆ ಬೇಡಿಕೆ ಹಾಗೂ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ" ಎಂದಿದ್ದಾರೆ. ಮುಂದೆ ಓದಿ...

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಜನವರಿ 19ರ ದರ ಹೀಗಿದೆಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಜನವರಿ 19ರ ದರ ಹೀಗಿದೆ

"ತಗ್ಗಿದ ಇಂಧನ ಉತ್ಪಾದನೆ"

"ಕೊರೊನಾ ಸೋಂಕು ಕಾಣಿಸಿಕೊಂಡ ನಂತರದ ಕೆಲವು ತಿಂಗಳವರೆಗೂ ಇಂಧನ ಉತ್ಪಾದನಾ ರಾಷ್ಟ್ರಗಳು ಉತ್ಪಾದನೆ ನಿಲ್ಲಿಸಿದವು. ಕೆಲವೊಂದು ರಾಷ್ಟ್ರಗಳು ಉತ್ಪಾದನಾ ಪ್ರಮಾಣವನ್ನು ತಗ್ಗಿಸಿದವು. ಇಂಧನದ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನ ಇಂಧನ ಬೆಲೆ ಏರಿಸಲು ಕಾರಣ. ಕೆಲವು ತಿಂಗಳಿಂದೀಚೆಗೆ ಇಂಧನ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

"ಹೆಚ್ಚಿನ ಮಟ್ಟದಲ್ಲಿ ಕಚ್ಚಾತೈಲ ಅವಶ್ಯಕವಿದೆ"

"ಶೇ. 80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಬೇಕಿರುವುದೇ ಸದ್ಯಕ್ಕೆ ನಮ್ಮ ಮುಂದಿರುವ ಸವಾಲು. ಇಂಧನದ ಬಳಕೆ ಹೆಚ್ಚುತ್ತಿದೆ. ಇಂಧನವನ್ನು ಅತಿ ಹೆಚ್ಚು ಬಳಕೆ ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇಂಧನದ ಮೇಲಿನ ಅವಲಂಬನೆಯನ್ನು ತಗ್ಗಿಸುವ ಸಲುವಾಗಿಯೇ ವಿದ್ಯುತ್ ವಾಹನಗಳು, ಸೋಲಾರ್ ಶಕ್ತಿ, ಎಥೆನಾಲ್ ಉತ್ಪಾದನೆ, ಹೀಗೆ ಸ್ವಾವಲಂಬಿ ಹಾದಿಯತ್ತ ಸರ್ಕಾರ ಚಿತ್ತ ನೆಟ್ಟಿದೆ" ಎಂದು ತಿಳಿಸಿದ್ದಾರೆ.

 ಇಥೆನಾಲ್ ಗೆ ಹೆಚ್ಚಾದ ಬೇಡಿಕೆ

ಇಥೆನಾಲ್ ಗೆ ಹೆಚ್ಚಾದ ಬೇಡಿಕೆ

2014ರಲ್ಲಿ ಎನ್ ಡಿಎ ಸರ್ಕಾರವಿದ್ದಾಗ, ಇಥೆನಾಲ್ ಉತ್ಪಾದನೆಗೆ ಶೇ.1ಕ್ಕೂ ಕಡಿಮೆ ಬೇಡಿಕೆ ಇತ್ತು. ಈ ಒಂದು ವರ್ಷದ ಅವಧಿಯಲ್ಲಿ ಈ ಬೇಡಿಕೆಯನ್ನು ಶೇ.9ಕ್ಕೆ ಏರಿಸಲಾಗಿದೆ ಎಂದರು.

 ಡೀಸೆಲ್ ಪೆಟ್ರೋಲ್ ದರ ಎಷ್ಟಿದೆ?

ಡೀಸೆಲ್ ಪೆಟ್ರೋಲ್ ದರ ಎಷ್ಟಿದೆ?

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸತತ ಎರಡನೇ ದಿನ ತೈಲ ದರ ಏರಿಕೆ ಮಾಡಿದ್ದು, ಸತತ ಎರಡನೇ ದಿನ ಪೆಟ್ರೋಲ್, ಡೀಸೆಲ್ ದರ ತುಟ್ಟಿಯಾಗಿದೆ. ದೆಹಲಿಯಲ್ಲಿ ಲೀಟರ್‌ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು, 85.20 ರೂಪಾಯಿಗೆ ತಲುಪಿದೆ. ಡೀಸೆಲ್ ದರದಲ್ಲೂ ಲೀಟರ್‌ಗೆ 25 ಪೈಸೆ ಏರಿಕೆ ಮಾಡಲಾಗಿದ್ದು, 75.38 ರೂಪಾಯಿ ದಾಖಲಾಗಿದೆ.

English summary
Fuel prices have gone up because of lower production in oil-producing countries due to coronavirus pandemic said Petroleum and Natural Gas Minister Dharmendra Pradhan on monday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X