ಮಣಿಪುರ, ಹಿಮಾಚಲದಲ್ಲಿ 3ರ ಪ್ರಮಾಣದ ಭೂಕಂಪನ

ಇಂಫಾಲ್, ಜೂನ್ 15: 3ರ ಪ್ರಮಾಣದ ಭೂಕಂಪನ ಗುರುವಾರ ಮಣಿಪುರದ ಚುರಾಚಂದ್ ಪುರ್ ಜಿಲ್ಲೆಯಲ್ಲಿ ಸಂಭವಿಸಿದೆ. ಬೆಳಗ್ಗೆ ಆರೂ ನಲವತ್ತೈದರ ವೇಳೆಗೆ ಭೂಕಂಪನ ಸಂಭವಿಸಿದ್ದು, ಹತ್ತು ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು.

ಅದಕ್ಕೆ ಕೆಲ ಗಂಟೆಗಳ ಮುಂಚೆ ಹಿಮಾಚಲ ಪ್ರದೇಶದ ಚಂಬಾ ವಲಯದಲ್ಲಿ ಅಲ್ಪ ಪ್ರಮಾಣದ ಭೂಕಂಪನ ಸಂಭವಿಸಿತ್ತು. ಕಳೆದ ತಿಂಗಳು ಸತತ ಮೂರು ದಿನ ಇಲ್ಲಿ ಭೂಕಂಪ ಸಂಭವಿಸಿತ್ತು. ಕಳೆದ ರಾತ್ರಿ ಹನ್ನೊಂದೂವರೆ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.1ರ ಪ್ರಮಾಣದಲ್ಲಿ ಭೂಕಂಪನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.

Mild intensity earthquakes hit Manipur, Himachal

ಯಾವುದೇ ಜೀವ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿರುವ ಚಂಬಾ ವಲಯದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಸತತ ಮೂರು ದಿನ ಅಲ್ಪ ಪ್ರಮಾಣ ಭೂಕಂಪವು ಚಂಬಾ ವಲಯದಲ್ಲಿ ಸಂಭವಿಸಿತ್ತು ಆಗ ಜನರು ಗಾಬರಿಯಾಗಿದ್ದರು. ನೂರಾ ಹನ್ನೆರಡು ವರ್ಷದ ಹಿಂದೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಇಪ್ಪತ್ತು ಸಾವಿರ ಮಂದಿ ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+