ಮತ್ತೊಂದು ವಾಯುಪಡೆ ವಿಮಾನ ಪತನ, ಪೈಲಟ್ ಗಳು ಪಾರು
ಜೈಪುರ, ಜುಲೈ 06 : ಮಂಗಳವಾರವಷ್ಟೇ ಭಾರತೀಯ ವಾಯುಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನವಾಗಿರುವ ಬೆನ್ನಲ್ಲಿಯೇ ಮತ್ತೊಂದು ಭಾರತೀಯ ವಾಯುಪಡೆಯ ವಿಮಾನ ಇಂದು (ಗುರುವಾರ) ರಾಜಸ್ಥಾನದಲ್ಲಿ ಪತನವಾಗಿದೆ.
Rajasthan: IAF MIG-23 training aircraft crashes in Jodhpur's Balesar.More details awaited pic.twitter.com/2xfPSrtj6D
— ANI (@ANI_news) July 6, 2017
ಭಾರತೀಯ ವಾಯುಪಡೆಯ ಎಂಐಜಿ-23 ತರಬೇತಿ ವಿಮಾನ ಗುರುವಾರ ರಾಜಸ್ಥಾನದ ಜೋದ್ ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಪತನವಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಲೆಸರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ಜೋದ್ ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿ ಹೇಳಿದ್ದಾರೆ.
ಎಂಐಜಿ-23 ವಿಮಾನದಲ್ಲಿದ್ದ ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಸುರಕ್ಷಿತವಾಗಿದ್ದಾರೆ. ಘಟನೆ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಪಪುಂಪಾರೆ ಜಿಲ್ಲೆಯ ಸಗಾಲಿಯಲ್ಲಿ ಮಂಗಳವಾರ ವಾಯುಸೇನೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ಅರುಣಾಚಲ ಪ್ರದೇಶದ ಪಂಪನ್ಪೇರ್ ಜಿಲ್ಲೆಯಲ್ಲಿ ಗುರುವಾರ ಪತ್ತೆಯಾಗಿದೆ.












Click it and Unblock the Notifications