ಮೇಘಾಲಯ: ಬಿಜೆಪಿ ತೊರೆದ ಕಾರ್ಯಕರ್ತರಿಂದ 'ಬೀಫ್ ಫೆಸ್ಟ್’

ಮೇಘಾಲಯ, ಜೂನ್ 10: ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಅಧಿಸೂಚನೆ ವಿರೋಧಿಸಿ ಕಳೆದ ಹಲವು ದಿನಗಳಿಂದ ಮೇಘಾಲಯದಲ್ಲಿ ಸುಮಾರು 5,000 ಕಾರ್ಯಕರ್ತರು ಬಿಜೆಪಿ ತೊರೆದಿದ್ದಾರೆ. ಇದೀಗ ಇವರೆಲ್ಲಾ 'ಬೀಫ್ ಫೆಸ್ಟ್' ನಡೆಸಲು ಮುಂದಾಗಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಬೆರ್ನಾರ್ಡ್ ಎನ್ ಮಾರಕ್ ಮತ್ತು ಬಚು ಸಿ ಮಾರಕ್ ಬಿಜೆಪಿ ತೊರೆದಿದ್ದು ಇದೀಗ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೆ ಬೀಫ್ ಫೆಸ್ಟ್ ಆಯೋಜಿಸಿದ್ದಾರೆ. ಕ್ರಿಶ್ಚಿಯನ್ನರೇ ಹೆಚ್ಚಾಗಿರುವ ತುರಾ ಪ್ರದೇಶದಲ್ಲಿ ಈ ಬೀಫ್ ಪೆಸ್ಟ್ ನಡೆಸಲು ಮುಂದಾಗಿದ್ದಾರೆ. ಸುಮಾರು 2,000 ಜನರು ಈ ಫೆಸ್ಟ್ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Meghalaya: Leaders who quit the BJP set to host beef festival

"ನಾನು ಬಿಜೆಪಿ ಬಿಡುತ್ತಿದ್ದೇನೆ. ಕಾರಣ ನಮ್ಮ ಮೇಲೆ ಪಕ್ಷ ಹಿಂದುತ್ವ ಸಿದ್ಧಾಂತ ಹೇರಲು ಹೊರಟಿದೆ. ನಾವು ಪಕ್ಷ ತೊರೆಯಲು ನಿರ್ಧರಿಸಿದ್ದೇವೆ. ಬೀಫ್ ತಿನ್ನುವುದು ನಮ್ಮ ಸಂಸ್ಕೃತಿಯ ಭಾಗ. ಫೆಸ್ಟ್ ಮೂಲಕ ದನದ ಮಾಂಸ ನಮ್ಮ ಸಂಸ್ಕೃತಿಯ ಭಾಗ ಎಂಬುದನ್ನು ತೋರಿಸಲು ಹೊರಟಿದ್ದೇವೆ," ಎಂದು ಮಾಜಿ ಬಿಜೆಪಿ ನಾಯಕ ಬೆರ್ನಾರ್ಡ್ ಎನ್ ಮಾರಕ್ ಹೇಳಿದ್ದಾರೆ. ಸಂಜೆ 5.30 ನಿಮಿಷಕ್ಕೆ ಈ ಫೆಸ್ಟ್ ಕಾರ್ಯಕ್ರಮ ಆರಂಭವಾಗಲಿದೆ.

60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಹಾರೋ ಹಿಲ್ ಪ್ರದೇಶದಲ್ಲೇ ಒಟ್ಟು 24 ವಿಧಾನಸಭಾ ಸ್ಥಾನಗಳಿವೆ. ಆದರೆ ನಾಯಕರು ಬಿಜೆಪಿ ಬಿಡುತ್ತಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುತ್ತಿಲ್ಲ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹೀಗಿದ್ದೂ ದಿನದಿಂದ ದಿನಕ್ಕೆ ಪಕ್ಷ ಬಿಡುತ್ತಿರುವ ನಾಯಕರು ಮತ್ತು ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+