ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಮೇಘಾಲಯ ಸಿಎಂ ಸಂಗ್ಮಾ

Subscribe to Oneindia Kannada

ಶಿಲ್ಲಾಂಗ್, ಫೆಬ್ರವರಿ 9: ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ವಿಧಾನಸಭೆ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.

ಕಳೆದ 10 ವರ್ಷಗಳಿಂದ ಮೇಘಾಲಯದ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ಪಕ್ಷದ ಸಂಗ್ಮಾ ತಾವು ಯಾವತ್ತೂ ಸ್ಪರ್ಧಿಸುವ ಅಂಪತಿ ಕ್ಷೇತ್ರದ ಜತೆಗೆ ಸೊಗ್ಸಕ್ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದಾರೆ.

ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್'

ನಾಲ್ಕು ಬಾರಿಯ ಶಾಸಕರಾಗಿರುವ ಸಂಗ್ಮಾ ಇದೇ ಮೊದಲ ಬಾರಿಗೆ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.

 Meghalaya CM Mukul Sangma contesting from two seats

ನಾಮಪತ್ರ ಪರಿಶೀಲನೆ ಗುರುವಾರಕ್ಕೆ ಮುಗಿದಿದ್ದು ಅಂಪತಿಯಲ್ಲಿ ಮುಖ್ಯಮಂತ್ರಿ ಸಂಗ್ಮಾ ಸೇರಿ ಮೂರು ಮಂದಿ ಕಣದಲ್ಲಿದ್ದಾರೆ. ಸೊಗ್ಸಕ್ ನಲ್ಲಿ ಒಟ್ಟು 7 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ

ಫೆಬ್ರವರಿ 27ರಂದು ಮೇಘಾಲಯದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 60 ಕ್ಷೇತ್ರಗಳಲ್ಲಿ 374 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ 33 ಮಹಿಳೆಯರಾಗಿದ್ದಾರೆ. ಫೆಬ್ರವರಿ 12 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮಾರ್ಚ್ 3ರಂದು ಮತ ಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meghalaya Chief Minister Mukul Sangma, who is making effort to enter assembly for the fifth time, has filed nominations from a second constituency too in addition to his traditional seat of Ampati.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ