NEET 2023 ಫಲಿತಾಂಶ : ಇಬ್ಬರು ಟಾಪರ್‌ಗಳಿಗೆ ಭರ್ತಿ 99.99% ಅಂಕ
ನವದೆಹಲಿ, ಜೂನ್ 13: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2023 ಅನ್ನು ಘೋಷಿಸಿದೆ. ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ 720 ಅಂಕಗಳೊಂದಿಗೆ ಜಂಟಿ ಟಾಪರ್‌ಗಳಾಗಿದ್ದಾರೆ.
ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಈ ವರ್ಷ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ನಲ್ಲಿ 99.99 ಶೇಕಡಾ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಪ್ರಕಟಿಸಿದೆ.

ಒಟ್ಟು 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. NEET UG 2023 ರ ಟಾಪ್ 50 ಅಭ್ಯರ್ಥಿಗಳ ಮೆರಿಟ್ ಪಟ್ಟಿಯಲ್ಲಿ, ನಲವತ್ತು ಪುರುಷ ಅಭ್ಯರ್ಥಿಗಳು ಮತ್ತು ಹತ್ತು ಮಹಿಳಾ ಅಭ್ಯರ್ಥಿಗಳು ಸ್ಥಾನಗಿಟ್ಟಿಸಿಕೊಂಡಿದ್ದಾರೆ
ರಾಜ್ಯಗಳ ಪೈಕಿ, ಉತ್ತರ ಪ್ರದೇಶವು ಅತಿ ಹೆಚ್ಚು ಅರ್ಹ ಅಭ್ಯರ್ಥಿಗಳೊಂದಿಗೆ ಮುಂಚೂಣಿಯಲ್ಲಿದೆ. ಅಂದರೆ 1.39 ಲಕ್ಷ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ 1.31 ಲಕ್ಷ ಮತ್ತು ರಾಜಸ್ಥಾನ 1 ಲಕ್ಷಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವು ದೇಶದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾಗಿದ್ದು, ಜನಸಂಖ್ಯೆಯ ದೃಷ್ಟಿಯಿಂದ ರಾಜಸ್ಥಾನವು ಮೊದಲ ಹತ್ತರಲ್ಲಿ ಸ್ಥಾನ ಪಡೆದಿದೆ.
ಕಳೆದ ಮೇ 7 ರಂದು ಭಾರತದ ಹೊರಗಿನ 14 ನಗರಗಳು ಸೇರಿದಂತೆ ದೇಶಾದ್ಯಂತ 499 ನಗರಗಳಲ್ಲಿನ 4,097 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು) ನಡೆಸಲಾಯಿತು.
ಪರೀಕ್ಷೆಯನ್ನು ಭಾರತದ ಹೊರಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲಿ ನಡೆಸಲಾಯಿತು.
ಹತ್ತು ಪುರುಷ ಟಾಪರ್ಸ್ ಲಿಸ್ಟ್ ಇಲ್ಲಿದೆ:
1. ಪ್ರಭಂಜನ್ ಜೆ
2. ಬೋರಾ ವರುಣ್ ಚಕ್ರವರ್ತಿ
3. ಕೌಸ್ತವ್ ಬೌರಿ
4. ಧ್ರುವ ಅಡ್ವಾಣಿ
5. ಸೂರ್ಯ ಸಿದ್ಧಾರ್ಥ್ ಎನ್
6. ಶ್ರೀನಿಕೇತ್ ರವಿ
7. ಸ್ವಯಂ ಶಕ್ತಿ ತ್ರಿಪಾಠಿ
8. ವರುಣ್ ಎಸ್
9. ಪಾರ್ತ್ ಖಂಡೇಲ್ವಾಲ್
10. ಸಾಯನ್ ಪ್ರಧಾನ್
ಹತ್ತು ಮಹಿಳಾ ಟಾಪರ್ಸ್ ಲಿಸ್ಟ್ ಇಲ್ಲಿದೆ:
1. ಪ್ರಾಂಜಲ್ ಅಗರ್ವಾಲ್
2. ಆಶಿಕಾ ಅಗರ್ವಾಲ್
3. ಆರ್ಯ ಆರ್ ಎಸ್
4. ಮೀಮಾಂಸಾ ಮೌನ್
5. ಸುಮೇಘ ಸಿನ್ಹಾ
6. ಕಣಿ ಯಸಶ್ರೀ
7. ಬರೀರಾ ಅಲಿ
8. ರಿದ್ಧಿ ವಾಜರಿಂಗ್ಕರ್
9. ಕವಲಕುಂಟ್ಲ ಪ್ರಣತಿ ರೆಡ್ಡಿ
10. ಜಾಗೃತಿ ಬೊಡೆದ್ದುಲ












Click it and Unblock the Notifications