Media Boycott: ಬಿಜೆಪಿ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣ: 'ಪತ್ರಕರ್ತರ ಕೊಲೆ, ದಾಳಿ, ಬಂಧನ ಲೆಕ್ಕ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟಂಬರ್ 15: ಕೇಂದ್ರ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಬ್ಲಾಕ್ ಒಂದು ದಿನದ ಹಿಂದಷ್ಟೇ ದೂರದರ್ಶನ ಮಾಧ್ಯಮಗಳ 14 ಸುದ್ದಿ ನಿರೂಪಕರ ಕಾರ್ಯಕ್ರಮ ಬಹಿಷ್ಕರಿಸಿದ್ದ ಪಟ್ಟಿ ಬಿಡುಗಡೆ ಮಾಡಿತ್ತು. ವಿಪಕ್ಷಗಳ ಪೈಕಿ ಕಾಂಗ್ರೆಸ್ ಮೇಲೆ ಕೆಂಡ ಕಾರಿದ್ದ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಪತ್ರಕರ್ತರ ಮೇಲಿನ ದಾಳಿ, ಸಾವಿನ ಲೆಕ್ಕ ಸಹಿತ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ...!! ಎನ್ನುವ ಮೂಲಕ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೇ ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ 'ಇಂಡಿಯಾ' ಮರೆತಿಲ್ಲ ಎಂದು ಅವರು ಹೇಳಿದ್ದಾರೆ.
ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿರುವ ಪತ್ರಕರ್ತರ ಸಾವು, ದಾಳಿ, ಬಂಧನ ಕುರಿತ ಮಾಹಿತಿವುಳ್ಳ ಪಟ್ಟಿ ಇಲ್ಲಿ ತಿಳಿಯೋಣ.
Mr. @JPNadda avare,
— Siddaramaiah (@siddaramaiah) September 15, 2023
We will give you the data on the actual attack on the media. You may have forgotten this, but INDIA still remembers it.
Journalists who were arrested for reporting the truth:
-Siddique Kappan
-Mohammed Zubair
-Ajit Ojha
-Jaspal Singh
-Sajad Gul… pic.twitter.com/2MvIeVkPoG
ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನವಾದ ಪತ್ರಕರ್ತರ ಪಟ್ಟಿ
* ಸಿದ್ದಿಕ್ ಕಪ್ಪನ್
* ಮೊಹಮ್ಮದ್ ಝುಬೇರ್
* ಅಜಿತ್ ಓಝಾ
* ಜಸ್ಪಾಲ್ ಸಿಂಘ್
* ಸಜದ್ ಗುಲ್

ಸತ್ಯದ ಪರ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು
* ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ ಮಾಡಿದ್ದಕ್ಕೆ ಉತ್ತರ ಪ್ರದೇಶದ 'ರಾಕೇಶ್ ಸಿಂಗ್'
* ಮರಳು ದಂಧೆ ಕುರಿತು ವರದಿ ಮಾಡಿದ್ದಕ್ಕೆ ಉತ್ತರ ಪ್ರದೇಶದ 'ಶುಭಂ ಮಣಿ ತ್ರಿಪಾಠಿ'
* ಗೋಮಾಳ ಅಕ್ರಮ ಮಾರಾಟ ಕುರಿತು ವರದಿ ಪ್ರಸಾರಕ್ಕೆ ತಮಿಳುನಾಡಿನ 'ಜಿ ಮೋಸೆಸ್'
* ಎಸ್‌ಐ ನೇಮಕಾತಿ ಹಗರಣ ಕುರಿತು ವರದಿ ಮಾಡಿದ್ದಕ್ಕೆ ಅಸ್ಸಾಂ ನ 'ಪರಾಗ್ ಭುಯಾನ್'
* ಕೋಮುವಾದ ವಿರೋಧಿಸಿದ್ದಕ್ಕೆ ಕರ್ನಾಟಕದ 'ಗೌರಿ ಲಂಕೇಶ್' ಅವರನ್ನು ಕೊಲೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ, ಅವಸಾನ.
2015 ರಲ್ಲಿ 136ನೇ ಸ್ಥಾನ
2019 ರಲ್ಲಿ 140ನೇ ಸ್ಥಾನ
2022 ರಲ್ಲಿ 150ನೇ ಸ್ಥಾನ
2023 ರಲ್ಲಿ 161ನೇ ಸ್ಥಾನ ಹೊಂದಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಕಾರ್ಯಕ್ರಮ ಬಹಿಷ್ಕರಿಸಿದ ನಿರ್ಧಾರ ಟೀಕಿಸಿದವರಿಗೆ ಉತ್ತರ ಕೊಟ್ಟಿದ್ದಾರೆ.












Click it and Unblock the Notifications