'ಕೇಸರಿ ಭಯೋತ್ಪಾದನೆ' ಎಂಬ ಪದಪ್ರಯೋಗ ಮಾಡಿಲ್ಲ: ಕಾಂಗ್ರೆಸ್
ನವದೆಹಲಿ, ಏಪ್ರಿಲ್ 17: "ರಾಹುಲ್ ಗಾಂಧಿಯವರಾಗಲೀ, ಕಾಂಗ್ರೆಸ್ಸಾಗಲಿ ಎಂದಿಗೂ 'ಕೇಸರಿ ಭಯೋತ್ಪಾದನೆ' ಎಂಬ ಪದಪ್ರಯೋಗ ಮಾಡಿಲ್ಲ" ಎಂದು ಕಾಂಗ್ರೆಸ್ ವಕ್ತಾರ ಪಿ.ಎಲ್ ಪುನಿಯಾ ಹೇಳಿದ್ದಾರೆ.
ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಆರೋಪಿಗಳನ್ನು ನಿನ್ನೆ(ಏ.16) ಖುಲಾಸೆಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪುನಿಯಾ, "ನಾವು ಕೇಸರಿ ಭಯೋತ್ಪಾದನೆ ಎಂಬ ಪದಪ್ರಯೋಗ ಮಾಡಿದ್ದೇವೆ ಎಂದು ಬಿಜೆಪಿ ಹೇಳಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಇಂಥ ಆರೋಪಗಳು ಹುರುಳಿಲ್ಲದ್ದು. ನಮ್ಮ ಪ್ರಕಾರ ಕೇಸರಿ ಭಯೋತ್ಪಾದನೆ ಎಂಬ ಪರಿಕಲ್ಪನೆಯೇ ಇಲ್ಲ. ಭಯೋತ್ಪಾದನೆಗೆ ಯಾವ ಜಾತಿ, ಮತ ಎಂಬ ಭೇದವಿಲ್ಲ. ಅದೊಂದು ಅಪರಾಧ ಮನಸ್ಥಿತಿಯಷ್ಟೇ. ಇದರಿಂದ ಹಿಂಸೆ ನಡೆಯುತ್ತಿದೆ. ಅದು ಎಲ್ಲರಿಗೂ ಅಪಾಯಕಾರಿ. ಆದ್ದರಿಂದ ದಯವಿಟ್ಟು ಭಯೋತ್ಪಾದನೆಯನ್ನು ಯಾವ ಧರ್ಮಕ್ಕೂ ತಳುಕುಹಾಕಬೇಡಿ" ಎಂದು ಅವರು ಹೇಳಿದ್ದಾರೆ.

2007 ರ ಮೇ 18 ರಂದು ಶುಕ್ರವಾರದ ಪ್ರಾರ್ಥನೆ ಸಮಯದಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ 9 ಜನ ಮೃತರಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯ ಸಾಕ್ಷಿಗಳ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು.












Click it and Unblock the Notifications