ದಡಾರ ಹೆಚ್ಚಳ: ಮುಂಬೈಗೆ ಕೇಂದ್ರ ಪರಿಶೀಲನಾ ತಂಡ

ಮುಂಬೈ ನವೆಂಬರ್ 10: ನಗರದಲ್ಲಿ ಹೆಚ್ಚುತ್ತಿರುವ ದಡಾರ ಪ್ರಕರಣಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ತಂಡವನ್ನು ಮುಂಬೈಗೆ ನಿಯೋಜಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ. ಈ ತಂಡ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸ್ಥಾಪಿಸುವಲ್ಲಿ ರಾಜ್ಯ ಆರೋಗ್ಯ ಪ್ರಾಧಿಕಾರಗಳಿಗೆ ಸಹಾಯ ಮಾಡುತ್ತದೆ. ಅಗತ್ಯ ನಿಯಂತ್ರಣ ಮತ್ತು ನಿಯಂತ್ರಣ ಕ್ರಮಗಳ ಕಾರ್ಯಾಚರಣೆಯನ್ನು ಸುಲಭಗೊಳಿಸುತ್ತದೆ.

ಮುಂಬೈಗೆ ತೆರಳಲಿರುವ 3-ಸದಸ್ಯರ ಕೇಂದ್ರ ತಂಡ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು (LHMC) ನವದೆಹಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿ ಪುಣೆ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC)ದ ನವದೆಹಲಿಯ ತಜ್ಞರನ್ನು ಒಳಗೊಂಡಿದೆ.

ಎನ್‌ಸಿಡಿಸಿಯ ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ಯ ಉಪ ನಿರ್ದೇಶಕ ಡಾ ಅನುಭವ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ ತಂಡ ರಚನೆಯಾಗಲಿದೆ. ಈ ತಂಡ ತನಿಖೆ ನಡೆಸಲು ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುತ್ತದೆ. ಈ ತಂಡ ಮುಂಬೈನಲ್ಲಿ ವರದಿಯಾಗುತ್ತಿರುವ ದಡಾರದ ಪ್ರಕರಣಗಳನ್ನು ನಿರ್ವಹಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು, ನಿರ್ವಹಣಾ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳ ವಿಷಯದಲ್ಲಿ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸಹಾಯ ಮಾಡುತ್ತದೆ.

Measles increase in Mumbai: Monitoring Center Team deployment

ರೋಗದ ಲಕ್ಷಣಗಳು : ದಡಾರವನ್ನು ಸಾಮಾನ್ಯರು ಅಮ್ಮ, ತಟ್ಟು, ಸಿಡಬು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ದಡಾರ ಬಂದರೆ ಜ್ವರ, ಕೆಮ್ಮು, ಕಣ್ಣು ಕೆಂಪಾಗುವುದು, ಮೂಗು ಸೋರಿಕೆ ಸುರುವಾಗುತ್ತದೆ. ಈ ರೋಗದಿಂದ ಕುರುಡುತನ, ಮೆದುಳು ಸೋಂಕು, ಅಂಗವಿಕಲತೆ ಮುಂತಾದ ರೋಗಗಳು ಬರುವ ಸಾಧ್ಯತೆ ಇದೆ. ಇದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಲಸಿಕೆ ಹಾಕಿಸಿದರೆ ಮಕ್ಕಳಿಗೆ ಈ ರೋಗ ಬರುವುದನ್ನು ತಡೆಯಬಹುದು. ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಲಸಿಕೆ ಹಾಕಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+