ಎಂಸಿಡಿ ಚುನಾವಣೆ: ಮೋದಿಯಂತೆ ಕೇಜ್ರಿವಾಲ್ 'ಚಾಯ್ ಪೇ ಚರ್ಚಾ'
ದೆಹಲಿ ನವೆಂಬರ್ 29: ಗುಜರಾತ್ ವಿಧಾನಸಭೆ ಚುನಾವಣೆಯ ಕಿಚ್ಚು ಹೆಚ್ಚಾಗಿದ್ದು ಈ ನಡುವೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಕಾವು ರಂಗೇರಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆ ಪ್ರಚಾರದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿರತರಾಗಿದ್ದಾರೆ.
ಮಂಗಳವಾರ ಮನೆ ಮನೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಕುಮಾರ್ ಚೌಕ್‌ನಲ್ಲಿ ಬಿಸಿ ಚಹಾವನ್ನು ಅರವಿಂದ್ ಕೇಜ್ರಿವಾಲ್ ಸೇವಿಸಿದ್ದಾರೆ. ಇದರೊಂದಿಗೆ ಚಹಾದೊಂದಿಗೆ ಚರ್ಚೆ ಮಾಡಿದ್ದಾರೆ. ಜೊತೆಗೆ ದೆಹಲಿ ಚಿರಾಗ್‌ನಲ್ಲಿಂದು ಆಮ್ ಆದ್ಮಿ ಪಕ್ಷದ (ಎಎಪಿ) ಜನಸಂವಾದ್ ಉಪಕ್ರಮದ ಅಡಿಯಲ್ಲಿ ಕೇಜ್ರಿವಾಲ್ ಸಾರ್ವಜನಿಕರೊಂದಿಗೆ ಸಂವಹನ ನಡೆಸಲಿದ್ದಾರೆ.
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ, ಪಾಲಿಕೆ ಚುನಾವಣೆಯಲ್ಲಿ ಗೆದ್ದರೆ ನೈರ್ಮಲ್ಯ ಕಾರ್ಮಿಕರ ಸಂಬಳವನ್ನು ಸರಿಯಾದ ಸಮಯಕ್ಕೆ ಪಾವತಿಸುವುದನ್ನು ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದನ್ನು ಎಎಪಿ ಖಚಿತಪಡಿಸುತ್ತದೆ ಎಂದು ಹೇಳಿದರು. ಗೋಕಲ್‌ಪುರ, ರೋಹ್ತಾಸ್ ನಗರ ಮತ್ತು ಶಹದಾರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಸಿಡಿಯಲ್ಲಿ ಬಿಜೆಪಿಯ "ದುರಾಡಳಿತ" ಕೊನೆಗೊಳಿಸಲು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರನ್ನು ಒತ್ತಾಯಿಸಿದರು.

ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯಂತೆ ಎಂಸಿಡಿ ಚುನಾವಣೆಗೆ ಡಿಸೆಂಬರ್ 4 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್ ಚುನಾವಣಾ ಪ್ರಚಾರದ ಬಳಿಕ ಕೇಜ್ರಿವಾಲ್ ದೆಹಲಿಯತ್ತ ಮುಖ ಮಾಡಿದ್ದು ಎಂಸಿಡಿಗೆ ಪ್ರಚಾರ ಕೈಗೊಂಡಿದ್ದಾರೆ.
ಸೋಮವಾರ ಸೂರತ್‌ನಲ್ಲಿ ಬೃಹತ್ ರ್‍ಯಾಲಿ ನಡೆಸಿದರು. ಅರವಿಂದ್ ಕೇಜ್ರಿವಾಲ್ ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಲಿಖಿತ ಭವಿಷ್ಯ ನುಡಿದಿದ್ದು, 'ವಜ್ರ ನಗರಿ' ಸೂರತ್‌ನಲ್ಲಿ ತಮ್ಮ ಪಕ್ಷ 12 ಸ್ಥಾನಗಳಲ್ಲಿ ಏಳರಿಂದ ಎಂಟು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಅವರ ಪಕ್ಷವು ರಾಜ್ಯದಲ್ಲಿ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications