MBA ಮಾಡಿ ಕೃಷಿಗೆ ಇಳಿದ ಯುವತಿ! ಕ್ಯಾಪ್ಸಿಕಂ ಬೆಳೆದು ₹4 ಕೋಟಿ ವ್ಯವಹಾರ, ಪ್ರಣಿತಾ ಯಶೋಗಾಥೆ

ಇಂದಿನ ಹವಾಮಾನ ಬದಲಾವಣೆಯಂತಹ ಸಂದರ್ಭದಲ್ಲಿ ತಂತ್ರಜ್ಞಾನಗಳೇ ಸ್ಥಿರ ಕೃಷಿಗೆ ಆಧಾರ ಎಂದು ನಂಬಿದ ಪದವೀಧರೆಯೊಬ್ಬರು ಕೃಷಿ ವಲಯದಲ್ಲಿ ನೆಲೆ ಕಂಡು ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸಿ ಮಾದರಿಯಾಗಿದ್ದಾರೆ. ಪದವಿ ಬಳಿಕ ಇತರರಂತೆ ವೃತ್ತಿಯೊಂದನ್ನು ಆಯ್ಕೆ ಮಾಡಿಕೊಳ್ಳದೇ ಪ್ರಮುಖ ತರಕಾರಿ ಬೆಳೆ ಕ್ಯಾಪ್ಸಿಕಂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಿಳಾ ಉದ್ಯಮಿ ಪ್ರಣಿತಾ ವಾಮನ್ ಸಾಹಸಗಾಥೆ ಇಲ್ಲಿದೆ.

ನಾವು ತಿನ್ನುವ ಪಿಜ್ಜಾ, ಫ್ರೈಡ್ ರೈಸ್ ಅಥವಾ ಕಢಾಯಿ ಪನೀರ್‌ನಂತಹ ಅನೇಕ ಆಹಾರ ಪದಾರ್ಥಗಳಿಗೆ ಕ್ಯಾಪ್ಸಿಕಂ (ದೊಣ್ಣಮೆಣಸಿನಕಾಯಿ) ಅತ್ಯಗತ್ಯವಾಗಿ ಬೇಕು. ಈವುಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದರ ಜ್ಞಾನ ನಿಮಿಗಿದೆಯೇ? ಈ ಕ್ಯಾಪ್ಸಿಕಂ ಕೃಷಿಗೆ ಕಾಲಿಟ್ಟ ಉದ್ಯಮಿ ಪ್ರಣಿತಾ ವಾಮನ್ ಅವರು ಕೆಲವೇ ವರ್ಷಗಳಲ್ಲಿ ಅದರಲ್ಲಿ 4 ಕೋಟಿ ರೂಪಾಯಿ ಭರ್ಜರಿ ವ್ಯವಹಾರ ಮಾಡಿ ಕೃಷಿಯಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು '30 ಸ್ಟೇಡ್ಸ್' ವರದಿ ಮಾಡಿದೆ.

MBA Graduate Pranitha Waman

ಟಾಟಾ ಇನ್‌ಸ್ಟಿಟ್ಯೂಟ್ ನಲ್ಲಿ MBA ಪದವಿ

ಮೂಲತಃ ಪ್ರಣಿತಾ ಅವರು ಮಹಾರಾಷ್ಟ್ರದ ಜುನ್ನಾರ್‌ನವರು. ಕೃಷಿ ಕುಟುಂಬಕ್ಕೆ ಸೇರಿದ ಇವರು ಟಾಟಾ ಇನ್‌ಸ್ಟಿಟ್ಯೂಟ್ ನಲ್ಲಿ ಸೋಶಿಯಲ್ ಸೈನ್ಸಸ್ ನಲ್ಲಿ ಎಂಬಿಎ (MBA) ಪದವೀಧರೆ ಪಡೆದಿ್ದದಾರೆ. ಬಳಿಕ ಅವರು ಆಹಾರ ಸಂಸ್ಕರಣಾ ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್ ಮಾಡಿದ ನಂತರ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇವರು ತರಬೇತಿ (ಇಂಟರ್ನ್‌ಶಿಪ್) ಅವಧಿಯಲ್ಲಿ ಬದುಕಿಗೆ ಕೃಷಿ-ಉದ್ಯಮಶೀಲತೆ ನಿಜವಾದ ಹಾದಿ ಎಂದು ಅರಿತುಕೊಂಡು, ವ್ಯವಸಾಯದಲ್ಲಿ ನಿರತರಾದರು. ಅಲ್ಲಿಂದ ಇವರ ಬದುಕು ಮತ್ತೊಂದು ಹಂತಕ್ಕೆ ತೆರೆದುಕೊಂಡಿತು.

ಪ್ರಣಿತಾ ಕೃಷಿ ಆರಂಭಿಸಿದ್ದೇ ರೋಚಕ..!

ಪ್ರಣಿತಾ ವಾಮನ್ ಪದವಿ ಬಳಿಕ ತರಬೇತಿ ವೇಳೆ ಹೈಟೆಕ್ ಕೃಷಿ ಕುರಿತು ಸಾಕಷ್ಟು ತಿಳಿದುಕೊಂಡರು. ಅದರಲ್ಲಿ ತಂತ್ರಜ್ಞಾನ ಅರಿತರು. 2020ರಲ್ಲಿ ವಾಮನ್ ಕೇವಲ ಒಂದು ಎಕರೆ ಜಮೀನಿನಲ್ಲಿ ಪಾಲಿಹೌಸ್ (polyhouse) ಮೂಲಕ ಕ್ಯಾಪ್ಸಿಕಂ ಬೆಳೆಯಲು ಆರಂಭಿಸಿದರು. ಪಾಲಿಹೌಸ್ ನಲ್ಲಿ ಅವರು ಈ ಬೆಳೆಗೆ ಎಷ್ಟು ಬೇಕೋ ಅಷ್ಟೇ ತಾಪಮಾನ, ಆರ್ದ್ರತೆ, ತಂಪು ನಿಯಂತ್ರಿಸಿದರು. ಕ್ಯಾಪ್ಸಿಕಂಗೆ ಸೂಕ್ತ ವಾತಾವರಣ ನಿರ್ಮಿಸುವ ತಂತ್ರಜ್ಞಾನ ಮತ್ತು ಇಂತಹ ವಾತಾವರಣದಲ್ಲಿ ವರ್ಷವಿಡಿ ನಿರ್ದಿಷ್ಟ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ಅವರು ಮೊದಲೇ ತಿಳಿದುಕೊಂಡಿದ್ದರು.

ಕೃಷಿಯಲ್ಲಿ ಮನಸ್ಸಿದ್ದರೆ ಮಾರ್ಗ

ಹವಾಮಾನ ಬದಲಾವಣೆಯಂಥ ಇಂದಿನ ದಿನಮಾನಗಳಲ್ಲಿ ಅಧಿಕ ಆದಾಯ ಗಳಿಕೆಗೆ ತಂತ್ರಜ್ಞಾನಗಳೇ "ಏಕೈಕ ಪರಿಹಾರ" ಎಂದು ಅವರು ನಂಬಿದ್ದರು. ಅದರಂತೆ ಕೋಟಿ ಕೋಟಿ ವ್ಯವಹಾರ ಮಾಡಿದರು. ಈ ಮೂಲಕ ಪಾಲಿಹೌಸ್ ಕೃಷಿಯತ್ತ ಎಲ್ಲರು ನೋಡುವಂತೆ ಮಾಡಿದರು. ಕೃಷಿಯಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದನ್ನು ತೋರಿದರು.

ಕ್ಯಾಪ್ಸಿಕಂ ಮೊದಲ ಬೆಳೆ ಆಗಿರಲಿಲ್ಲ!

ಪ್ರಣಿತಾ ಅವರು ಕ್ಯಾಪ್ಸಿಕಂ ಬೆಳೆಯುವ ಮೊದಲು ತಮ್ಮ ಪಾಲಿಹೌಸ್‌ನಲ್ಲಿ ಬ್ರೊಕೊಲಿ ಮತ್ತು ಲೆಟಿಸ್‌ನಂತಹ ತರಕಾರಿಗಳ ಬೆಳೆಯುವ ಕುರಿತು ಗಂಭೀರ ಚಿಂತನೆ ಮಾಡಿದ್ದರು. ಅಂತಿಮವಾಗಿ ತಮ್ಮ ಜಮೀನಿನಲ್ಲಿ ಕ್ಯಾಪ್ಸಿಕಂ ಬೆಳೆಯಲು ಶುರು ಮಾಡಿದರು. ಏಕೆಂದರೆ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ವರ್ಷವಿಡೀ ಕ್ಯಾಪ್ಸಿಕಂಗೆ ಬೇಡಿಕೆ ಇರುತ್ತದೆ. ಹೀಗಾಗಿ ಆ ಬೆಳೆ ಬೆಳೆಯಲು ಆಯ್ಕೆ ಮಾಡಿಕೊಂಡರು.

ಕೋವಿಡ್ ಸಮಯದಲ್ಲೂ ಲಾಭದ ಹಾದಿ..

ಇವರು ಕೃಷಿ ಆರಂಭಿಸಿದ ಬಳಿಕ ಎದುರಾದ ಕೋವಿಡ್ ಲಾಕ್‌ಡೌನ್ ಸಮಯದಲ್ಲೂ ಅವರ ಕೃಷಿ ನಷ್ಟ ಅನುಭವಿಸಲಿಲ್ಲ. ಅಂದು 2020ರಲ್ಲಿ ಆಗಷ್ಟೇ ಜಮೀನಿನಲ್ಲಿ ಕ್ಯಾಪ್ಸಿಕಂ ಕೃಷಿ ಆರಂಭಿಸಿದ್ದ ಪ್ರಣಿತಾ ಅವರು, ನೀರಾವರಿಗೆ, ಬೀಜ, ಗೊಬ್ಬರ ಖರೀದಿಗೆ ಸ್ವಂತವಾಗಿ 20 ಲಕ್ಷ ರೂ. ಹಣ ವ್ಯಯಿಸಿದ್ದರು. ಸಾಲದಾದಾಗ ಅವರು ಸರ್ಕಾರ ಸಬ್ಸಿಡಿ (ಧನಸಹಾಯ) ಮೂಲಕ ಉಳಿದ ಅಗತ್ಯ ಹಣ ಪಡೆದುಕೊಂಡರು ಕೃಷಿಯಲ್ಲಿ ನೆಲೆ ನಿಂತರು.

ಇನ್ನೇನು ಬೆಳೆ ಕಟಾವಿಗೆ ಬರಬೇಕು. ಅಷ್ಟರಲ್ಲಿ ಅವರಿಗೆ ಕೋವಿಡ್ ಲಾಕ್‌ಡೌನ್ ಎದುರಾಯಿತು. ಆಗಷ್ಟೇ ಈ ಕೃಷಿ ವ್ಯವಹಾರಕ್ಕೆ ಕಾಲಿಟ್ಟಿದ್ದ ಪ್ರಣಿತಾ ಅವರಿಗೆ ಸಗಟು ತರಕಾರಿ ಖರೀದಿದಾರರು ಹೆಚ್ಚಾಗಿ ಗೊತ್ತಿರಲಿಲ್ಲ. ಲಾಕ್‌ಡೌನ್ ವೇಳೆ ರೈತರು ಕೃಷಿಯನ್ನು ನಿಲ್ಲಿಸಿದ್ದರಿಂದ, ಸಾಕಷ್ಟು ಪ್ರಯತ್ನದ ನಂತರ ತರಕಾರಿಗಳನ್ನು ಖರೀದಿಸಲು ಸಿದ್ಧರಿದ್ದ ಒಬ್ಬ ಮಾರಾಟಗಾರರನ್ನು ಪತ್ತೆ ಮಾಡಿಕೊಂಡರು.

ಮೊದಲ ಕಟಾವಿನಲ್ಲೇ 40 ಟನ್ ಕ್ಯಾಪ್ಸಿಕಂ ಇಳುವರಿ ಪಡೆದ ಪ್ರಣಿತಾ ಆ ವರ್ಷ ಅವರು ಬರೋಬ್ಬರಿ 32 ಲಕ್ಷ ರೂ. ವಹಿವಾಟು ನಡೆಸಿದರು. ಕೃಷಿ ಉತ್ಪನ್ನಗಳನ್ನು ನಾಸಿಕ್, ದಾದರ್, ಜೈಪುರ ಮತ್ತು ಇತರ ಸ್ಥಳಗಳಲ್ಲಿನ ಸಗಟು ವ್ಯಾಪಾರಿಗಳಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಇದರಿಂದ ಅವರಿಗೆ ಇಲ್ಲಿಯವರೆಗೆ ಒಟ್ಟು ಭರ್ಜರಿ 4 ಕೋಟಿ ರೂಪಾಯಿ ವ್ಯಾಪಾರ- ವಹಿವಾಟು ನಡೆದಿದ್ದು, ಅವರಿಗೆ 2 ಕೋಟಿಗೂ ಅಧಿಕ ಲಾಭ ದೊರೆತಿದೆ. ಈ ಮೂಲಕ ಕೃಷಿಯಲ್ಲಿ ಮನಸ್ಸಿದ್ದರೆ ಮಾರ್ಗ. ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಕರಲ್ಲಿ ಅವರು ಹೊಸ ಭರವಸೆ ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+