ಭಾರತದಲ್ಲಿ ಕೆಲವೇ ದಿನಗಳಲ್ಲಿ ಉತ್ತುಂಗಕ್ಕೇರಲಿವೆ ಕೊರೊನಾ ಪ್ರಕರಣಗಳು

ನವದೆಹಲಿ, ಜನವರಿ 04: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಪ್ರಮುಖ ನಗರಗಳಲ್ಲಿ ಕೊರೊನಾ ವೈರಸ್‌ ಹೊಸ ಪ್ರಕರಣಗಳು ಶೇ. 50 ರಷ್ಟು ಹೆಚ್ಚಾಗಲು ಹೊಸ ರೂಪಾಂತರಿ ಓಮಿಕ್ರಾನ್ ಕಾರಣವಾಗಿದೆ ಮತ್ತು ಕಳೆದ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯು ಮೂರನೇ ಅಲೆಯನ್ನು ಸೂಚಿಸುತ್ತದೆ ಎಂದು ಎನ್‌ಟಿಎಜಿಐನ ಕೋವಿಡ್ ವರ್ಕಿಂಗ್ ಗ್ರೂಪ್‌ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಮಂಗಳವಾರ ಹೇಳಿದ್ದಾರೆ.

"ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆಯನ್ನು ನಾವು ಗಮನಿಸಿದರೆ, ಅದು ಅತ್ಯಂತ ವೇಗವಾಗಿ ಹೆಚ್ಚಾಯಿತು ಮತ್ತು ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿತು. ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ ಅಥವಾ ಸೌಮ್ಯವಾದ ಅನಾರೋಗ್ಯವನ್ನು ಹೊಂದಿದ್ದವು. ಈ ಎಲ್ಲಾ ಅಂಶಗಳು ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆಯು ಶೀಘ್ರದಲ್ಲೇ ಕಡಿಮೆಯಾಗಬಹುದು ಎಂದು ಸೂಚಿಸುತ್ತವೆ." ಎಂದು ಅವರು ಹೇಳಿದ್ದಾರೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ದೇಶದ ಪ್ರಮುಖ ಮೆಟ್ರೋ ನಗರಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರವು ಹೊಸ ಪ್ರಕರಣಗಳು ಶೇ. 50 ಕ್ಕಿಂತ ಹೆಚ್ಚಾಗಲು ಕಾರಣವಾಗಿದೆ ಎಂದು ಅರೋರಾ ಹೇಳಿದ್ದಾರೆ.

Massive Surge In COVID Cases Indicative Of Third Wave In India

ಮೂರನೇ ಅಲೆಯ ಸೂಚನೆಯಾಗಿದೆ
"ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವು ಮೂರನೇ ಅಲೆಯ ಸೂಚನೆಯಾಗಿದೆ. ಪ್ರಪಂಚದಾದ್ಯಂತ ಹಲವಾರು ಇತರ ದೇಶಗಳಲ್ಲೂ ಕೊರೋನಾ ಹೆಚ್ಚಳಕ್ಕೆ ಓಮಿಕ್ರಾನ್ ಕಾರಣವಾಗಿದೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.

ದೇಶದ ಶೇ. 80ಕ್ಕೂ ಹೆಚ್ಚು ಜನರು ಸಹಜವಾಗಿಯೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಶೇ. 90 ಕ್ಕೂ ಹೆಚ್ಚು ವಯಸ್ಕರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ಶೇ. 65 ಕ್ಕೂ ಹೆಚ್ಚು ಜನರು ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಅರೋರಾ ವಿವರಿಸಿದ್ದಾರೆ.

ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಕೋವಿಡ್-19 ನೂತನ ರೂಪಾಂತರ ಓಮಿಕ್ರಾನ್ ನಿಂದ ಮಕ್ಕಳನ್ನು ರಕ್ಷಿಸಲು ಭಾರತ ಸರ್ಕಾರ ಪ್ರಪಂಚದಾದ್ಯಂತ ಆಸ್ಪತ್ರೆಗಳ ದತ್ತಾಂಶ ಮೇಲ್ವಿಚಾರಣೆ ತೊಡಗಿದೆ ಎನ್ನಲಾಗಿದೆ.

ಓಮಿಕ್ರಾನ್‌ನಿಂದಾಗಿ ಜಗತ್ತಿನ ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ಬಗ್ಗೆ ಖುದ್ದು ಪರಿಶೀಲನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಭಾರತದ ಆರೋಗ್ಯ ಅಧಿಕಾರಿಗಳು ಭಾರತದಲ್ಲಿನ ಮಕ್ಕಳಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾದ ದರಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಅನೇಕ ದೇಶಗಳಲ್ಲಿ, 5 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರು ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಈ ಪೈಕಿ ಹೆಚ್ಚಿನವರು ಯಾವುದೇ ಕೋವಿಡ್ ಲಸಿಕೆಯನ್ನು ಸ್ವೀಕರಿಸಿಲ್ಲ ಅಥವಾ ಅವರಿಗೆ ಇನ್ನೂ ಬೂಸ್ಟರ್ ಡೋಸ್‌ ನಿರ್ವಹಿಸಿಲ್ಲ ಎಂದು ಹೇಳಲಾಗಿದೆ.

ಮಕ್ಕಳು ಗಂಭೀರ ಕಾಯಿಲೆಗೆ ಗುರಿಯಾಗುತ್ತಿದ್ದಾರೆ
ಅಮೆರಿಕದಲ್ಲಿ ಓಮಿಕ್ರಾನ್ ರೂಪಾಂತರವು ಯುವಜನರಲ್ಲಿ ಕೋವಿಡ್‌ನ ಇತರ ತಳಿಗಳಿಗಿಂತ ಹೆಚ್ಚು ತೀವ್ರವಾಗಿ ಕಂಡುಬರದಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚು ಮಕ್ಕಳು ಗಂಭೀರ ಕಾಯಿಲೆಗೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ.

ಡಿಸೆಂಬರ್ 31 ರಂದು ಲಭ್ಯವಿರುವ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಮಾಹಿತಿಯ ಪ್ರಕಾರ, ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯಾ ಪ್ರಮಾಣ ಶೇ.66ರಿಂದ ಶೇ.378 ಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಗೆ ದಾಖಲಾದ ಹೆಚ್ಚಿನ ಮಕ್ಕಳು ಲಸಿಕೆ ಹಾಕಿಸಿಕೊಂಡಿಲ್ಲ. ಅಮೆರಿಕದಲ್ಲಿ ಪ್ರತಿನಿತ್ಯ ಸರಾಸರಿ 5.5 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಇದೇ ಕಾರಣಕ್ಕೆ ಈ ದತ್ತಾಂಶಗಳ ಮೇಲೆ ಭಾರತೀಯ ತಜ್ಞರು ತೀವ್ರ ನಿಗಾವಹಿಸಿದ್ದಾರೆ.

ಮಕ್ಕಳ ಆಸ್ಪತ್ರೆಗೆ ದಾಖಲಾದ ಈ ಅಂಕಿಅಂಶಗಳು ಭಾರತಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಇಲ್ಲಿಯವರೆಗೆ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿರಲಿಲ್ಲ. ಆದರೆ ಜಗತ್ತಿನ ಇತರೆ ದೇಶಗಳಲ್ಲಾಗುತ್ತಿರುವ ಬೆಳವಣಿಗೆಗಳಿಂದಾಗಿ ದೇಶದಲ್ಲಿ 15-17 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ಪ್ರೇರೇಪಿಸಿದೆ.

ಈ ಬಗ್ಗೆ ಮಾತನಾಡಿರುವ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಎನ್ ಕೆ ಅರೋರಾ ಅವರು, 18 ವರ್ಷದೊಳಗಿನವರ ಪೈಕಿ ಗರಿಷ್ಠ ಸಾವುಗಳು ಈ 15-17 ವರ್ಷ ವಯಸ್ಸಿನ ಗುಂಪಿನಲ್ಲಿ ದಾಖಲಾಗಿವೆ. ಹೀಗಾಗಿ 15-17 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕುವ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹಂಚಿಕೊಂಡ ಮಾಹಿತಿಯಂತೆ, 'ಕೇಂದ್ರ ಸರ್ಕಾರವು ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, 7.2 ಲಕ್ಷ ಆಸ್ಪತ್ರೆ ಹಾಸಿಗೆಗಳ ದಾಸ್ತಾನುಗಳಲ್ಲಿ, 24,000 ಪೀಡಿಯಾಟ್ರಿಕ್ ಐಸಿಯು ಹಾಸಿಗೆಗಳನ್ನು ಹೊರತುಪಡಿಸಿ, ದೇಶದಲ್ಲಿ 64,000 ಮಕ್ಕಳ ಹಾಸಿಗೆಗಳು ಲಭ್ಯವಿದೆ. ಈ ಹಿಂದೆ ಗರಿಷ್ಠ 5-6 ಲಕ್ಷ ದೈನಂದಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಸಿದ್ಧತೆಗಳನ್ನು ನಡೆಸಲಾಗುತ್ತಿರುವುದರಿಂದ, ದೈನಂದಿನ ಸೋಂಕು ಪ್ರಕರಣ ಪತ್ತೆ ಹೆಚ್ಚಿದ್ದರೆ ಪರಿಸ್ಥಿತಿ ಕೈ ಮೀರಬಹುದು ಎಂದು ಕೆಲವು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ದೈನಂದಿನ ಪ್ರಕರಣಗಳು ಮತ್ತು ಸಕ್ರಿಯ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚಾಗುವುದರಿಂದ ಆಸ್ಪತ್ರೆಗೆ ದಾಖಲಾಗುವ ಪ್ರವೃತ್ತಿಗಳ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರಗಳನ್ನು ಕೇಳಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಈ ದತ್ತಾಂಶವನ್ನು ಕೇಂದ್ರೀಯವಾಗಿಯೂ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ, ನಾವು ಯಾವುದೇ ಮಾದರಿಯನ್ನು ಸ್ಪಷ್ಟವಾಗಿ ನೋಡುತ್ತಿಲ್ಲ. ಆದರೆ ಹೊಸ ಸೋಂಕಿನ ಪತ್ತೆ ಮತ್ತು ಆಸ್ಪತ್ರೆಗೆ ದಾಖಲಾದ ದರಗಳ ನಡುವೆ ಯಾವಾಗಲೂ ವಿಳಂಬವಿರುವುದರಿಂದ ಕೆಲವೇ ದಿನಗಳಲ್ಲಿ ವಿಷಯಗಳು ಬದಲಾಗಬಹುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+