Get Updates
Get notified of breaking news, exclusive insights, and must-see stories!

Mass suicide in Gujarat: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯ ಶವ ಪತ್ತೆ- ಸಾಮೂಹಿಕ ಆತ್ಮಹತ್ಯೆ

ಸೂರತ್, ಅಕ್ಟೋಬರ್‌ 28: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಆರು ಮಂದಿ ವಿಷಕಾರಿ ಪದಾರ್ಥಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಏಳನೇ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.

ಮೃತರನ್ನು ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ಅವರ ತಂದೆ ಕಾನು, ಅವರ ತಾಯಿ ಶೋಭಾ ಮತ್ತು ಅವರ ಮೂವರು ಚಿಕ್ಕ ಮಕ್ಕಳಾದ ದಿಶಾ, ಕಾವ್ಯ ಮತ್ತು ಕುಶಾ ಎಂದು ಗುರುತಿಸಲಾಗಿದೆ.

ಮನೀಶ್ ಸೋಲಂಕಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಇದಲ್ಲದೆ, ಸೋಲಂಕಿ ಅವರೇ ಬರೆದಿರುವ ಆತ್ಮಹತ್ಯೆ ಪತ್ರವು ಮನೆಯಲ್ಲಿ ಕಂಡುಬಂದಿದೆ. ಈ ಪತ್ರದಲ್ಲಿ ಅವರು ಹಣಕಾಸಿನ ತೊಂದರೆಗಳ ಬಗ್ಗೆ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

mass-suicide-in-gujarat

ಘಟನೆಯ ಕುರಿತು ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿರುವುದರಿಂದ ಈ ಹಣಕಾಸಿನ ಸಮಸ್ಯೆಗಳ ನಿಖರವಾದ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಡಿಸಿಪಿ ರಾಕೇಶ್ ಬರೋಟ್, ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಸ್ಥಳದಲ್ಲಿ ಪತ್ರವೊಂದು ದೊರೆತಿದೆ. ಇದರ ಕಾರಣವನ್ನು ಪರಿಶೀಲಿಸುತ್ತಿದ್ದೇವೆ. ಇದು ಮೇಲ್ನೋಟಕ್ಕೆ ಆರ್ಥಿಕ ಸಮಸ್ಯೆಯಿಂದಾಗಿ ನಡೆದ ಘಟನೆ ಎಂದು ಕಾಣುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮನೀಷ್ ಸೋಲಂಕಿ ಅವರು ಪೀಠೋಪಕರಣ ವ್ಯಾಪಾರದಲ್ಲಿ ತೊಡಗಿದ್ದರು. ಸರಿಸುಮಾರು 35 ಬಡಗಿಗಳು ಮತ್ತು ಕಾರ್ಮಿಕರ ತಂಡವನ್ನು ನೋಡಿಕೊಳ್ಳುತ್ತಿದ್ದರು.

ಶನಿವಾರ ಬೆಳಿಗ್ಗೆ ಅವರ ಉದ್ಯೋಗಿಗಳು ಫೋನ್ ಕರೆಗಳ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸೋಲಂಕಿ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಅವರ ಮನೆಯ ಬಾಗಿಲು ತಟ್ಟಿದಾಗ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಸಹದ್ಯೋಗಿಗಳು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದರ ಪರಿಣಾಮವಾಗಿ ಸ್ಥಳೀಯರು ರಕ್ಷಣೆಗೆ ಬಂದರು. ಮನೆಯ ಒಳಗೆ ಪ್ರವೇಶಿಸಲು ಮನೆಯ ಹಿಂಭಾಗದ ಕಿಟಕಿಯನ್ನು ಒಡೆದರು ಎಂದು ತಿಳಿದುಬಂದಿದೆ.

ಇದೇ ರೀತಿಯ ಮತ್ತೊಂದು ಘಟನೆ ಸೂರತ್‌ನಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಬಲಿಯಾದವರಲ್ಲಿ 50 ವರ್ಷದ ವ್ಯಕ್ತಿ, ಅವರ 45 ವರ್ಷದ ಪತ್ನಿ, 20 ವರ್ಷದ ಮಗ ಮತ್ತು 17 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ವಜ್ರ ಉದ್ಯಮದ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿರುವ ಆರ್ಥಿಕ ತೊಂದರೆಗಳಿಂದಾಗಿ ಅವರು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಜ್ರ ಪಾಲಿಶ್ ಮಾಡುವ ವ್ಯಕ್ತಿಯ ಆದಾಯವು ಕಳೆದ 8-9 ತಿಂಗಳುಗಳಲ್ಲಿ ತಿಂಗಳಿಗೆ ₹25,000-30,000ದಿಂದ ₹15,000ಕ್ಕೆ ಕುಸಿದಿತ್ತು ಎಂದು ಹೇಳಲಾಗುತ್ತಿದೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+