ಈ ಶಾಲೆ ಮಕ್ಕಳಲ್ಲಿ ವಿಚಿತ್ರ ವರ್ತನೆ: ಇದ್ದಕ್ಕಿದ್ದಂತೆ ನಗ್ತಾರೆ- ಅಳ್ತಾರೆ, ನೆಲಕ್ಕೆ ಬೀಳ್ತಾರೆ! ಇಲ್ಲಿದೆ ಪ್ರೇತದ ಭಯ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಮೆಲ್ಘಾಟ್ ಪ್ರದೇಶದ ಸರ್ಕಾರಿ ಆಶ್ರಮ ಶಾಲೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಗುವುದು, ಅಳುವುದು ನಂತರ ಹಠಾತ್ತನೆ ಮೌನವಾಗಿ ಮಲಗುವುದು ಇಂತಹ ಘಟನೆಗಳು ಕಳದ ಕೆಲವು ದಿನಗಳಿಂದ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ದಿನ ಕಳೆಯುತ್ತಿದ್ದ ಹಾಗೆಯೇ ಈ ಶಾಲೆಯಲ್ಲಿ ನಡೆಯುತ್ತಿರುವ ಘಟನೆ ಎಲ್ಲಾ ಕಡೆ ಹಬ್ಬಿದೆ. ಘಟನೆಗೆ ಹೆದರಿ, ಡೋಮಾ ಗ್ರಾಮದಲ್ಲಿರುವ ಶಾಲೆಯ ಕನಿಷ್ಠ 608 ವಿದ್ಯಾರ್ಥಿಗಳು ಮನೆಗೆ ವಾಪಾಸಾಗಿದ್ದಾರೆ.

ಶಾಲಾ ಆವರಣದಲ್ಲಿ ಪ್ರೇತ ಬಾಧೆ ಇದೆ ಎನ್ನುವ ವದಂತಿ ಇದೀಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಪೋಷಕರು ಮತ್ತು ಗ್ರಾಮಸ್ಥರಲ್ಲಿ ಭಯ ಮನೆ ಮಾಡಿದೆ. ಆದರೆ, ಅಧಿಕಾರಿಗಳು ಇದನ್ನು ಮಾಸ್‌ ಹಿಸ್ಟಿರಿಯಾ ಎಂದು ಕರೆದಿದ್ದಾರೆ.

Mass Psychology

16 ವಿದ್ಯಾರ್ಥಿನಿಯರಲ್ಲಿ ಕಂಡು ಬಂತು ವಿಚಿತ್ರ ಲಕ್ಷಣ

ವರದಿಯ ಪ್ರಕಾರ, ಒಂದು ವಾರದ ಹಿಂದೆ ಈ ಶಾಲೆಯ 16 ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ಅಳಲು ಆರಂಭಿಸಿದ್ದಾರೆ. ಕಾರಣವಿಲ್ಲದೆ ಅಳುವುದು, ಅಳು ನಿಂತ ಕೂಡಲೇ ನಗಲು ಶುರು ಮಾಡಿದ್ದಾರೆ. ಸ್ವಲ್ಪ ಹೊತ್ತು ಹೀಗೆ ನಕ್ಕು ನಕ್ಕು ನಂತರ ಮೌನಕ್ಕೆ ಶರಣಾಗಿದ್ದಾರೆ. ಹಾಗೆಯೇ ನಿದ್ದೆಗೆ ಜಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲವರು ಇಲ್ಲಿ ಗೆಜ್ಜೆ ಶಬ್ದಗಳನ್ನು ಕೂಡಾ ಕೇಳಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.ಇದು ಒತ್ತಡ ಮತ್ತು ಆತಂಕದ ಕಾರಣದಿಂದ ಉಂಟಾಗುವ ಸಮೂಹ ಸನ್ನಿ ಎಂದು ಜಿಲ್ಲಾ ಉಪ ಆರೋಗ್ಯ ಅಧಿಕಾರಿ ಡಾ. ಅಭಿಷೇಕ್ ನಾಯ್ಡು ತಿಳಿಸಿದ್ದಾರೆ. ಇದನ್ನು ವೈದ್ಯಕೀಯವಾಗಿ ಮಾಸ್‌ ಸೈಕಾಜಲಿಕ್‌ ಇಲ್‌ನೆಸ್‌ ಎಂದು ಕರೆಯಲಾಗುತ್ತದೆ.

ಶಾಲಾ ವ್ಯವಸ್ಥೆಗಳ ಬಗ್ಗೆ ಎದ್ದಿರುವ ಪ್ರಶ್ನೆಗಳು

ಈ ಘಟನೆಯು ಶಾಲೆಯ ವ್ಯವಸ್ಥೆಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಇಲ್ಲಿ ಒಂದು ಕ್ಲಾಸ್‌ನಲ್ಲಿ ಲೆಕ್ಕಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವುದು ಗಮನಕ್ಕೆ ಬಂದಿದೆ. ಕಳಪೆ ಗುಣಮಟ್ಟದ ಆಹಾರ ಮತ್ತು ಕಳಪೆ ನೈರ್ಮಲ್ಯದಂತಹ ಸಮಸ್ಯೆಗಳು ಇಲ್ಲಿ ಇರುವುದು ಪತ್ತೆಯಾಗಿದೆ. ಶಾಲೆಯಲ್ಲಿ ಕೌನ್ಸೆಲಿಂಗ್‌ ಸೌಲಭ್ಯಗಳ ಕೊರತೆಯೂ ಇದೆ ಎನ್ನಲಾಗಿದೆ. ಇಲ್ಲಿ ಮೊದಲಿಗೆ ಒಬ್ಬ ವಿದ್ಯಾರ್ಥಿಗೆ ಸಮಸ್ಯೆ ಎದುರಾದ ತಕ್ಷಣ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಈ ಘಟನೆಯ ಬಗ್ಗೆ ವದಂತಿಗಳು ಹರಡುವುದಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹುವಾ ಮರದ ಬಗ್ಗೆ ಪ್ರಾಂಶುಪಾಲರು ಹೇಳಿದ್ದೇನು?

ಕ್ಯಾಂಪಸ್‌ನಲ್ಲಿರುವ ಮಹುವಾ ಮರವನ್ನು ಕಡಿದ ನಂತರ ಈ ಘಟನೆ ಶುರುವಾಯಿತು ಎನ್ನುವುದು ಪೋಷಕರ ವಾದ. ಆದರೆ, ಶಾಲೆಯ ಪ್ರಾಂಶುಪಾಲ ಸಂಜಯ್ ಚೌಧರಿ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಆ ಮರವನ್ನು ಆರು ವರ್ಷಗಳ ಹಿಂದೆಯೇ ಕತ್ತರಿಸಲಾಗಿತ್ತು ಎಂದು ಹೇಳಿದ್ದಾರೆ. ಅಂದರೆ ಒಂದು ವೇಳೆ ಈ ಮರವನ್ನು ಕಡಿದ ಕಾರಣದಿಂದ ಉಂಟಾಗಿರುವ ಸಮಸ್ಯೆಯಾಗಿದ್ದರೆ ಆರು ವರ್ಷಗಳ ಹಿಂದೆಯೇ ಸಮಸ್ಯೆ ಕಾಣಿಸಿಕೊಳ್ಳಬೇಕಿತ್ತು. ಆದರೆ ಇದು ಆರು ವರ್ಷಗಳ ನಂತರ ಕಾಣಿಸಿಕೊಂಡಿರುವ ಸಮಸ್ಯೆಯಾಗಿದೆ.

ಇದೀಗ ಭೂತ ಪ್ರೇತದ ವದಂತಿ ಎಲ್ಲಾ ಕಡೆ ಹರಡಿರುವ ಕಾರಣ ಅಖಿಲ ಭಾರತ ಮೂಢನಂಬಿಕೆ ವಿರೋಧಿ ಸಮಿತಿಯ ತಂಡವು ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಶಾಲೆಗೆ ಭೇಟಿ ನೀಡಿದ್ದಾರೆ.

ವಯಸ್ಸಿಗೆ ಬಂದ ಮಕ್ಕಳು ವಿನಾ ಕಾರಣ ನಗುವುದು, ಮೌನವಾಗಿ ಬಿಡುವುದು ಸಾಮಾನ್ಯ. ಆದರೆ ಇದೇ ಸಮೂಹ ಸನ್ನಿಯಾದಾಗ ಸಮಸ್ಯೆಯಾಗಿ ಪರಿವರ್ತನೆಯಾಗುವುದು. ಅದಕ್ಕೆ ಭೂತ ಪ್ರೇತದ ರೆಕ್ಕೆ ಪುಕ್ಕ ಸೇರಿಕೊಂಡರೆ ಅಂಥಹ ಸುದ್ದಿ ಹರಡದಂತೆ ತಡೆಯುವುದು ಕಷ್ಟವಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+