ಉತ್ತರ ಭಾರತದ ಕರ್ವಾ ಚೌತ್ ಹಬ್ಬದ ವಿಶೇಷ ಚಿತ್ರಗಳು
ನವದೆಹಲಿ, ಅಕ್ಟೋಬರ್, 31 : ಹೆಂಗಳೆಯರ ಹಬ್ಬವೆಂದೇ ಪ್ರಸಿದ್ದಿ ಪಡೆದ ಕರ್ವಾ ಚೌತ್ ಹಬ್ಬ ಉತ್ತರ ಭಾರತದಾದ್ಯಂತ ಶುಕ್ರವಾರ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಗಂಡಂದಿರ ಶ್ರೇಯೋಭಿವೃದ್ಧಿ ಬಯಸಿ ಮಡದಿಯರು ಮಾಡುವ ಈ ಹಬ್ಬಕ್ಕೆ ವಿಶೇಷ ಪ್ರಾಧಾನ್ಯತೆ ಇದೆ.
ಕರ್ವಾ ಚೌತ್ ಹಬ್ಬವನ್ನು ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ನಂತರದ ನಾಲ್ಕನೇ ದಿನ ಮಾಡಲಾಗುತ್ತದೆ. ಆಧುನಿಕ ಕಾಲದಲ್ಲಿ ಇದನ್ನು ಗಂಡ ಮತ್ತು ಹೆಂಡತಿಯರ ನಡುವೆ ಬಾಂಧವ್ಯ ಬೆಸೆಯುವ ಹಬ್ಬವೆಂದು ಭಾವಿಸುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಮಡದಿಯು ಮದುಮಗಳಂತೆ ಸಿಂಗಾರಗೊಳ್ಳುತ್ತಾಳೆ.[ಮನೆಯಲ್ಲೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡೋದು ಹೇಗೆ?]
ಕರ್ವಾ ಚೌತ್ ಹಬ್ಬದ ಹಿನ್ನೆಲೆ
ಗಂಡಂದಿರ ಯೋಗಕ್ಷೇಮ ಬಯಸುವ ಈ ಹಬ್ಬವು ತನ್ನದೇ ಆದ ಹಿನ್ನೆಲೆ ಹೊಂದಿದೆ. ಯುದ್ಧಕ್ಕೆಂದು ಹೋದ ತನ್ನ ಗಂಡ ಬಹಳ ಸುರಕ್ಷಿತವಾಗಿ ಮರಳಿ ಮನೆಗೆ ಬಂದಾಗ, ಯುದ್ಧದ ನೋವುಗಳನ್ನು ಮರೆಯಲೆಂಬ ಉದ್ದೇಶದಿಂದ ಹೆಂಡತಿಯು ಉತ್ತಮ ಭಕ್ಷ್ಯಭೋಜನ ತಯಾರಿಸಿ, ರಾಣಿಯಂತೆ ಅಲಂಕೃತಗೊಂಡು ಬೇರೆ ಹೆಂಗಳೆಯರ ಜೊತೆ ಸೇರಿಕೊಂಡು ಆಚರಣೆ ಮಾಡುವ ಸಂಪ್ರದಾಯವಿತ್ತು.
ಇನ್ನೊಂದು ದಂತಕತೆಯ ಪ್ರಕಾರ, 'ಮದುವೆಯಾಗುವ ಹುಡುಗಿಗೆ ಮುಂದೆ ಏಕಾಂಗಿ ಭಾವ ಕಾಡಬಾರದೆಂಬ ಉದ್ದೇಶದಿಂದ ಮದುವೆಯಾಗುವ ಹುಡುಗಿಯನ್ನು ಮೊದಲು ತನ್ನ ಗಂಡನ ಸಂಬಂಧಿಕರೊಂದಿಗೆ ಇರಿಸುತ್ತಾರೆ.
ಆಗ ಮದುವೆಯಾಗುವ ವಧುವು ಅದೇ ಊರಿನ ಇನ್ನೊಬ್ಬ ಮಹಿಳೆಯನ್ನು ಸ್ನೇಹಿತೆಯನ್ನಾಗಿ ಮಾಡಿಕೊಂಡು ತನ್ನ ನೋವು ನಲಿವುಗಳನ್ನು ಹಂಚಿಕೊಂಡು ಆಕೆಯೊಂದಿಗೆ ಇರುತ್ತಿದ್ದಳು. ಆಗ ವಧುವು ತನ್ನ ಮದುವೆಯಾಗುವ ಹುಡುಗನನ್ನು ನೆನೆದು ಮಾನಸಿಕವಾಗಿ ಸ್ಥೈರ್ಯ ತಂದುಕೊಳ್ಳಲು ಪೂಜೆ ಮಾಡಿಕೊಂಡು ಬರಲಾಯಿತು. ಅಂದಿನಿಂದ ಕರ್ವಾ ಚೌತ್ ಗಂಡಂದಿರ ಆರಾಧನಾ ಹಬ್ಬವಾಗಿ ಖ್ಯಾತಿ ಪಡೆಯಿತು'.[ದಸರಾ: ಹುಬ್ಬಳ್ಳಿಯಲ್ಲಿ ಕಣ್ಣಿಗೆ, ಮನಸ್ಸಿಗೆ ಹಬ್ಬವೋ ಹಬ್ಬ]
ಈ ದಿನದಂದು ಮಡದಿಯರು ಹಾಗೂ ಮದುವೆಯಾಗುವ ಹುಡುಗಿಯರು ಇಡೀ ದಿನ ಉಪವಾಸವಿದ್ದು, ಈ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ಹಾಗಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಕರ್ವಾ ಚೌತ್ ಹಬ್ಬ ಆಚರಿಸಿದ ಮಹಿಳೆಯರ ಸಂಭ್ರಮವನ್ನು ನೋಡೋಣ [ಚಿತ್ರ ಕೃಪೆ : ಪಿಟಿಐ]

ಚಂದ್ರನಂತೆ ಕಂಡ ವಧು
ಜಮ್ಮು ಕಾಶ್ಮೀರ: ಮದುವೆಯಾದ ಮಹಿಳೆಯು ಇಡೀ ದಿನ ಉಪವಾಸವಿದ್ದು, ತನ್ನ ಗಂಡನನ್ನು ಆರಾಧಿಸಿ, ಬಳಿಕ ಚಂದ್ರನನ್ನು ನೋಡಿ ತನ್ನ ಉಪವಾಸ ಕೊನೆಗೊಳಿಸುತ್ತಾಳೆ. ಚಂದ್ರನನ್ನು ನೋಡಲು ಹೊರಡುವ ಸಂದರ್ಭದಲ್ಲಿ ಮಹಿಳೆ ಕಂಡಿದ್ದು ಹೀಗೆ. ಸಾಣಿಗೆ ಎದುರು ದೀಪ ಹಚ್ಚಿ ಅದರ ಬೆಳಕಿನಲ್ಲಿ ಗಂಡನ ಮೊಗವನ್ನು ಕಾಣುತ್ತಾರೆ.

ನಮ್ಮ ಬಾಂಧವ್ಯ ಹೀಗೆ ಇರಲಿ
ಕರ್ವಾಚೌತ್ ಹಬ್ಬದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಸಣ್ಣದೊಂದು ಉಡುಗೊರೆ ಕೊಡುವುದು ಸಂಪ್ರದಾಯ. ಉಡುಗೊರೆ ಕೊಟ್ಟುಕೊಳ್ಳುವ ಸಂದರ್ಭದಲ್ಲಿ ಮಹಿಳೆಯರು ನಮ್ಮ ಬಾಂಧವ್ಯ ಹೀಗೆಯೇ ಇರಲಿ ಎಂದುಕೊಂಡರು.

ಇದು ಕರ್ವಾ ಚೌತ್ ಸೆಲ್ಫಿ
ಪಂಜಾಬಿನ ಜಲಂಧರ್ ನಲ್ಲಿ ಕರ್ವಾ ಚೌತ್ ಹಬ್ಬದಲ್ಲಿ ಮಧುವಣಗಿತ್ತಿಯರಂತೆ ಅಲಂಕೃತಗೊಂಡ ಮಹಿಳೆಯರು ಒಟ್ಟುಗೂಡಿ ಸೆಲ್ಫಿ ತೆಗೆದುಕೊಂಡರು.

ಅಚ್ಚುಕಟ್ಟಾಗಿ ಸಂಪ್ರದಾಯದ ಪಾಲನೆ
ಪಾಟ್ನಾದಲ್ಲಿ ಮಹಿಳೆಯರು ಕರ್ವಾಚೌತ್ ನ ಕೆಲವು ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಮಾಡಿದರು. ಈ ಹಬ್ಬದಲ್ಲಿ ಮಹಿಳೆಯರು ತಮ್ಮ ಸ್ನೇಹಿತರು, ಸಂಬಂಧಿಕರು ಭೇಟಿ ಮಾಡಿ ಚಿತ್ತಾರ ಬಿಡಿಸಿದ ಮಡಿಕೆಯ ತುಂಬಾ ಬಳೆ, ಹೊಸ ಬಟ್ಟೆ, ಕೆಲವು ಸೌಂದರ್ಯವರ್ಧಕಗಳನ್ನು ಇಟ್ಟು ಕೊಡುತ್ತಾರೆ. ಹಾಗೆಯೇ ಮದುವೆಯಾದ ಮಹಿಳೆಯರಿಗೆ ಅವರ ತವರು ಮನೆಯಿಂದ ಉಡುಗೊರೆಯನ್ನು ನೀಡಿ ಈ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ.

ಗಂಡನ ಆಶೀರ್ವಾದ ಪಡೆದ ಮಹಿಳೆಯರು
ಅಮೃತಸರದಲ್ಲಿ ಕರ್ವಾ ಚೌತ್ ಹಬ್ಬ ಆಚರಿಸಿದ ಮಹಿಳೆಯರು ತಮ್ಮ ಗಂಡಂದಿರ ಆಶೀರ್ವಾದ ಪಡೆದುಕೊಂಡರು. ಈ ಹಬ್ಬ ನಮ್ಮ ದಕ್ಷಿಣ ಭಾರತದ ಭೀಮನ ಅಮವಾಸ್ಯೆಗೆ ಕೊಮಚ ಹೊಂದಿಕೊಳ್ಳುತ್ತದೆ.












Click it and Unblock the Notifications