OYO: ಗಂಡ ಬಂದಿದ್ದಕ್ಕೆ ಓಯೋ ರೂಂನಿಂದ ಇದ್ದ ಸ್ಥಿತಿಯಲ್ಲೇ ಕಾಂಪೌಂಡ್ ಹಾರಿ ಓಡಿದ ಪತ್ನಿ
ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಅನ್ನೋ ಮಾತು ಹಲವರ ಬಾಯಲ್ಲಿ ಆಗಾಗ ಬರುತ್ತಿರುತ್ತೆ. ಇನ್ನು ಅಕ್ರಮ ಸಂಬಂಧ ಪ್ರಕರಣಗಳು ಕೂಡ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಫುಲ್ ವೈರಲ್ ಆಗಿದೆ. ವಿವಾಹಿತ ಮಹಿಳೆಯೊಬ್ಬರು ಅರೆಬರೆ ಬಟ್ಟೆಯಲ್ಲೇ, ಕೈಯಲ್ಲಿ ತನ್ನ ಚಪ್ಪಲಿ ಹಿಡಿದು ಓಯೋ (OYO) ರೂಂನಿಂದ ಓಡಿ ಹೋಗುತ್ತಾ ಕಾಂಪೌಂಡ್ ಹಾರಿದ್ದಾರೆ. ಈ ಮಹಿಳೆ ತನ್ನ ಪತಿಯನ್ನು ನೋಡಿ ಗಾಬರಿಯಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೀರತ್ ಎಂದು ವಿಡಿಯೋ ಶೇರ್ ಮಾಡಲಾಗುತ್ತಿದೆ. ಮಹಿಳೆಯು ಪತಿಗೆ ಗೊತ್ತಿಲ್ಲದಂತೆ ತನ್ನ ಪ್ರಿಯಕರನೊಂದಿಗೆ ಓಯೋ ರೂಂಗೆ ತೆರಳಿದ್ದರು. ಅಲ್ಲಿ ತನ್ನ ಹುಟ್ಟುಹಬ್ಬ ಕೂಡ ಆಚರಿಸಿಕೊಂಡು ಏಕಾಂತದಲ್ಲಿದ್ದರು. ಈ ವೇಳೆ ಆಕೆಯ ಪತಿ ದಿಢೀರನೆ ಅಲ್ಲಿಗೆ ಪ್ರತ್ಯಕ್ಷವಾಗಿದ್ದರು. ಇದನ್ನು ನೋಡಿ ಆ ಮಹಿಳೆ ಫುಲ್ ಗಾಬರಿಯಾಗಿದ್ದಾರೆ. ಕೊನೆಗೆ ಒಂದು ಕ್ಷಣವೂ ಯೋಚನೆ ಮಾಡದೆ ಇದ್ದ ಸ್ಥಿತಿಯಲ್ಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಮಹಿಳೆಯು ಅರೆಬರೆ ಬಟ್ಟೆ ಸ್ಥಿತಿಯಲ್ಲೇ ತನ್ನ ಕಾಲಿಗೆ ಚಪ್ಪಲಿಯೂ ಹಾಕಿಕೊಳ್ಳದೆ ಅದನ್ನು ಕೈಯಲ್ಲಿ ಹಿಡಿದು ಓಯೋ ರೂಂನಿಂದ ಹೊರಬಂದಿದ್ದು. ಪತಿಯನ್ನು ನೋಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಬೇರೆ ದಾರಿ ಕಾಣದೆ ಮೆಟ್ಟಿಲು ಹತ್ತುವ ಬದಲು ಮಹಡಿಯ ಜಿಗಿದು, ಕಾಂಪೌಂಡ್ ಮೇಲೆ ನಡೆದು ಜಂಪ್ ಮಾಡಿ ಓಡಿದ್ದಾರೆ.
ಪತ್ನಿ ತನ್ನ ಪ್ರಿಯಕರನೊಂದಿಗೆ ಓಯೋ ರೂಮ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಗ ಪತಿ ಬಂದಿದ್ದರಿಂದ ಚಪ್ಪಲಿ ಹಿಡಿದು ಅರ್ಧ ಬಟ್ಟೆ ಧರಿಸಿ, ಛಾವಣಿಯಿಂದ ಹಾರಿ ಪರಾರಿಯಾಗಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಅಲ್ಲಿದ್ದವರೇ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.
ಕಿಟಕಿಯಿಂದ ಜಿಗಿದಿದ್ದ ಮಹಿಳೆ
ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬಾರೌಟ್ ಪಟ್ಟಣದಲ್ಲೂ ಇಂತದ್ದೇ ವಿಚಿತ್ರ ಘಟನೆ ನಡೆದಿತ್ತು. ವಿವಾಹಿತ ಮಹಿಳೆಯೊಬ್ಬರುತಮ್ಮ ಪ್ರೇಮಿಯೊಂದಿಗೆ ಓಯೋ ಹೋಟೆಲ್‌ನಲ್ಲಿ ಇದ್ದಾಗ ಅವರ ಪತಿ ಮತ್ತು ಮಾವಂದಿರು ಹಾಗೂ ಪೊಲೀಸರು ಹೋಟೆಲ್‌ಗೆ ಆಗಮಿಸಿದ್ದರು. ಆಗ ಮಹಿಳೆ ಭಯಗೊಂಡು, ಮುಖ ಮುಚ್ಚಿಕೊಂಡು ಹೋಟೆಲ್‌ನ ಸುಮಾರು 12 ಅಡಿ ಎತ್ತರದ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದರು.
ಈ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಮಹಿಳೆಯ ಪತಿಯ ಕುಟುಂಬದವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಮಹಿಳೆ ತನ್ನ ಪ್ರೇಮಿಯೊಂದಿಗೆ ಹೋಟೆಲ್‌ಗೆ ಬಂದಿದ್ದು, ಪತಿ ಮತ್ತು ಮಾವಂದಿರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಬಂದಿದ್ದರು. ಮಹಿಳೆ ಜಿಗಿದು ಓಡಿ ಹೋಗಿದ್ದರು. ಬಳಿಕ ಆ ಪ್ರೇಮಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
OYOಗೆ ಕೋರ್ಟ್‌ನಿಂದ ರಿಲೀಫ್
ಆತಿಥ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಓಯೋ ಹೋಟೆಲ್ಸ್ & ಹೋಮ್ಸ್ ವಿರುದ್ಧ ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ₹1,140 ಕೋಟಿ ಏಂಜೆಲ್ ತೆರಿಗೆ ಬೇಡಿಕೆಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಯ ಹೂಡಿಕೆಯನ್ನು ಆದಾಯವಾಗಿ ಪರಿಗಣಿಸಿ, ಈ ಬೇಡಿಕೆಯನ್ನು ಹೊರಡಿಸಿತ್ತು. ಆದರೆ, ಓಯೋ ಕಂಪನಿ ಇದನ್ನು ಹೂಡಿಕೆಯಾಗಿ ಪರಿಗಣಿಸಬೇಕು ಎಂದು ವಾದಿಸಿತ್ತು. ಹೀಗಾಗಿ, ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ತಡೆ ಆದೇಶದಿಂದ ಓಯೋಗೆ ತಾತ್ಕಾಲಿಕವಾಗಿ ದೊಡ್ಡ ಪರಿಹಾರ ಸಿಕ್ಕಿದೆ.












Click it and Unblock the Notifications