ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

|
Google Oneindia Kannada News

"ಮದುವೆ ಅಂದ್ರೆ ಹಂಗೆ ಮಗಾ... ಅರೆಂಜ್ ಮ್ಯಾರೆಜ್ ಆದ್ರೆ ನಮ್ಮೋರೆಲ್ಲ ಸೇರಿ ಬಾವಿಗೆ ತಳ್ಳಿದಂಗೆ, ಲವ್ ಮ್ಯಾರೆಜ್ ಆದ್ರೆ ನಾವೇ ಹೋಗಿ ಬಾವಿಗೆ ಬಿದ್ದಂಗೆ..!" ಅದೆಷ್ಟು ಜನರ ಬಾಯಲ್ಲಿ ಈ ಹಾಸ್ಯವನ್ನು ಕೇಳಿದ್ದೇವೋ! ಮದುವೆ ಅಂದ್ರೆ 'ಬಾವಿಗೆ ಬೀಳೋ ಪ್ರಕ್ರಿಯೆ' ಎಂದುಕೊಂಡವರಿಗೆ ಡಿಚ್ಚಿ ಕೊಡೋದಕ್ಕೆ ಇಲ್ಲೊಂದು ಸುದ್ದಿ ಬಂದಿದೆ ನೋಡಿ!

ಮದುವೆಯಾಗೋದ್ರಿಂದ ಹೃದ್ರೋಗಗಳು ಬರದಂತೆ ತಡೆಯಬಹುದಂತೆ. ಪಾರ್ಶ್ವವಾಯು ಆಗುವ ಸಂಭವವೂ ಕಡಿಮೆಯಂತೆ! ಹಾಗಂತ ಸಂಶೋಧನೆಯೊಂದು ಹೇಳಿದೆ. ಯುರೋಪ್, ಉತ್ತರ ಅಮೆರಿಕ, ಏಷ್ಯಾದ ಹಲವು ಪ್ರದೇಶಗಳಲ್ಲಿ 42 ರಿಂದ 77 ವರ್ಷ ವಯಸ್ಸಿನ ಜನರ ಮೇಲೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಈ ವಿಷಯವನ್ನು ಬಯಲು ಮಾಡಿದೆ.

Marriage literally good for the heart: Study

ಮದುವೆ ವಿಳಂಬ ದೋಷ ಪರಿಹಾರದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳುಮದುವೆ ವಿಳಂಬ ದೋಷ ಪರಿಹಾರದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳು

ವಿಚ್ಛೇದಿತರು, ಮದುವೆಯಾಗದೆ ಇರುವವರು, ಸಂಗಾತಿಯನ್ನು ಕಳೆದುಕೊಂಡವರನ್ನು ಅಧ್ಯಯನ ಮಾಡಿದರೆ ಅವರಲ್ಲಿ ಏ. 42 ರಷ್ಟು ಜನರಲ್ಲಿ ಹೃದಗ್ರೋಗದ ಸಮಸ್ಯೆ ಕಂಡುಬಂದಿದೆ. ಒಂಟಿಯಾಗಿರುವವರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು. ಬಹುಶಃ ಸಂಗಾತಿಯ ಬಳಿ ನೋವನ್ನು ತೋಡಿಕೊಂಡು, ಒತ್ತಡ ನಿವಾರಣೆ ಮಾಡಿಕೊಳ್ಳುವುದರಿಂದ ಅವಿವಾಹಿತರಿಗೆ(ಮದುವೆಯ ವಯಸ್ಸು ಮೀರಿಯೂ ಮದುವೆಯಾಗದೆ ಇರುವವರಿಗೆ), ವಿಚ್ಛೇದಿತರಿಗೆ ಹೋಲಿಸಿದರೆ ವಿವಾಹಿತರಲ್ಲಿ ಈ ಸಮಸ್ಯೆ ಕಡಿಮೆ. ಅಷ್ಟೇ ಅಲ್ಲ, ಮದುವೆಯಾದ ನಂತರ ಆರೋಗ್ಯದ ಬಗ್ಗೆ ಪರಸ್ಪರ ಕಾಳಜಿಯೂ ಇರುತ್ತದಾದ್ದರಿಂದ ವಿವಾಹಿತರಲ್ಲಿ ಈ ಸಮಸ್ಯೆ ಕಡಿಮೆಯಂತೆ.

English summary
A study examined ethnically varied populations in Europe, North America, the Middle East and Asia and proved, marriage is literally goof for heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X