ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ

Posted By:
Subscribe to Oneindia Kannada

ಕಾನ್ಪುರ, ನವೆಂಬರ್ 20: ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಭಾನುವಾರ ಮುಂಜಾನೆ ಹಳಿ ತಪ್ಪಿದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 100 ಮಂದಿ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಉತ್ತರಪ್ರದೇಶದ ಕಾನ್ಪುರದ ಪುರ್ಖಾರಾಯಂ ಬಳಿ ದುರ್ಘಟನೆ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿದೆ. ತಿರುವಿನಲ್ಲಿ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು ಕಾರಣ ಎನ್ನಲಾಗಿದೆ.ಸ್ಥಳದಲ್ಲಿ ರೈಲ್ವೆ ಪೊಲೀಸರು ಹಾಗೂ ವೈದ್ಯರ ತಂಡ ಅಗತ್ಯ ನೆರವು ನೀಡುತ್ತಿದ್ದಾರೆ. [ಕಾನ್ಪುರ ಬಳಿ ರೈಲು ಅಪಘಾತ, ಯಾವ ಯಾವ ರೈಲು ಮಾರ್ಗ ಬದಲು?]

Many dead after Patna-Indore Express derails near Kanpur

ಘಟನಾ ಸ್ಥಳದಿಂದ ಸುಮಾರು 91 ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಕಾನ್ಪುರದ ಐಜಿಪಿ ಝಾಕೀರ್ ಅಹ್ಮದ್ ಅವರು ಎಎನ್ ಐಗೆ ತಿಳಿಸಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ ಸರ್ಕಾರಗಳು ಹಾಗೂ ಭಾರತೀಯ ರೈಲ್ವೆಯಿಂದ ಮೃತರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಪರಿಹಾರ ಧನ ಘೋಷಿಸಲಾಗಿದೆ.

ಸಹಾಯವಾಣಿಗಳು
ಝಾನ್ಸಿ: 05101072,
ಓರಾಯಿ: 051621072
ಕಾನ್ಪುರ: 05121072
ಪೊರ್ಖಾನ್ : 05113-270239

ಪಾಟ್ನಾ -ಇಂದೋರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ದುರ್ಘಟನೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ರೈಲ್ವೆ ಸಚಿವ ಸುರೇಶ್ ಪ್ರಭು ಅವರೊಟ್ಟಿಗೆ ರಕ್ಷಣಾ ಕಾರ್ಯದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿ ಆರ್ ಎಫ್) ರವಾನಿಸಲಾಗಿದೆ.


ಎಸ್ 1, ಎಸ್ 2 ಹೆಚ್ಚಿನ ಹಾನಿಯಾಗಿದೆ. 14 ಬೋಗಿಗಳು ಹಳಿ ತಪ್ಪಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಪ್ರಭು, ಈ ಬಗ್ಗೆ ತೀವ್ರ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least 63 passengers died after the Patna-Indore Express derailed near Purkharayam in Kanpur on Sunday. The incident took place in the wee hours of Sunday(November 20).
Please Wait while comments are loading...