"ಭೂಕಂಪ ಪೀಡಿತರ ಕಣ್ಣೀರು ಭಾರತ ಒರೆಸಲಿದೆ" : ಮೋದಿ

Posted By:
Subscribe to Oneindia Kannada

ನವದೆಹಲಿ, ಏ.26: 'ನೇಪಾಳದಲ್ಲಿರುವ ನನ್ನ ಸೋದರ, ಸೋದರಿಯರೇ ಭಯ ಪಡಬೇಡಿ, ಕಂಗಲಾಗಬೇಡಿ, ನಿಮ್ಮ ಕಣ್ಣೀರನ್ನು ಭಾರತ ಒರೆಸಲಿದೆ. ನಿಮ್ಮೊಂದಿಗೆ ಭಾರತದ ಜನತೆ' ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಆಕಾಶವಾಣಿ ಭಾಷಣದಲ್ಲಿ ಹೇಳಿದ್ದಾರೆ.

ನೇಪಾಳದಲ್ಲಿನ ಜನರ ಪರಿಸ್ಥಿತಿ ಬಗ್ಗೆ ಅರಿವಿದೆ. 2001ರಲ್ಲಿ ಗುಜರಾತಿನ ಕಛ್ ನಲ್ಲಿ ಸಂಭವಿಸಿದ ಭೀಕರ ಭೂಕಂಪವನ್ನು ಹತ್ತಿರದಿಂದ ಕಂಡಿದ್ದೇನೆ. ಈಗ ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ಭಾರತ ಸಿದ್ದವಿದೆ ಎಂದು ಭಾನುವಾರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

ಈಗ ಮೊದಲು ಮಾಡಬೇಕಾದ ಕೆಲಸವೆಂದರೆ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಬೇಕಾಗಿದೆ. 'ಸೇವಾ ಪರಮೋ ಧರ್ಮ' ಎನ್ನುವ ಹಾಗೆ ರಕ್ಷಣಾ ಕಾರ್ಯಾಚರಣೆಗೆ ನಮ್ಮ ಸೇನೆ ಎಲ್ಲಾ ರೀತಿಯಲ್ಲಿ ನೆರವಾಗುತ್ತಿದೆ.

ವಿಶೇಷ ಪರಿಣಿತಿ ಹೊಂದಿರುವವರು ತಂಡದಲ್ಲಿದ್ದಾರೆ.ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಜನರನ್ನು ರಕ್ಷಿಸಬೇಕಾಗಿದೆ ಎಂದು ಮೋದಿ ತಿಳಿಸಿದರು.

Mann Ki Baat: Nepal earthquake shakes Modi, PM recalls Kutch disaster in Gujarat

ಕಳೆದ ತಿಂಗಳು ನಾನು ಅಕಾಲಿಕ ಮಳೆ ಬಗ್ಗೆ ಮಾತನಾಡಿದ್ದೆ. ಇದರಿಂದ ರೈತರು ಪಟ್ಟ ಕಷ್ಟದ ಬಗ್ಗೆ ಹೇಳಿದ್ದೆ. ನಂತರ ಬಿಹಾರದಲ್ಲಿ ಉಂಟಾದ ಕಂಪನ ನಂತರ ನೇಪಾಳದಲ್ಲಿ ಉಂಟಾದ ಸರಣಿ ಕಂಪನಗಳು ಮಹಾ ದುರಂತಕ್ಕೆ ಮುನ್ನುಡಿ ಬರೆಯಿತು ಎಂದು ಮೋದಿ ನೊಂದು ನುಡಿದರು.

ಮನ್ ಕಿ ಬಾತ್ ಇಲ್ಲಿ ಕೇಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Sunday, April 26 once again reached out the people of the nation through Mann Ki Baat programme through All India Radio (AIR).
Please Wait while comments are loading...