ಮನ್ ಕೀ ಬಾತ್: ಸಲಹೆ ಕೇಳಿದ ಮೋದಿಗೆ ಖಡಕ್ ಪ್ರಶ್ನೆ ಎಸೆದ ರಾಹುಲ್
ನವದೆಹಲಿ, ಜನವರಿ 20: ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್' ನಲ್ಲಿ ಮಾತನಾಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡುವಂತೆ ದೇಶದ ಜನರ ಬಳಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಯತ್ತ ಮೂರು ಪ್ರಶ್ನೆಗಳನ್ನು ಎಸೆದಿದ್ದಾರೆ.
"'ಮನ್ ಕೀ ಬಾತ್'ಗಾಗಿ ನೀವು ನೀಡುವ ಒಳನೋಟವುಳ್ಳ ಆಲೋಚನೆಗಳು, ಮಾಹಿತಿಗಳು ಯಾವಾಗಲೂ ಸಂತೋಷವನ್ನುಂಟು ಮಾಡುತ್ತವೆ. ಜನವರಿ 28ರಂದು 2018 ರ ಮೊದಲ 'ಮನ್ ಕೀ ಬಾತ್'ಗಾಗಿ ನಿಮ್ಮ ಸಲಹೆಗಳೇನು? ಎನ್ಎಮ್ (ನರೇಂದ್ರ ಮೋದಿ) ಮೊಬೈಲ್ ಅಪ್ಲಿಕೇಶನ್ನಲ್ಲಿ ನನಗೆ ತಿಳಿಸಿ," ಎಂದು ಟ್ವೀಟ್ ಮಾಡಿದ್ದರು.
It is always a delight to read your insightful ideas and inputs for #MannKiBaat. What are your suggestions for 2018’s first 'Mann Ki Baat' on 28th January? Let me know on the NM Mobile App. https://t.co/TYuxNNJfIf pic.twitter.com/XSN2MDd905
— Narendra Modi (@narendramodi) January 18, 2018
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ.
"ಆತ್ಮೀಯ ನರೇಂದ್ರ ಮೋದಿಯವರೆ ನೀವು ಮನ್ ಕೀ ಬಾತ್ ಗೆ ಸಲಹೆಗಳನ್ನು ಕೇಳಿದ್ದೀರಿ. ಆದರೆ ಈ ಬಗ್ಗೆ ನೀವು ಏನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ ಎಂದು ನಮಗೆ ಹೇಳಿ.
1. ನಮ್ಮ ಯುವಕರಿಗೆ ಉದ್ಯೋಗ ನೀಡುವುದು
2. ಧೋಕ್ಲಾಂನಿಂದ ಚೀನಿಯರನ್ನು ಹೊರಗಟ್ಟುವುದು
3. ಹರ್ಯಾಣದಲ್ಲಿ ಅತ್ಯಾಚಾರಗಳನ್ನು ತಡೆಯುವುದು" ಎಂದು ಪ್ರಶ್ನಿಸಿದ್ದಾರೆ. ಅಂದ ಹಾಗೆ ಈ ಪ್ರಶ್ನೆಗಳಿಗೆ ಮೋದಿ ಕಡೆಯಿಂದ ಯಾವುದೇ ಉತ್ತರಗಳು ಬಂದಿಲ್ಲ.
Dear @narendramodi, since you've requested some ideas for your #MannKiBaat monologue, tell us about how you plan to:
— Office of RG (@OfficeOfRG) January 19, 2018
1. Get our youth JOBS
2. Get the Chinese out of DHOKA-LAM
3. Stop the RAPES in Haryana. pic.twitter.com/pwexqxKrTQ












Click it and Unblock the Notifications