Manmohan Singh: ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು...
ಭಾರತ ಮಾತ್ರವಲ್ಲ... ಇಡೀ ಜಗತ್ತು ಕಂಡ ಅತ್ಯುತ್ತಮ ನಾಯಕ & ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು ಈಗ ನಮ್ಮೊಡನೆ ಇಲ್ಲ. ಆದರೆ ಮನಮೋಹನ್ ಸಿಂಗ್ ಅವರು ಮಾಡಿರುವ ಸಾಧನೆ & ಸಮಾಜಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಮರೆಯಲು ಅಸಾಧ್ಯ. ಹೀಗೆ ಶತಕೋಟಿ ಭಾರತೀಯರ ಹೆಮ್ಮೆ ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು...
ಅದು 1932ರ ಸೆಪ್ಟೆಂಬರ್ 26, ಆ ದಿನ ಭಾರತದ ಆರ್ಥಿಕತೆಯ ಲೆಜೆಂಡ್ ಮನಮೋಹನ್ ಸಿಂಗ್ ಅವರು ಜನಿಸಿದ್ದರು. ಆಗಿನ್ನೂ ಭಾರತ & ಪಾಕಿಸ್ತಾನ ಬೇರೆ ಬೇರೆ ಆಗಿರಲಿಲ್ಲ. ಅಖಂಡ ಭಾರತ ಅಸ್ತಿತ್ವದಲ್ಲಿ ಇದ್ದ ಸಮಯದಲ್ಲಿ, ಪಾಕಿಸ್ತಾನದ ಈಗಿನ ಭೂಭಾಗ ಗಾಹ್ ಭಾಗದಲ್ಲಿ ಮನಮೋಹನ್ ಸಿಂಗ್ ಅವರು ಜನಿಸಿದ್ದರು. ಹೀಗೆ ಪಾಕಿಸ್ತಾನದ ಈಗಿನ ಭೂಭಾಗದಲ್ಲಿ ಜನಿಸಿ ಮುಂದೆ ಭಾರತದ ಪ್ರಧಾನಿ ಕೂಡ ಆದರು ಮನಮೋಹನ್ ಸಿಂಗ್ ಅವರು. ಹೀಗಿದ್ದಾಗಲೇ, ಮನಮೋಹನ್ ಸಿಂಗ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಲು...

'ಭಾರತ ರತ್ನ' ಪ್ರಶಸ್ತಿ ಕೊಡದೇ ಇರಲು ಆಗುತ್ತಾ?
1991ರ ಸಮಯದಲ್ಲಿ ಭಾರತ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದ ಸಮಯದಲ್ಲಿ ಭಾರತೀಯ ಅರ್ಥ ವ್ಯವಸ್ಥೆ ರಕ್ಷಣೆ ಮಾಡಿದ್ದೇ ಮನಮೋಹನ್ ಸಿಂಗ್ ಅವರ ಪಾಂಡಿತ್ಯ. ಹೀಗಿದ್ದಾಗಲೇ ಇಂತಹ ವ್ಯಕ್ತಿಗೆ 'ಭಾರತ ರತ್ನ' ಪ್ರಶಸ್ತಿ ಕೊಡದೇ ಇರಲು ಆಗುತ್ತಾ? ಅಂತಾ ಜನರು ಇದೀಗ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಇದೀಗ ದೇಶದ ಮೂಲೆ ಮೂಲೆಯಲ್ಲೂ ಕೂಗು ಕೇಳಿ ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಬಗ್ಗೆ ರಾಜಕೀಯ ನಾಯಕರು ಮನವಿ ಮಾಡಿ, ಮನಮೋಹನ್ ಸಿಂಗ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವಂತೆ ಇದೀಗ ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧೆಡೆ ಡಿಮ್ಯಾಂಡ್ ಇಡುತ್ತಿದ್ದಾರೆ. ಮತ್ತೊಂದು ಕಡೆ ಈಗಾಗಲೇ ಅಂತಿಮ ವಿಧಿವಿಧಾನಕ್ಕಾಗಿ ಸಿದ್ಧತೆ ನಡೆಸಲಾಗಿದ್ದು, ಮನಮೋಹನ್ ಸಿಂಗ್ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವ ಬಗ್ಗೆ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ನಿರೀಕ್ಷೆ ಇದೆ.
ಭಾರತ & ಭಾರತೀಯರನ್ನು ಸದಾ ಕಾಯುತ್ತವೆ!
ಒಟ್ನಲ್ಲಿ ಇಂದು ಮನಮೋಹನ್ ಸಿಂಗ್ ಅವರು ನಮ್ಮ ಜೊತೆಗೆ ಇಲ್ಲವಾದರೂ ಅವರು ಮಾಡಿ ಹೋದ ಕೆಲಸಗಳು ಮಾತ್ರ, ಭಾರತ & ಭಾರತೀಯರನ್ನು ಸದಾ ಕಾಯುತ್ತವೆ ಎನ್ನಬಹುದು. ಭಾರತದ ಆರ್ಥಿಕತೆಯ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಭಾರತ ಕಂಡ ಅತ್ಯಂತ ಶ್ರೇಷ್ಠ ಆಡಳಿತಗಾರ ಎಂಬ ಬಿರುದು ಕೂಡ ಪಡೆದಿದ್ದರು. ಆಧುನಿಕ ಭಾರತದ ಅಭಿವೃದ್ಧಿಗೆ ಮೂಲವಾದ ಖಾಸಗೀಕರಣ, ಉದಾರೀಕರಣ & ಜಾಗತೀಕರಣಕ್ಕೆ ಚಾಲನೆ ನೀಡಿದ್ದೇ ಮನಮೋಹನ್ ಸಿಂಗ್ ಅವರು.












Click it and Unblock the Notifications