Get Updates
Get notified of breaking news, exclusive insights, and must-see stories!

Manipur Violence: 175 ಜನರ ಸಾವು, 4,786 ಮನೆಗಳು ಭಸ್ಮ

ಅಳತೆಯಲ್ಲಿ ಪುಟಾಣಿ ರಾಜ್ಯವಾಗಿದ್ದರೂ ಮಣಿಪುರದಲ್ಲಿ ಹೊತ್ತಿಕೊಂಡ ಬೆಂಕಿ ದೇಶವನ್ನೇ ನಡುಗಿಸಿತ್ತು. ಅಷ್ಟಕ್ಕೂ ಮಣಿಪುರದಲ್ಲಿ ಇದೇ ಮೇ ತಿಂಗಳಲ್ಲಿ ಹತ್ತಿದ ಜನಾಂಗೀಯ ಕಿಚ್ಚು, ನೋಡ ನೋಡುತ್ತಿದ್ದಂತೆ ಮೂಲೆ ಮೂಲೆಗೂ ವ್ಯಾಪಿಸಿತ್ತು. ಹೀಗಾಗಿ ಪರಿಸ್ಥಿತಿ ತಣ್ಣಗಾಗಿಸಿ ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಪರದಾಡಿದ್ದರು ಪೊಲೀಸರು. ಈಗ ನೋಡಿದರೆ ಮಣಿಪುರ ಕಿತ್ತಾಟಕ್ಕೆ ಬಲಿಯಾದವರು ಎಷ್ಟು ಅನ್ನೋ ಭಯಾನಕ ಅಂಕಿ ಅಂಶ ಬಿಡುಗಡೆಯಾಗಿದೆ.

ಹೌದು ಕಳೆದ ನಾಲ್ಕು ತಿಂಗಳಲ್ಲಿ ಮಣಿಪುರ ಹಿಂಸಾಚಾರ 175 ಜನರನ್ನು ಬಲಿ ಪಡೆದಿದೆ. 1,108 ಜನ ಗಾಯಗೊಂಡಿದ್ದು, 32 ಜನ ಕಾಣೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು ಜನಾಂಗವನ್ನು ಮತ್ತೊಂದು ಜನಾಂಗ ಟಾರ್ಗೆಟ್ ಮಾಡಿದ್ದ ಕಾರಣ ಹಿಂಸಾಚಾರ ಭುಗಿಲೆದ್ದಿತ್ತು. ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದು. ಈ ಮಧ್ಯೆ ಹಿಂಸಾಚಾರ ಜೋರಾಗಿ ಕಂಡ ಕಂಡ ಮನೆಗೆ ಬೆಂಕಿ ಇಟ್ಟಿದ್ದರು ಕ್ರೂರಿಗಳು. ಹೀಗೆ ಅಲ್ಲಿ ನಡೆದ ಹಿಂಸಾಚಾರಕ್ಕೆ ಸಾವಿರಾರು ಮನೆಗಳು ಸುಟ್ಟು ಬೂದಿಯಾಗಿ ಹೋಗಿವೆ.

Manipur Violence: Death Toll Reaches 175 and 4786 Houses Burnt During the Clashes in Manipur

4,786 ಮನೆಗಳು ಹಿಂಸೆಗೆ ಭಸ್ಮ

ಈ ಮಾಹಿತಿ ಓದಲು ಮನಸ್ಸಿಗೆ ನೋವಾದರೂ ಇದು ಸತ್ಯ, ಯಾಕಂದ್ರೆ ಕಿರಾತಕರು ಅಲ್ಲಿ ಬೆಂಕಿ ಇಟ್ಟು ಭಸ್ಮ ಮಾಡಿದ್ದು ಒಂದೆರಡು ಮನೆಗಳನ್ನಲ್ಲ. ಬರೋಬ್ಬರಿ 4,786 ಮನೆ ಈ ರೀತಿ ಬೂದಿಯಾಗಿ ಹೋಗಿವೆ. ಹಾಗೇ 386 ಧಾರ್ಮಿಕ ಕಟ್ಟಡಗಳನ್ನ ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗೆ ಮಣಿಪುರದಲ್ಲಿ ಈಗ್ಲೂ ಭಯದ ವಾತಾವರಣ ಆವರಿಸಿದೆ. ಈವರೆಗೂ ಹಿಂಸಾಚಾರ ನಡೆಸುತ್ತಿದ್ದವರ ಕೈಯಿಂದ 1359 ಬಂದೂಕುಗಳು ಮತ್ತು 15,050 ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

ಶಸ್ತ್ರಾಸ್ತ್ರ ಲೂಟಿ ಮಾಡಿದ ಕಿರಾತಕರು

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಇನ್‌ಸ್ಪೆಕ್ಟರ್-ಜನರಲ್ ಆಫ್ ಪೊಲೀಸ್, ಸಹಜ ಸ್ಥಿತಿಗೆ ಮಣಿಪುರ ವಾತಾವರಣ ತಿಳಿಗೊಳಿಸಲು ಪೊಲೀಸರು ಮತ್ತು ಕೇಂದ್ರ ಪಡೆಗಳು ಹಗಲಿರುಳು ಯತ್ನಿಸುತ್ತಿವೆ ಎಂದಿದ್ದಾರೆ. ಹಾಗೇ ಕಾಣೆಯಾಗಿರುವ ಶಸ್ತ್ರಾಸ್ತ್ರಗಳ ಪೈಕಿ 1,359 ಬಂದೂಕು ಮತ್ತು 15,050 ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಿಂಸಾಚಾರ ನಡೆಸಿ ಕಿರಾತಕರು ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಲೂಟಿ ಮಾಡಿದ್ದಾರೆ ಅಂತಾ ಆರೋಪ ಮಾಡಲಾಗಿದೆ.

Manipur Violence: Death Toll Reaches 175 and 4786 Houses Burnt During the Clashes in Manipur

ಪರಿಸ್ಥಿತಿ ಹಿಡಿತಕ್ಕೆ ತರಲು ಪ್ರಯತ್ನ

ಹಾಗೇ ಇದೇ ವೇಳೆ 5172 ಬೆಂಕಿ ಹಚ್ಚಿದ ಪ್ರಕರಣ ವರದಿಯಾಗಿವೆ. 254 ಚರ್ಚ್ ಸೇರಿದಂತೆ & 132 ದೇವಾಲಯಗಳು ಸೇರಿ 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇನ್‌ಸ್ಪೆಕ್ಟರ್-ಜನರಲ್ ಆಫ್ ಪೊಲೀಸ್ ಮುವಾ ತಿಳಿಸಿದ್ದಾರೆ. ಈಗ ರಾಷ್ಟ್ರೀಯ ಹೆದ್ದಾರಿ-32, ರಾಷ್ಟ್ರೀಯ ಹೆದ್ದಾರಿ-2 ಕಾರ್ಯನಿರ್ವಹಿಸುತ್ತಿವೆ. ಭದ್ರತಾ ಪಡೆ ನಿಯೋಜಿಸಿ ರಕ್ಷಣೆಯನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 32ರಲ್ಲಿ 15ಕ್ಕೂ ಹೆಚ್ಚು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಮಣಿಪುರ ವಾತಾವರಣವನ್ನು ಸಹಜ ಸ್ಥಿತಿಯತ್ತ ತರಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ.

ಮಣಿಪುರದಲ್ಲಿ ಯಾವ ಜನಾಂಗ ಎಷ್ಟಿದೆ?

ಒಟ್ನಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಮಣಿಪುರ ಜನಸಂಖ್ಯೆ ಪ್ರಮಾಣದಲ್ಲಿ ಸುಮಾರು 53 ಶೇಕಡಾ ಮೈತೇಯಿ ಜನಾಂಗ ಇದ್ದು ಇಂಫಾಲ್‌ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟು ಇದ್ದಾರೆ. ಇವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಮೂಲಕ ಎರಡೂ ಜನಾಂಗದ ನಡುವೆ ಶಾಂತಿ ಮೂಡಿಸಲು ಪ್ರಯತ್ನ ಸಾಗಿದೆ.

ಒಟ್ನಲ್ಲಿ ಮಣಿಪುರ ಪರಿಸ್ಥಿತಿ ಈಗಲಾದರೂ ತಣ್ಣಗಾಗಬೇಕಿದೆ. ಹೀಗಾಗಿ ಪೊಲೀಸ್ ಇಲಾಖೆ ಮತ್ತು ಭದ್ರತಾ ಪಡೆಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಸಾಕಷ್ಟು ಜನರು ನಿರಾಶ್ರಿತ ಶಿಬಿರ ಸೇರಿದ್ದು ಜೀವಹಾನಿ ಕೂಡ ಉಂಟಾಗಿದೆ. ಮನೆ ಕಳೆದುಕೊಂಡವರು ಮತ್ತು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರು ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ಎರಡೂ ಜನಾಂಗದ ನಡುವೆ ಶಾಂತಿ ಮೂಡಿಸಲು ಪ್ರಯತ್ನ ಸಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+