ಮಣಿಪುರ ಚುನಾವಣೆ: ಏಕೈಕ ಟಿಎಂಸಿ ಶಾಸಕ ಬಿಜೆಪಿ ಸೇರ್ಪಡೆ ಸಾಧ್ಯತೆ

ಇಂಫಾಲ್‌, ಜನವರಿ 20: ಮಣಿಪುರದ ಏಕೈಕ ಅಖಿಲ ಭಾರತ ತೃಣಮೂಲ ಶಾಸಕ ಟಿ ರೋಬಿಂದ್ರೋ ಇಂಫಾಲ್‌ನಲ್ಲಿ ಇಂದು ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಮಣಿಪುರದ ಬಿಜೆಪಿ ನಾಯಕತ್ವ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರಾಖಂಡದಲ್ಲಿಯೂ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು ಮಾರ್ಚ್ 10 ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ ಉತ್ತರಾಖಂಡ ಟಿಎಂಸಿ ತನ್ನ ಏಕೈಕ ಶಾಸಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಟಿ ರೋಬಿಂದ್ರೋ 2017 ರ ಚುನಾವಣೆಯಲ್ಲಿ ತಮ್ಮ ನಿಕಟ ಪ್ರತಿಸ್ಪರ್ಧಿ ಮಾಜಿ ಕಾಂಗ್ರೆಸ್ ಶಾಸಕ ಟಿ ಮಂಗಿಬಾಬುರನ್ನು ಸೋಲಿಸಿ ಬಿಷ್ಣುಪುರ್ ಜಿಲ್ಲೆಯ ತಂಗಾ ಕ್ಷೇತ್ರದಿಂದ ಗೆದಿದ್ದಾರೆ, ರಾಜ್ಯದಲ್ಲಿ ಬಿರೇನ್ ನೇತೃತ್ವದ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆಸಿದ ವಿವಿಧ ಅಭಿವೃದ್ಧಿ ಕಾರ್ಯಗಳಿಂದಾಗಿ ಟಿಎಂಸಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕ ಬೆಂಬಲವನ್ನು ಪಡೆದುಕೊಂಡಿದ್ದಾರೆ.

Manipur Poll: Manipur’s Only TMC MLA Likely to Join BJP Today

ಈ ಹಿಂದೆ ಬಿಜೆಪಿ ಸೇರಿ ಬಳಿಕ ಕಾಂಗ್ರೆಸ್‌ ಸೇರಿದ್ದ ರೋಬಿಂದ್ರೋ!

ಜೂನ್ 18, 2020 ರಂದು ಬಿಜೆಪಿ ಶಾಸಕ ಸತ್ಯಬ್ರತಾ ನ್ಯಾಯಮಂಡಳಿಯಲ್ಲಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಮಣಿಪುರ ಸ್ಪೀಕರ್ ನ್ಯಾಯಮಂಡಳಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಶಾಸಕ ರೋಬಿಂದ್ರೋರನ್ನು ಅನರ್ಹಗೊಳಿಸಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷದಿಂದ ತಂಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ರೋಬಿಂದ್ರೋ ನಂತರ ಪಕ್ಷದ ರಾಜ್ಯ ಘಟಕವನ್ನು ವಿಸರ್ಜಿಸಿ ಬಿಜೆಪಿ ಸೇರಿದರು.

ಆದರೆ, ಟಿ ರೋಬಿಂದ್ರೋ ಬಳಿಕ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ಚುನಾವಣೆಗೆ ಎರಡು ದಿನಗಳ ಮೊದಲು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಚುನಾವಣಾ ಆಯೋಗವು ಮಣಿಪುರ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಬೆನ್ನಲ್ಲೇ ಮಣಿಪುರ ಕಾಂಗ್ರೆಸ್‌ಗೆ ಇತ್ತೀಚಿಗೆ ಭಾರಿ ಆಘಾತ ಉಂಟಾಗಿದೆ. ಮಣಿಪುರದ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಶಾಸಕ, ಚಾಲ್ಟನ್ಲಿಯನ್ ಅಮೊ ಜನವರಿ 9, 2022 ರಂದು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇಂಫಾಲ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ಬಿಜೆಪಿಗೆ ಸೇರಿದರು. ಇನ್ನು ಮಣಿಪುರದಲ್ಲಿ ನಡೆದ ಇನ್ನೊಂದು ರಾಜಕೀಯ ಬೆಳವಣಿಗೆಯಲ್ಲಿ ಮಣಿಪುರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ನಾಯಕ ಲೆಟ್ಪಾವೊ ಹಾಕಿಪ್ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದರು.

2022ರಲ್ಲಿ ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ 60 ಕ್ಷೇತ್ರಗಳ ಪೈಕಿ 31ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಳೆದ 2017ರಲ್ಲಿ ನಡೆದ ಮಣಿಪುರ ಚುನಾವಣೆಯಲ್ಲಿ ಬಿಜೆಪಿಯು 21 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದರೂ ಸಹ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಕಾಂಗ್ರೆಸ್ 60ರಲ್ಲಿ 28 ಸ್ಥಾನ ಗಳಿಸಿತ್ತು. ಈ ಹಿಂದೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ 21, ಎನ್‌ಪಿಪಿಯ 4, ಎನ್‌ಪಿಎಫ್‌ನ 4, ಎಲ್‌ಜೆಪಿಯ 1 ಹಾಗೂ ಒಬ್ಬ ಪಕ್ಷೇತರ ಶಾಸಕರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+