ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನಿಗೆ ಇಂದು 'ಮಾಮ್' ಸಿಕ್ಕಿದಳು : ಮೋದಿ

|
Google Oneindia Kannada News

ಬೆಂಗಳೂರು, ಸೆ. 24 : ಭಾರತ ಅನ್ಯಗ್ರಹ ಯಾನದಲ್ಲಿ ಇತಿ­ಹಾಸ ಬರೆದಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ' ಉಡಾಯಿಸಿರುವ ಮಂಗಳ­­ನೌಕೆ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಕೆಂಪು­ಕಾಯದ ಕಕ್ಷೆಗೆ ಸೇರಿದೆ. ಮಾಮ್ ನೌಕೆ ಮಂಗಳನ ಕಕ್ಷೆಗೆ ಸೇರಿದೆ. ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಂಡ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಐತಿಹಾಸಿಕ ಮಂಗಳಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಎರಡು ದಿನದ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಮೋದಿ ಬುಧವಾರ ಬೆಳಗ್ಗೆ 7 ಗಂಟೆಗೆ ಇಸ್ರೋಗೆ ತಲುಪಿದರು. ಸಿಎಂ ಸಿದ್ದರಾಮಯ್ಯ ಸಹ ಮೋದಿ ಅವರ ಜೊತೆ ಇಸ್ರೋಗೆ ತೆರಳಿದ್ದು, ಮಂಗಳಯಾನವನ್ನು ವೀಕ್ಷಿಸಿದರು.

ಮೋದಿ ಭಾಷಣದ ಮುಖ್ಯಾಂಶಗಳು

*ಭಾರತ ಇಂದು ಆರ್ಥಿಕವಾಗಿ ಪ್ರಬಲವಾಗುತ್ತಿದೆ. ನಮ್ಮ ದೇಶದ ಯುವಕರಲ್ಲಿ ಕೌಶಲ್ಯತೆ ಇದ್ದು, ಅದನ್ನು ಇಸ್ರೋ ಬಳಸಿಕೊಂಡು ಹೊಸ ಹೊಸ ಸಂಶೋಧನೆ ಮಾಡಬೇಕು ಎಂದು ಮೋದಿ ಕರೆ ನೀಡಿದರು. ['MOM ಎಂದಿಗೂ ನಿರಾಶೆಗೊಳಿಸುವುದಿಲ್ಲ' : ಮೋದಿ]

* ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಮಂಗಳವಯಾನ ಯೋಜನೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ನಾವು ಮಂಗಳಯಾನವನ್ನು ಪೂರೈಸಿದ್ದೇವೆ ಎಂದು ಮೋದಿ ಬಣ್ಣಿಸಿದರು.

* ಒಂದು ವೇಳೆ ಯೋಜನೆ ವಿಫಲವಾದರೆ ನಾನೇ ಜವಾಬ್ದಾರನಾಗುತ್ತಿದ್ದೆ, ಸಫಲವಾದರೆ ಅದು ವಿಜ್ಞಾನಿಗಳ ಸಾಧನೆ. ಸರ್ಕಾರ ವಿಜ್ಞಾನಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೋದಿ ಹೇಳಿದರು.

* ನಮ್ಮ ವಿಜ್ಞಾನಿಗಳು ಇಂದು ಇತಿಹಾಸ ನಿರ್ಮಿಸಿದ್ದಾರೆ. ಭಾರತದ ವೈಜ್ಞಾನಿಕ ಸಾಧನೆಗೆ ಇದು ಸಾಕ್ಷಿಯಾಗಿದ್ದು, ಮತ್ತಷ್ಟು ಸಂಶೋಧನೆ ನಡೆಸಲು ಇದು ಸ್ಫೂರ್ತಿ ನೀಡಿದೆ ಎಂದು ಮೋದಿ ಹೇಳಿದರು.

* ಮಂಗಳನಿಗೆ ಇಂದು ಮಾಮ್ ಸಿಕ್ಕಿದ್ದಾಳೆ ಎಂದು ಹೇಳಿದ ಮೋದಿ, ಇಂದು ಮಂಗಳನ ಅಂಗಳದಲ್ಲಿ ಮಾಮ್ ಮಿಲನವಾಗಿದೆ. ಇದಕ್ಕಾಗಿ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

modi

* ಈ ಯೋಜನೆಗೆ ಮಾಮ್ ಎಂದು ಹೆಸರಿಟ್ಟಾಗಲೇ ಇದು ಯಶಸ್ವಿಯಾಗುತ್ತದೆ ಎಂದು ತಿಳಿದಿತ್ತು. ಏಕೆಂದರೆ ಮಾಮ್ ಎಂದಿಗೂ ಯಾರಿಗೂ ನಿರಾಸೆ ಮಾಡುವುದಿಲ್ಲ ಎಂದು ಮೋದಿ ಭಾಷಣ ಆರಂಭಿಸಿದರು.

ಸಮಯ 8.08 : ಇಸ್ರೋದಲ್ಲಿ ಪ್ರಧಾನಿ ಮೋದಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ

ಸಮಯ 8 ಗಂಟೆ : ಇಸ್ರೋದ ಮಂಗಳಯಾನ ಯಶಸ್ವಿ, ಮಂಗಳನ ಕಕ್ಷೆ ಸೇರಿದ ಮಾಮ್ ನೌಕೆ

ಸಮಯ 7.58 : ಮುಖ್ಯ ಇಂಜಿನ್ ದಹನ ಕಾರ್ಯ ಅಂತ್ಯ

ಸಮಯ 7.30 : ಅಂತಿಮ ಘಟ್ಟದ ಮೂರನೇ ಹಂತ ಯಶಸ್ವಿ [ಮಂಗಳನ ಬಳಿ ತೆರಳಲು ತಲೆಗೆ ನಾಲ್ಕೇ ರೂಪಾಯಿ!]

ಸಮಯ 7.20 : ಪ್ರಧಾನಿ ಮೋದಿ ಜೊತೆ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿವಿ ಸದಾನಂದ ಗೌಡ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇಸ್ರೋಗೆ ಆಗಮಿಸಿದ್ದಾರೆ.

ಸಮಯ 7.14 : ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಸೋಮವಾರ ಮೊದಲ ಯಶಸ್ಸು : ಮಂಗಳ ಗ್ರಹದೆಡೆಗೆ ಸಾಗುತ್ತಿರುವ ಮಂಗಳಯಾನ (ಮಾರ್ಸ್‌ ಅರ್ಬಿಟರ್ ಮಿಷನ್ - ಮಾಮ್) ಬಾಹ್ಯಾಕಾಶ ನೌಕೆ ಕೊನೆಯ ಹಂತದ ಪರೀಕ್ಷೆ ಸೋಮವಾರ ಯಶಸ್ವಿಯಾಗಿತ್ತು. ಮಂಗಳಗ್ರಹಕ್ಕೆ ಸೇರಿಸುವ ಎಲ್ಎಎಂ(ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟಾರ್) ದ್ರವ ದಹನ ಪರೀಕ್ಷೆ ಸೋಮವಾರ ನಡೆದಿದ್ದು, 300 ದಿನದಿಂದ ನಿಷ್ಕ್ರಿಯವಾಗಿದ್ದ ಇಂಜಿನ್ ನನ್ನು 4 ಸೆಕೆಂಡುಗಳ(3.968 secs) ಕಾಲ ಚಾಲನೆ ಮಾಡುವ ಮೂಲಕ ವಿಜ್ಞಾನಿಗಳು ಪ್ರಮುಖ ಘಟ್ಟವನ್ನು ದಾಟಿದ್ದರು. [ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!]

ಬೆಂಗಳೂರಿನ ಪೀಣ್ಯದ ಇಸ್ರೋ ಕೇಂದ್ರದಿಂದ ವಿಜ್ಞಾನಿಗಳು ಇಂಜಿನ್ ಚಾಲನೆಯನ್ನ ವೀಕ್ಷಣೆ ಮಾಡಿದರು. ಬುಧವಾರ ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ತಲುಪಲಿದ್ದು, ಆ ನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ. [ಮಂಗಳಯಾನದ ಅಂತಿಮ ಚಾಲೆಂಜ್ ಗೆದ್ದ ಇಸ್ರೋ]

Mars

English summary
Creating history in space, India on September 24, 2014 successfully placed its Mangalyaan into the Martian orbit. India became the first Asian country to reach Mars and the first in the world to enter Martian orbit in its maiden attempt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X