• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಂಭದ್ರೋಣ ಮಳೆ-ನೆರೆಗೆ ತತ್ತರಿಸಿ ಹೋಯಿತು ಮಂಗಳೂರು!

By Nayana
|

ಬೆಂಗಳೂರು, ಮೇ 30: ಮಳೆಯ ಆಗಮನಕ್ಕಾಗಿ ಕಾಯುತ್ತಿದ್ದ ರಾಜ್ಯದ ಜನತೆಗೆ ಪ್ರವಾಹದ ಭೀತಿ ಎದುರಾಗಿದೆ. ಮುಂಗಾರು ರಾಜ್ಯಕ್ಕೆ ಕಾಲಿಟ್ಟಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನರು ಪ್ರವಾಹವನ್ನು ಎದುರಿಸುವಂತಾಗಿದೆ. ಎಲ್ಲಿ ನೋಡಿದರೂ ನೀರು ಸುತ್ತುವರೆದಿದೆ. ಕಣ್ಣಾಡಿಸಿದಷ್ಟು ದೂರಕ್ಕೂ ನೀರನ್ನು ನೋಡಬಹುದಾಗಿದೆ.

ಕಟ್ಟಡದ ನೆಲಮಹಡಿ, ಮೊದಲನೇ ಮಹಡಿಯವರೆಗೂ ನೀರು ನುಗ್ಗಿದೆ. ಮೂವರು ನೀರುಪಾಲಾಗಿದ್ದಾರೆ. ಸಾಕಷ್ಟು ಆಸ್ತಿಪಾಸ್ತಿಗಳು ನಾಶವಾಗಿದೆ. ಮಂಗಳೂರಿಗೆ ಮಳೆಯ ಅಬ್ಬರವೇನೂ ಹೊಸದಲ್ಲ ಆದರೆ ಈ ಬಾರಿ ನೆರೆಯಿಂದಾಗಿ ಜನರಲ್ಲಿ ಆತಂಕ ಮನೆಮಾಡಿದೆ.ಒಂದೆಡೆ ಮುಂಗಾರು ಪ್ರವೇಶದ ಮುನ್ಸೂಚನೆ, ಇನ್ನೊಂದೆಡೆ ಮೆಕ್ನು ಚಂಡಮಾರುತದ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ

ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ. ಮಂಗಳವಾರ ಮುಂಜಾನೆಯಿಂದ ಮಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ನಗರದ ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟಾ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಇನ್ನು ನೀರಿನಲ್ಲಿ ಹಾವುಗಳು ಕಾಣಿಸಿಕೊಂಡು ಇನ್ನಷ್ಟು ಆತಂಕ ನಿರ್ಮಾಣವಾಗಿದೆ.

LIVE: ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕ ಸಾವು

ನಗರದ ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು, ಆರಂಭಿಕ ಮಳೆಯಲ್ಲೇ ಜನರ ಪರದಾಟ ಆರಂಭವಾಗಿದೆ. ನಗರದ ಕೊಟ್ಟಾರ, ಅತ್ತಾವರದಲ್ಲಿ ನೆರೆ ಪರಿಸ್ಥತಿ ಸೃಷ್ಠಿಯಾಗಿದ್ದು, ಎಲ್ಲೆಡೆ ನೀರು ಆವರಿಸಿರುವ ಪರಿಣಾಮ ಜನರು ಆತಂಕ ಎದುರಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜನರು ಕಂಗಾಲು

ಮಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜನರು ಕಂಗಾಲು

ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಮಂಗಳವಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರಿನ ಬರುವಿಕೆಗಾಗಿ ಕಾಯುತ್ತಿದ್ದ ಜನರಿಗೆ ಮಳೆ ಶಾಕ್ ನೀಡಿದೆ. ಮಳೆಯಿಂದ ಉಂಟಾದ ಹಾನಿಯಯನ್ನು ಚಿತ್ರದಲ್ಲಿ ನೋಡಬಹುದು.

ಮಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರನ್ನು ಸ್ಥಳಾಂತರಿಸುತ್ತಿರುವುದು

ಮಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರನ್ನು ಸ್ಥಳಾಂತರಿಸುತ್ತಿರುವುದು

ಮಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಎಲ್ಲೆಡೆಯೂ ನೀರು ನಿಂತಿದೆ. ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಲಾಯಿತು. ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಸೇರಿಸಲಾಯಿತು. ಇಂದೂ ಕೂಡ ಮೋಡದ ವಾತಾವರಣ ಮುಂದುವರೆದಿತ್ತು. ಮತ್ತೆ ಮಳೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ರಸ್ತೆಗಳು ಜಲಾವೃತ, ವಾಹನಗಳಿಗೆ ಸಮಸ್ಯೆ

ರಸ್ತೆಗಳು ಜಲಾವೃತ, ವಾಹನಗಳಿಗೆ ಸಮಸ್ಯೆ

ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದೆ. ಹಾಗಾಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇಷ್ಟೇ ಅಲ್ಲದೆ ಅಲ್ಲಲ್ಲಿ ಮರಗಳು, ಕರೆಂಟ್ ಕಂಬಗಳು ಕೂಡ ಧರೆಗುರಿಳಿದ್ದ ಪರಿಣಾಮ ಸಂಚಾರದಲ್ಲಿ ಅಡಚಣೆ ಉಂಟಾಯಿತು.

ವಿದ್ಯಾರ್ಥಿಗಳ ಸಂಭ್ರಮ

ವಿದ್ಯಾರ್ಥಿಗಳ ಸಂಭ್ರಮ

ಮಂಗಳವಾರ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಇದರ ಹಿನ್ನೆಲೆಯಲ್ಲಿ ಅಮೃತಸರದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು ಹೀಗೆ.

ಶಿಮ್ಲಾದಲ್ಲಿ ಕುಡಿಯುವ ನೀರಿಗೂ ಹಾಹಾಕಾರ

ಶಿಮ್ಲಾದಲ್ಲಿ ಕುಡಿಯುವ ನೀರಿಗೂ ಹಾಹಾಕಾರ

ಶಿಮ್ಲಾದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬರುವ ಟ್ಯಾಂಕರ್ ನೀರಿಗಾಗಿ ಕಾದು ಜನರು ನೀರು ತುಂಬಿಸಿಕೊಳ್ಳಲು ಸರತಿಯಲ್ಲಿ ನಿಂತಿರುವ ದೃಶ್ಯವನ್ನು ಚಿತ್ರದಲ್ಲಿ ನೋಡಬಹುದು.

ಸ್ವಾಗತಿಸಿದ ಮಕ್ಕಳ ಜತೆ ಮಾತುಕತೆ ನಡೆಸುತ್ತಿರುವ ನರೇಂದ್ರ ಮೋದಿ

ಸ್ವಾಗತಿಸಿದ ಮಕ್ಕಳ ಜತೆ ಮಾತುಕತೆ ನಡೆಸುತ್ತಿರುವ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂಡೋನೇಶಿಯಾದ ಜಕಾರ್ತಾಕ್ಕೆ ಮಂಗಳವಾರ ಭೇಟಿ ನೀಡಿದ ಸಮಯದಲ್ಲಿ ಅವರನ್ನು ಸ್ವಾಗತಿಸಿದ ಮಕ್ಕಳ ಜತೆಗೆಯಲ್ಲಿ ಮಾತುಕತೆಯಲ್ಲಿ ತೊಡಗಿರುವುದು.

ರೈಲಿನಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ

ರೈಲಿನಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ

ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಸೊಲ್ಲಾಪುರ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ. ಅಗನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ದೃಶ್ಯವನ್ನು ನೀವು ನೋಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the much-awaited southwest monsoon reached Karnataka ahead of schedule, heavy rains have begun lashing Mangaluru and its adjoining areas since Monday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more