ಯೂಟ್ಯೂಬ್‌ ನೋಡಿ ಪತಿಯಿಂದ ಹೆರಿಗೆ ದುಸ್ಸಾಹಸ: ಬಾಣಂತಿ ಸಾವು

ತಿರುಪುರ, ಜು.26: ವೈದ್ಯರ ಸಹಾಯವಿಲ್ಲದೆ ಹೆರಿಗೆ ಮಾಡಿಸುವ ದುಸ್ಸಾಹಸಕ್ಕೆ ಯಾರೂ ಕೂಡ ಕೈಹಾಕಬಾರದು ಎನ್ನುವ ಸಂದೇಶವನ್ನು ಈ ಘಟನೆ ನೀಡುತ್ತದೆ.

ವೈದ್ಯರ ಸಹಾಯವಿಲ್ಲದೆ ಯೂಟ್ಯೂಬ್‌ ನೋಡಿ ನಾನೇ ಹರಿಗೆ ಮಾಡಿಸುತ್ತೇನೆ ಎಂಬ ಭಂಡ ಧೈರ್ಯದಿಂದ ಪತ್ನಿಯನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ.

ಯೂಟ್ಯೂಬ್‌ ಸಹಾಯದಿಂದ ಹೆರಿಗೆ ಮಾಡಿಸುವ ದುಸ್ಸಾಹಸದಿಂದ ಬಾಣಂತಿ ಸಾವನ್ನಪ್ಪಿದ್ದಾಳೆ, ಅದೃಷ್ಟವಶಾತ್‌ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕೃತಿಕಾ(28) ಮೃತ ದುರ್ದೈವಿ. ಆಕೆ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು.

 Man watches online video to learn delivery, wife dies in Tamil Nadu

ಕೃತಿಕಾ ಪತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ, ಈ ದಂಪತಿಗೆ ಈಗಾಗಲೇ ಮೂರು ವರ್ಷದ ಮಗಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲು ಮಗು ಜನಿಸುವಾಗ ಆಸ್ಪತ್ರೆಯಲ್ಲೇ ಹೆರಿಗೆಯಾಗಿತ್ತು. ಎರಡನೇ ಮಗು ಮನೆಯಲ್ಲೇ ಡೆಲಿವರಿಯಾಗಬೇಕು ಎಂದು ಆಲೋಚಿಸಿದ್ದಾರೆ.

ಹೆರಿಗೆ ವೇಳೆ ಪತಿ ಜತೆಗೆ ಇಬ್ಬರು ಸ್ನೇಹಿತರೂ ಕೂಡ ಇದ್ದರು. ಸಹೋದ್ಯೋಗಿಯೊಬ್ಬರ ಪತ್ನಿ ಲಾವಣ್ಯ ಎನ್ನುವವರಿಗೆ ಮನೆಯಲ್ಲೇ ಹೆರಿಗೆಯಾಗಿದೆ ಎಂದು ತಿಳಿದ ಬಳಿಕ ಕೃತಿಕಾ ಕೂಡ ತಮ್ಮ ಮಗುವು ಮನೆಯಲ್ಲೇ ಜನಿಸಬೇಕು ಎಂದು ಆಸೆ ಪಟ್ಟಿದ್ದರು.

ಅದರಂತೆ ಮನೆಯಲ್ಲೇ ಹೆರಿಗೆ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ ಒಂದು ಜೀವ ಬಲಿಯಾಗಿದೆ. ಮಗು ಇನ್ನೂ ಕಣ್ಣು ತೆರೆದು ನೋಡುವ ಮುನ್ನವೇ ತಾಯಿಯನ್ನು ಕಳೆದುಕೊಂಡಿದೆ.

ಪತಿ ಅಥವಾ ಪತ್ನಿ, ಸಂಬಂಧಿಕರು ಯಾರೇ ಆಗಿರಲಿ ಹೆರಿಗೆ ಸಮಯದಲ್ಲಿ ವೈದ್ಯರ ಸಹಾಯವಿಲ್ಲದೆ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಮಗು ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಈ ಘಟನೆ ಮೂಲಕ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+