ಲಾಡೆನ್ ಹೆಸರಿಗೊಂದು ಆಧಾರ್ ಮಾಡಿಸಲು ಹೋಗಿ, ಸಿಕ್ಕಿಬಿದ್ದ

Posted By:
Subscribe to Oneindia Kannada

ಭಿಲ್ವಾರಾ (ರಾಜಸ್ತಾನ), ಮೇ 16: ಇಲ್ಲಿನ ಮಂಡಲ್ ಪ್ರಾಂತ್ಯದಲ್ಲಿ ಆಧಾರ್ ಕಾರ್ಡ್ ನೀಡುವ ಆಪರೇಟರ್ ಆಗಿ ಸೇವೆ ನೀಡುತ್ತಿದ್ದ ಸದ್ದಾಂ ಮನ್ಸೂರಿ (35) ಎಂಬ ವ್ಯಕ್ತಿ ಕುಖ್ಯಾತ ಭಯೋತ್ಪಾದಕ ಬಿನ್ ಲಾಡೆನ್ ಅವರ ಹೆಸರಿನಲ್ಲಿ ಆಧಾರ್ ಕಾರ್ಡ್ ಒಂದನ್ನು ತಯಾರಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹೇಳಿ ಕೇಳಿ ತಾನೇ ಆಧಾರ್ ಕಾರ್ಡ್ ನೀಡುವ ಕೇಂದ್ರ ಹೊಂದಿದ್ದ ಸದ್ದಾಂಗೆ ಇಂಥ ಐಡಿಯಾ ಅದೇಕೆ ಬಂತೊ ಗೊತ್ತಿಲ್ಲ. ತಕ್ಷಣವೇ ಈ ಬಗ್ಗೆ ಕಾರ್ಯೋನ್ಮುಖರಾದ ಆತ, ಕೆಲವಾರು ತಂತ್ರಗಳನ್ನ ಉಪಯೋಗಿಸಿ ಆಧಾರ್ ಕಾರ್ಡಿಗಾಗಿ ಪ್ರಯತ್ನಿಸಿದ್ದಾನೆ.

Man tries to get Aadhaar card for Osama bin Laden, booked

ಮೊದಲಿಗೆ ಡೇಟಾ ಬೇಸ್ ನಲ್ಲಿ ವ್ಯಕ್ತಿಯ ಹೆಸರನ್ನು ದಾಖಲಿಸುವಾಗ, ಹೆಸರನ್ನು ಒಸಾಮಾ ಬಿನ್ ಲಾಡೆನ್ ಅಂತಲೇ ನಮೂದಿಸಿದ್ದಾನೆ. ಆನಂತರ, ಆತನ ವಿಳಾಸವನ್ನು ಅಬ್ಬೊಟ್ಟಾಬಾದ್, ಭಿಲ್ವಾರಾ ಜಿಲ್ಲೆ ಎಂದು ಕೊಟ್ಟಿದ್ದಾನೆ. ಇನ್ನು, ಭಾವ ಚಿತ್ರ ಹಾಕುವ ಕಡೆ ಬಿನ್ ಲಾಡೆನ್ ನ ಮಬ್ಬುಗೊಂಡ (ಬ್ಲರ್) ಫೋಟೋವನ್ನು ಹಾಕಿದ್ದಾನೆ.

ಇಷ್ಟು ಹಾಕಿ ಆ ಮಾಹಿತಿಯನ್ನು ಕೇಂದ್ರ ಯೂನಿಕ್ ಐಡೆಂಟಿಪಿಕೇಷನ್ ಅಥಾರಿಟಿ ಆಫ್ ಇಂಡಿಯಾದ(ಯುಐಡಿಎಐ) ಕೇಂದ್ರೀಯ ಡೇಟಾ ವಿಭಾಗಕ್ಕೆ ಸಬ್ ಮಿಟ್ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿರುವ ಆತ, ಫಿಂಗರ್ ಪ್ರಿಂಟ್ ಹಾಗೂ ಐಡಿ ಪ್ರೂಫ್ ಗಳನ್ನು ಕೊಟ್ಟಿರಲಿಲ್ಲ.

ಈ ದಾಖಲೆಯನ್ನು ಪರಿಶೀಲಿಸಿದ ಯುಐಡಿಎಐನ ಕೇಂದ್ರೀಯ ಸಿಬ್ಬಂದಿ, ಇದರಲ್ಲಿನ ಲೋಪ ದೋಷಗಳನ್ನು ಪತ್ತೆ ಹಚ್ಚಿ ಅದರ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಿದಾಗ ಅದು ಬಿನ್ ಲಾಡೆನ್ ಹೆಸರಿನಲ್ಲಿ ಆಧಾರ್ ಪಡೆಯಲು ಮಾಡಿದ ಪ್ರಯತ್ನವೆಂದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಯುಐಡಿಎಐನ ಕೇಂದ್ರೀಯ ಸಿಬ್ಬಂದಿ ಸದ್ದಾಂ ವಿರುದ್ಧ ದೂರು ನೀಡಿದ್ದಾರೆ. ಇದರ ಜಾಡು ಹಿಡಿದು ಬಂದ ಪೊಲೀಸರು ಸದ್ದಾಂನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saddam Mansuri, a 35-year old Unique Identification Authority of India (UIDAI) operator was reportedly caught by officials trying to make an Aadhaar card using the name of slain al Qaeda terrorist Osama Bin Laden.
Please Wait while comments are loading...