'ಟಿವಿ ಲೈವ್ ಶೋನಲ್ಲಿ ಆತ ಮೈ ಬೆಂಕಿ ಹಚ್ಕೊಂಡ'

ಲಕ್ನೋ, ಏ.29: ಲೋಕಸಭಾ ಚುನಾವಣೆ ಕುರಿತ ಲೈವ್ ಶೋ 'ಜನಮತ್ 2014' ವೇಳೆ ಯುವಕನೊಬ್ಬ ಮೈಕೈಗೆ ಬೆಂಕಿ ಹಚ್ಚಿಕೊಂಡ ಘಟನೆ ಸುಲ್ತಾನಪುರದಲ್ಲಿ ನಡೆದಿದೆ. ತ್ರಿಕೋನಿಯಾ ಪಾರ್ಕಿನಲ್ಲಿ ಲೈವ್ ಡಿಬೇಟ್ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಹುಜನ ಸಮಾಜವಾದಿ ಪಕ್ಷದ ನಾಯಕರೂ ಸೇರಿದಂತೆ ವಿವಿಧ ರಾಜಕೀಯ ನಾಯಕರ ನಡುವೆ ಕಾವೇರಿದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಟೇಜ್ ಮೇಲೆ ಬಂದ ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ದೂರದರ್ಶನದಲ್ಲಿ ಪ್ರಸಾರವಾದ 'ಜನಮತ-2014' ಕಾರ್ಯಕ್ರಮದ ಲೈವ್ ಡಿಬೇಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹಚ್ಚಿಕೊಂಡ ನಂತರ ಆ ಯುವಕ ಎದುರಿನಲ್ಲಿದ್ದ ಬಹುಜನ ಸಮಾಜ ಪಕ್ಷದ ಮುಖಂಡರನ್ನ ಕೈಚಾಚಿ ಹಿಡಿದು ಅಪ್ಪಿಕೊಂಡಿದ್ದಾನೆ. ಘಟನೆಯಲ್ಲಿ ಯುವಕ ಮತ್ತು ಬಿಎಸ್ಪಿ ಮುಖಂಡ ಕಮ್ರುಜ್ಜಾಮ ಫೌಜಿ ಅವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.

Man sets himself ablaze during live TV show, hugs BSP leader

ಬೆಂಕಿ ಹಚ್ಚಿಕೊಂಡ ಯುವಕನನ್ನ ದುರ್ಗೇಶ್ ಎಂದು ಗುರುತಿಸಲಾಗಿದ್ದು, ಈತ ಶೇ.95ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದರೆ, ಬಿಎಸ್ ಪಿ ಮುಖಂಡನಿಗೆ ಶೇ.75ರಷ್ಟು ಸುಟ್ಟ ಗಾಯಗಳಾಗಿವೆ. ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚರ್ಚಾಕೂಟದಲ್ಲಿ ಭಾಗಿಗಳಾಗಿದ್ದ ಕಾಂಗ್ರೆಸ್ ಮುಖಂಡರಾದ ರಾಮ್ ಸಿಂಗ್ ಮತ್ತು ರಾಮ್ ವರ್ಮಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯುವಕ ದುರ್ಗೇಶ್ ಸಮೀಪದ ಹೋಟೆಲ್ ನಲ್ಲಿ ತಂಗಿದ್ದ ಎಂದು ತಿಳಿದು ಬಂದಿದೆ. ಹೋಟೆಲ್ ರೂಮಿನ ಕೀ ದೊರೆತಿದೆ. ಆದರೆ, ಬೆಂಕಿ ಹಚ್ಚಿಕೊಂಡಿದ್ದೇಕೆ ಎಂಬುದು ಇನ್ನೂ ತಿಳಿದಿಲ್ಲ. ಆತ ಚೇತರಿಸಿಕೊಂಡ ಬಳಿಕವಷ್ಟೇ ಕೃತ್ಯದ ಕಾರಣ ಸ್ಪಷ್ಟವಾಗಲಿದೆ ಎಂದು ಲಕ್ನೋ ಪೊಲೀಸರು ಹೇಳಿದ್ದಾರೆ.(ಐಎಎನ್ ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+