ವಂದೇ ಭಾರತ್‌ನಲ್ಲಿ ಮೂತ್ರ ವಿಸರ್ಜನೆಗೆ ಹೋಗಿ 6,000 ಕಳೆದುಕೊಂಡ ವ್ಯಕ್ತಿ
ಭೋಪಾಲ್, ಜುಲೈ 21: ಹೈದರಾಬಾದ್‌ನ ವ್ಯಕ್ತಿಯೊಬ್ಬರು ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯವನ್ನು ಬಳಸಿದ್ದಕ್ಕಾಗಿ ಬರೋಬ್ಬರಿ 6,000 ಕಳೆದುಕೊಂಡಿರುವ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಹೈದರಾಬಾದ್ ಮೂಲದ ಅಬ್ದುಲ್ ಖಾದಿರ್ ತನ್ನ ಪತ್ನಿ ಮತ್ತು ಎಂಟು ವರ್ಷದ ಮಗನೊಂದಿಗೆ ಮಧ್ಯಪ್ರದೇಶದ ಸಿಂಗ್ರೌಲಿಗೆ ತೆರಳುತ್ತಿದ್ದರು. ಘಟನೆ ನಡೆದ ದಿನ ಅವರು ಭೋಪಾಲ್‌ಗೆ ಆಗಮಿಸಿದ್ದರು ಮತ್ತು ಸಿಂಗ್ರೌಲಿಗೆ ರೈಲು ಹತ್ತಲು ಹೊರಟಿದ್ದರು.

ಖಾದಿರ್ ಅವರು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿದ್ದಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಬಾತ್ ರೂಂ ಕಂಡು ಬರಲಿಲ್ಲ. ಆಗ ಆತ ಪಕ್ಕದಲ್ಲಿ ಇಂದೋರ್‌ಗೆ ಹೋಗುವ ವಂದೇ ಭಾರತ್ ರೈಲಿನಲ್ಲಿ ನಿಲ್ದಾಣದಲ್ಲಿ ನಿಂತಿದ್ದ ಕಂಡು ಅದರ ವಾಶ್‌ರೂಮ್ ಅನ್ನು ಬಳಸಲು ಹತ್ತಿದನು.
ಕೆಲಸ ಮುಗಿಸಿ ಅವರೇನೋ ವಂದೇ ಭಾರತ್ ರೈಲಿನ ಶೌಚಾಲಯದಿಂದ ಹೊರಬಂದರು. ಆದರೆ ಆ ವೇಳೆ ರೈಲಿನ ಬಾಗಿಲುಗಳು ಲಾಕ್ ಆಗಿದ್ದವು. ರೈಲು ಪ್ಲಾಟ್‌ಫಾರ್ಮ್‌ನಿಂದ ಚಲಿಸಲು ಪ್ರಾರಂಭಿಸಿರುವುದು ಗಮನಕ್ಕೆ ಬಂದಿತು, ಇದರಿಂದ ರೈಲಿನಿಂದ ಇಳಿಯಲಾಗದೆ ಪರದಾಡಿದರು. ಆತಂಕಗೊಂಡ ಖಾದಿರ್ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಕೋಚ್‌ಗಳಲ್ಲಿ ನಿಂತಿದ್ದ ಮೂವರು ಟಿಕೆಟ್ ಕಲೆಕ್ಟರ್‌ಗಳಿಂದ ಸಹಾಯ ಪಡೆಯಲು ಪ್ರಯತ್ನಿಸಿದರು, ಆದರೆ ಅವರೆಲ್ಲರೂ ಡ್ರೈವರ್ ಮಾತ್ರ ಬಾಗಿಲು ತೆರೆಯಬಹುದು ಎಂದು ಹೇಳಿದರು.
ಆದರೆ ಅವರು ಚಾಲಕನ ಬಳಿ ಹೋಗಲು ಯತ್ನಿಸಿದಾಗ ಖಾದಿರ್‌ನನ್ನು ತಡೆದರು. ಕೊನೆಗೆ ಸರಿಯಾದ ಟಿಕೆಟ್ ಇಲ್ಲದೆ ರೈಲು ಹತ್ತಿದ ಪರಿಣಾಮವಾಗಿ ಖಾದಿರ್ ₹ 1,020 ದಂಡವನ್ನು ಪಾವತಿಸಬೇಕಾಯಿತು. ರೈಲು ಉಜ್ಜಯಿನಿಗೆ ಬಂದಾಗ ಅವರು ತಮ್ಮ ಪತ್ನಿ, ಮಗುವಿನ ಬಳಿ ಹೋಗಲು ಈ ಕಡೆಯಿಂದ ಭೋಪಾಲ್‌ಗೆ ಬಸ್ ಟಿಕೆಟ್‌ಗಾಗಿ ₹ 750 ಪಾವತಿಸಿದರು.
ಇತ್ತ ಅವರ ಪತ್ನಿ ಪತಿ ಬಗ್ಗೆ ಚಿಂತಿತರಾಗಿ ಸಿಂಗ್ರೌಲಿ-ಬೌಂಡ್ ದಕ್ಷಿಣ್ ಎಕ್ಸ್‌ಪ್ರೆಸ್ ರೈಲನ್ನು ಹತ್ತದಿರಲು ನಿರ್ಧರಿಸಿದರು. ಅವರು ತಮ್ಮ ಪ್ರವಾಸಕ್ಕಾಗಿ ಕಾಯ್ದಿರಿಸಿದ ₹ 4,000 ಮೌಲ್ಯದ ಟಿಕೆಟ್‌ಗಳನ್ನು ಬಳಸಲಾಗಲಿಲ್ಲ. ಇದರ ಪರಿಣಾಮವಾಗಿ ಅಬ್ದುಲ್ ಖಾದಿರ್ ವಂದೇ ಭಾರತ್ ರೆಸ್ಟ್ ರೂಂ ಅನ್ನು ಬಳಸಿದ್ದಕ್ಕಾಗಿ ಸುಮಾರು ₹ 6,000 ಕಳೆದುಕೊಂಡರು ಎಂದು ವರದಿ ತಿಳಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ತುರ್ತು ವ್ಯವಸ್ಥೆ ಇಲ್ಲದಿರುವುದರಿಂದ ಅವರ ಕುಟುಂಬ ಆತಂಕಗೊಳ್ಳಬೇಕಾಯಿತು ಎಂದು ಖಾದಿರ್ ಆರೋಪಿಸಿದರು. ಖಾದಿರ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಭೋಪಾಲ್ ರೈಲ್ವೆ ವಿಭಾಗದ ಪಿಆರ್‌ಒ ಸುಬೇದಾರ್ ಸಿಂಗ್, ವಂದೇ ಭಾರತ್ ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಘೋಷಣೆ ಮಾಡಲಾಗುತ್ತದೆ.
ಯಾವ ದಿಕ್ಕಿನಲ್ಲಿ ಬಾಗಿಲು ತೆರೆಯುತ್ತದೆ ಮತ್ತು ಬಾಗಿಲುಗಳನ್ನು ಲಾಕ್ ಮಾಡಲಾಗುತ್ತಿದೆ ಎಂದು ಸೂಚಿಸಲಾಗುತ್ತದೆ. ಅಪಘಾತಗಳನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ರೈಲಿನಲ್ಲಿ ಈ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಉನ್ನತ ಅಧಿಕಾರಿಗಳಿಂದ ಆದೇಶವನ್ನು ಪಡೆದ ನಂತರವಷ್ಟೇ ವಂದೇ ಭಾರತ್ ರೈಲನ್ನು ನಿಲ್ಲಿಸಬಹುದು ಎಂದು ಸಿಂಗ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications