Murder by Snake: ಒಡಿಶಾದಲ್ಲಿ ಹಾವು ಬಿಟ್ಟು ಪತ್ನಿ, 2 ವರ್ಷದ ಮಗಳನ್ನು ಕೊಂದ ವ್ಯಕ್ತಿ!
ಬರ್ಹಾಂಪುರ ನವೆಂಬರ್ 24: ವಿಷಪೂರಿತ ಹಾವನ್ನು ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಘಟನೆ ಒಡಿಶಾದ ಗಂಜಾಂದಲ್ಲಿ ನಡೆದಿದೆ. 25 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಂಜಾಂನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಬಿಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಗಾಂವ್ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಈ ಘಟನೆ ನಡೆದಿದೆ.
ಆರೋಪಿಯನ್ನು ಕೆ ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಕೆ ಬಸಂತಿ ಪತ್ರಾ (23) ಇವರಿಬ್ಬರು ವೈವಾಹಿಕ ವಿವಾದವನ್ನು ಹೊಂದಿದ್ದರು. ಅವರು 2020 ರಲ್ಲಿ ವಿವಾಹವಾದರು. ಇವರು ದೇಬಾಸ್ಮಿತಾ ಎಂಬ ಎರಡು ವರ್ಷದ ಮಗಳನ್ನು ಹೊಂದಿದ್ದಾರೆ. ಆರೋಪಿಯು ಹಾವಾಡಿಗನಿಂದ ಹಾವನ್ನು ಖರೀದಿ ಮಾಡಿದ್ದಾನೆ. ಧಾರ್ಮಿಕ ಉದ್ದೇಶಗಳಿಗಾಗಿ ಸರೀಸೃಪವನ್ನು ಬಳಸುವುದಾಗಿ ಸುಳ್ಳು ಹೇಳಿ ಹಾವನ್ನು ಆರೋಪಿ ಗಣೇಶ್ ಹಾವನ್ನು ಖರೀದಿದ್ದಾನೆಂದು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಅಕ್ಟೋಬರ್ 6 ರಂದು ಪ್ಲಾಸ್ಟಿಕ್ ಜಾರ್‌ನಲ್ಲಿ ನಾಗರ ಹಾವನ್ನು ತಂದು ಪತ್ನಿ ಮತ್ತು ಮಗಳು ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟಿದ್ದಾನೆ. ಮರುದಿನ ಬೆಳಗ್ಗೆ ಇಬ್ಬರೂ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಆರೋಪಿ ಹಾವನ್ನು ಬಿಟ್ಟು ಮತ್ತೊಂದು ಕೋಣೆಯಲ್ಲಿ ಮಲಗಿದ್ದಾನೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಆರೋಪಿ ಮಾವ ಎಫ್‌ಐಆರ್ ದಾಖಲಿಸಿದ ನಂತರ ಆರೋಪಿಯನ್ನು ವಿಚಾರಣೆ ನಡೆಸಲಾಯಿತು ಎಂದು ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.
ಘಟನೆಯ ಒಂದು ತಿಂಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಏಕೆಂದರೆ ಅವನ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸ್ವಲ್ಪ ವಿಳಂಬವಾಗಿರುವುದು ಕಂಡು ಬಂದಿದೆ. ವಿಚಾರಣೆಯ ಸಮಯದಲ್ಲಿ ಅವರು ಆರಂಭದಲ್ಲಿ ಆರೋಪವನ್ನು ನಿರಾಕರಿಸಿದರು. ಹಾವು ತಾನಾಗಿಯೇ ಕೋಣೆಗೆ ಪ್ರವೇಶಿಸಿರಬಹುದು ಎಂದು ಆರೋಪಿ ಹೇಳಿಕೊಂಡಿದ್ದ. ಆದರೆ ಅಂತಿಮವಾಗಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿಸಿದ್ದಾರೆ.












Click it and Unblock the Notifications