ಸಾಮಾಜಿಕ ಜಾಲತಾಣವೇ ಪುಣೆಯ ದಂಪತಿಗೆ ಆಯಿತು ನೇಣಿನ ಕುಣಿಕೆ

Posted By:
Subscribe to Oneindia Kannada

ಪುಣೆ, ಜನವರಿ 20: ಸಾಮಾಜಿಕ ಜಾಲತಾಣದಲ್ಲಿ ಚಟುವಟಿಕೆಯಿಂದ ಇದ್ದ ಪತ್ನಿಯನ್ನು ಕೊಂದ ಟೆಕಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆಯಲ್ಲಿ ನಡೆದಿದೆ. 34 ವರ್ಷದ ರಾಕೇಶ್ ಗಂಗುರ್ದೆ ಆತ್ಮಹತ್ಯೆ ಮಾಡಿಕೊಂಡವರು. ಡೆತ್ ನೋಟ್ ಬರೆದಿರುವ ಅವರು, ನಮ್ಮ ಜೀವನದ ಬಗ್ಗೆ ಸೋನಾಲಿ ಬಹಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಇದರಿಂದ ಬೇಸರವಾಗಿತ್ತು ಎಂದು ಬರೆದಿದ್ದಾರೆ.

ರಾಕೇಶ್ ಹಾಗೂ ಸೋನಾಲಿ ದಂಪತಿ ಮದುವೆಯಾಗಿ ನಾಲ್ಕು ವರ್ಷವಾಗಿತ್ತು ಮತ್ತು ಅವರಿಗೆ ಮಕ್ಕಳಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸೋನಾಲಿ ಹಾಕುವ ಪೋಸ್ಟ್ ಗಳ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. "ಡೆತ್ ನೋಟ್ ನಲ್ಲಿ ಬರೆದಿರುವಂತೆ ಸೋನಾಲಿ ತಮ್ಮ ವೈವಾಹಿಕ ಜೀವನ, ಫ್ಯಾಮಿಲಿ ಪ್ಲಾನಿಂಗ್ ಇತ್ಯಾದಿ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ಜತೆ ಚರ್ಚಿಸುತ್ತಿದ್ದರು.[ಹತ್ತು ರುಪಾಯಿಯ ಮಕ್ಕಳಾಟಕ್ಕೆ ಬಲಿಯಾಯಿತು ಜೀವ]

Man Kills Wife For Oversharing On Social Media, Hangs Himself

"ಈ ವಿಷಯ ರಾಕೇಶ್ ಆಕ್ರೋಶಕ್ಕೆ ಕಾರಣವಾಗಿ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೋನಾಲಿ ಸಹೋದರರು ಮೊದಲಿಗೆ ಶವಗಳನ್ನು ನೋಡಿದ್ದಾರೆ. ಸೋನಾಲಿ ಅವರ ತಾಯಿ ನಾಸಿಕ್ ನಿಂದ ಕರೆ ಮಾಡಿದ್ದಾರೆ. ಆಕೆ ಕರೆ ಸ್ವೀಕರಿಸಿಲ್ಲ. ಗಾಬರಿಯಿಂದ ತಮ್ಮ ಗಂಡುಮಕ್ಕಳಿಗೆ ತಿಳಿಸಿದ್ದಾರೆ. ಅವರು ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ.

ಈ ದಂಪತಿ ಇದ್ದ ಅಪಾರ್ಟ್ ಮೆಂಟ್ ಗೆ ಬಂದ ಸೋನಾಲಿ ಸಹೋದರರಿಗೆ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ರಾಕೇಶ್ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿರುವುದು, ಹಾಸಿಗೆ ಮೇಲೆ ಸೋನಾಲಿ ಶವ ಪತ್ತೆಯಾಗಿದೆ.[ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?]

ಎಂಬಿಎ ಸ್ನಾತಕೋತ್ತರ ಪದವೀಧರರಾಗಿದ್ದ ರಾಕೇಶ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ದಿನದ ಹಿಂದಷ್ಟೇ ಕೆಲಸ ಬಿಟ್ಟು, ಹೊಸ ವ್ಯಾಪಾರ ಆರಂಭಿಸುವುದರಲ್ಲಿದ್ದರು. ಕಂಪ್ಯೂಟರ್ ಎಂಜಿನಿಯರ್ ಆಗಿದ್ದ ಸೋನಾಲಿ ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Furious over a social media post, a techie in Pune allegedly strangled his wife and then hung himself at their home.
Please Wait while comments are loading...