ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಭೋಜನ ಮಾಡಿದ ರಾಜಕೀಯ ವಿರೋಧಿ ಅಮಿತ್ ಶಾ-ದೀದಿ

|
Google Oneindia Kannada News

ಭುವನೇಶ್ವರ್, ಫೆಬ್ರವರಿ 28: ರಾಜಕೀಯ ಬದ್ಧ ವೈರಿಗಳಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಟ್ಟಿಗೆ ಕೂತು ಭೋಜನ ಸವಿದಿದ್ದಾರೆ.

ಓಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ, ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾಗವಹಿಸಿದ್ದರು.

ಐದೂ ಮಂದಿ ನಾಯಕರು ಒಟ್ಟಿಗೆ ಕೂತು ಸಹಭೋಜನ ಮಾಡಿದ್ದಾರೆ. ಭೋಜನಕ್ಕೆ ಮುನ್ನಾ ರಾಜಕೀಯ ಚರ್ಚೆಯೂ ನಡೆದಿದೆ.

Mamatha Banarjee And Amit Shah Had Lunch Together

ಪೂರ್ವ ರಾಜ್ಯಗಳ ಮಂಡಳಿ ಸಭೆ ನಿಮಿತ್ತವಾಗಿ ಈ ನಾಯಕರು ಇಂದು ಭೇಟಿ ನೀಡಿದ್ದರು. ಮಂಡಳಿಯಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸುರೇನ್ ಇದ್ದರು. ಆದರೆ ಸುರೇನ್ ಅವರು ಸಭೆಯಲ್ಲಿ ಭಾಗವಹಿಸಿಲ್ಲ.

ಓಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರು ಈ ಮಂಡಳಿಯ ಉಪಾಧ್ಯಕ್ಷರಾಗಿದ್ದು, ಗೃಹ ಸಚಿವರು ಅಧ್ಯಕ್ಷರಾಗಿರುತ್ತಾರೆ. ಪೂರ್ವ ರಾಜ್ಯಗಳ ಸಿಎಂ ಗಳು ಸದಸ್ಯರಾಗಿರುತ್ತಾರೆ. ಇಂದು ನಡೆದದ್ದು 24ನೇ ಪೂರ್ವ ರಾಜ್ಯಗಳ ಮಂಡಳಿ ಸಭೆ.

English summary
Political rivals West Bengal CM Mamatha Banarjee and Home minister Amit Shah had lunch together in Odisha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X