ಮಾಜಿ ನಟಿ ಮಮತಾ ಕುಲಕರ್ಣಿ ಪತಿ, ಡ್ರಗ್ಸ್ ಮಾಫಿಯಾ ಡಾನ್ ಸೆರೆ

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 2: ಬಾಲಿವುಡ್ ನ ಮಾಜಿ ನಟಿ ಮಮತಾ ಕುಲಕರ್ಣಿ ಪತಿ ಹಾಗೂ ಡ್ರಗ್ ಮಾಫಿಯಾದ ಡಾನ್ ವಿಕ್ಕಿ ಗೋಸ್ವಾಮಿಯನ್ನು ಕೀನ್ಯಾದಲ್ಲಿ ಅಮೆರಿಕದ 'ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್ ಫೋರ್ಸ್ ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ)' ಅಧಿಕಾರಿಗಳು ಬಂಧಿಸಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದಲ್ಲಿ ದೊರೆಯಾಗಿ ಮೆರೆದಿರುವ ವಿಕ್ಕಿಯನ್ನು ಬಂಧಿಸಲು ಅಮೆರಿಕ ಸರ್ಕಾರ ಕೆಲವಾರು ವರ್ಷಗಳಿಂದ ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ತನಿಖೆ ನಡೆಸುತ್ತಿದ್ದ ತಂಡಕ್ಕೆ ವಿಕ್ಕಿ ಕೀನ್ಯಾದಲ್ಲಿರುವ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ತಂಡ ವಿಕ್ಕಿ ಇದ್ದ ಅಡಗುದಾಣದ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Mamata Kulkarni's husband and druglord Vicky Goswami held in Kenya, extradited to US

ಭಾನುವಾರವೇ ಈ ಕಾರ್ಯಾಚರಣೆ ನಡೆಸಲಾಗಿತ್ತಾದರೂ, ಅಮೆರಿಕದ ತನಿಖಾಧಿಕಾರಿಗಳು ಕೆಲವಾರು ವಿಚಾರಣೆಗಳ ನಂತರವಷ್ಟೇ ಅವರ ಬಂಧನದ ವಿಚಾರ ಜಗಜ್ಜಾಹೀರು ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former actress-turned godwoman Mamata Kulkarni's husband and drug baron Vicky Goswami was arrested by the United States (US) Drug Enforcement Administration (DEA) from Kenya on Sunday.
Please Wait while comments are loading...