ಹಗರಣಗಳ ನಡುವೆಯೂ ಗಹಗಹಿಸಿದ ಮಮತಾ ಬ್ಯಾನರ್ಜಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಕೋಲ್ಕತ್ತಾ, ಮೇ 19: ಶಾರದಾ ಹಗರಣ ಸೇರಿದಂತೆ ಮುರ್ನಾಲ್ಕು ಹಗರಣಗಳ ಸುಳಿಯಲ್ಲಿ ಸಿಲುಕಿದ್ದ ಮಮತಾ ಬ್ಯಾನರ್ಜಿ ಅವರು ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ಸಮೀಕ್ಷೆಗಳಿಗೆ ಹೊಡೆತ ಬಿದ್ದಿದೆ.

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ, ನಾರದ ಕುಟುಕು ಕಾರ್ಯಾಚರಣೆ, ಬುರ್ಧ್ವಾನ್ ಘಟನೆ ನಡುವೆಯೂ ಬೆಂಗಾಲಿಗಳ ಪಾಲಿನ 'ದೀದಿ' ಗಹಗಹಿಸಿ ನಗುತ್ತಿದ್ದಾರೆ.[ವಿಜಯೋತ್ಸಾಹದ ಚಿತ್ರಗಳು]

ಸದ್ಯದ ಟ್ರೆಂಡ್ ನಂತೆ 294ಸ್ಥಾನಗಳ ಪೈಕಿ ತೃಣ ಮೂಲ ಕಾಂಗ್ರೆಸ್ ಪಕ್ಷ 200ಪ್ಲಸ್ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿದಾರೆ. ಸಿಪಿಎಂ ಪ್ಲಸ್ 63ಸ್ಥಾನದಲ್ಲಿ ಹಾಗೂ ಬಿಜೆಪಿ 8ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. [ಪಶ್ಚಿಮ ಬಂಗಾಲ ಫಲಿತಾಂಶ ಲೈವ್ ಪುಟ]

Mamata Banerjee flies high despite Saradha, Burdwan or Narada

ಮಮತಾಗೆ ಜಯ ಏಕೆ? : ಹಗರಣಗಳನ್ನು ಮುಂದಿಟ್ಟುಕೊಂಡು ಮಮತಾ ಅವರನ್ನು ಸದೆಬಡಿಯಲು ಯತ್ನಿಸಿದ ಎಡಪಕ್ಷಗಳು ನೆಲಕಚ್ಚುವುದು ಗ್ಯಾರಂಟಿ ಎನಿಸಿದೆ. ಮಮತಾ ವಿರುದ್ಧ ಮತ ಹಾಕಲು ಪ್ರೇರಿಸಿದ ವಿಪಕ್ಷಗಳು ಸೂಕ್ತ ರಣತಂತ್ರ ರೂಪಿಸುವಲ್ಲಿ ಎಡವಿದೆ. ಮುಖ್ಯವಾಗಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವಲ್ಲಿ ವಿಫಲವಾಗಿದ್ದೆ ಮಮತಾ ಪರ ಮತದಾರರು ಒಲಿಯಲು ಕಾರಣವಾಯಿತು.[ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]

ಟಿಎಂಸಿ ವಿರುದ್ಧ ಬಂದ ನೆಗಟಿವ್ ಪಬ್ಲಿಸಿಟಿ ವರವಾಯಿತು. ಬುರ್ಧ್ವಾನ್ ಸ್ಫೋಟ ಪ್ರಕರಣವೇ ಇರಬಹುದು, ಮೇಲ್ಸೇತುವೆ ಕುಸಿತ ಇರಬಹುದು ಅಥವಾ ಶಾರದಾ ಹಗರಣವೇ ಇರಬಹುದು ಮಮತಾ ತೆಗೆದುಕೊಂಡ ನಡೆ ಜನತೆಯನ್ನು ಮುಟ್ಟಿದೆ. ಮುಖ್ಯವಾಗಿ ಚಿಟ್ ಫಂಡ್ ಹಗರಣದಲ್ಲಿ ಹಣ ಕಳೆದುಕೊಂಡವರಿಗೆ ಹಣ ಹಿಂತಿರುಗಿಸಲು ಸರ್ಕಾರ 500 ಕೋಟಿ ರು ತಕ್ಷಣವೇ ಮಂಜೂರು ಮಾಡಿದ್ದು 'ದೀದಿ' ಯನ್ನು ಮತ್ತೆ ದೇವಿಯಂತೆ ಕಾಣಲು ಕಾರಣವಾಯಿತು.

ಬೂತ್, ತಾಲೂಕು, ಜಿಲ್ಲಾಮಟ್ಟದಲ್ಲಿ ತನ್ನ ಬೇರುಗಳನ್ನು ಟಿಎಂಸಿ ಭದ್ರಪಡಿಸಿಕೊಂಡರೆ, ವಿಪಕ್ಷಗಳು ನಗರ ಪ್ರದೇಶದ ಮೇಲೆ ಗಮನಹರಿಸಿದ್ದು ಮುಳುವಾಯಿತು ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಮತ್ತೊಮ್ಮೆ ಕಾಳಿ ಮಾತೆಯ ಕೃಪೆಯಿಂದ ದೀದಿ ಅವರು ಸಿಎಂ ಗದ್ದುಗೆ ಏರಲಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many would have expected that Saradha scam would have brought down the Trinamool Congress in West Bengal. However Saradha or the Narada sting has had no impact and Mamata Banerjee clearly appears to be returning to power.
Please Wait while comments are loading...