Mamata Banerjee: ಮಹಾ ಕುಂಭ ಮೇಳವನ್ನು 'ಮೃತ್ಯುಕುಂಭ' ಎಂದು ಕರೆದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ ಜನವರಿ 18: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಮಹಾ ಕುಂಭ ಮೇಳಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಮಹಾ ಕುಂಭವನ್ನು ಮೃತ್ಯು ಮಹಾಕುಂಭ ಮೇಳೆ ಎಂದು ಕರೆದಿದ್ದಾರೆ. ಮಹಾ ಕುಂಭಮೇಳದಲ್ಲಿ ವಿಐಪಿಗಳಿಗೆ ವಿಶೇಷ ಸೌಲಭ್ಯಗಳು ಸಿಗುತ್ತಿವೆ. ಆದರೆ ಸಾಮಾನ್ಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಮೆಗಾ ಕಾರ್ಯಕ್ರಮವನ್ನು ಸರಿಯಾಗಿ ಯೋಜಿಸಲಾಗಿಲ್ಲ. ನಾನು ಮಹಾ ಕುಂಭವನ್ನು ಗೌರವಿಸುತ್ತೇನೆ. ಜೊತೆಗೆ ಪವಿತ್ರ ತಾಯಿ ಗಂಗೆಯನ್ನು ಗೌರವಿಸುತ್ತೇನೆ. ಆದರೆ ಯಾವುದೇ ಯೋಜನೆ ಇಲ್ಲದೆ, ಎಷ್ಟೋ ಜನ ಇಲ್ಲಿನ ಅವ್ಯವಸ್ಥೆಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶ್ರೀಮಂತರು, ವಿಐಪಿ ಜನರಿಗೆ 1 ಲಕ್ಷ ರೂ.ವರೆಗಿನ ಟೆಂಟ್‌ಗಳು ಪಡೆಯಲು ಅವಕಾಶವಿದೆ. ಆದರೆ ಕುಂಭಮೇಳದಲ್ಲಿ ಬಡವರಿಗೆ ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ಇಲ್ಲಿ ಕಾಲ್ತುಳಿತ ಸಾಮಾನ್ಯ. ಆದರೆ ವ್ಯವಸ್ಥೆ ಮಾಡುವುದು ಮುಖ್ಯ. ಇಲ್ಲಿ ಕಾಲ್ತುಳಿತದಲ್ಲಿ ಮರಣ ಹೊಂದಿದವರಿಗೆ ಮರಣ ಪ್ರಮಾಣ ಪತ್ರವನ್ನೂ ನೀಡಿಲ್ಲ. ಅಲ್ಲಿಯೂ ಡಬಲ್ ಎಂಜಿನ್ (ಕೇಂದ್ರ, ಯುಪಿ) ಸರ್ಕಾರವಿದೆ. ಬಡವರಿಗೂ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ದೀದಿ ಗುಡುಗಿದ್ದಾರೆ.

'ನೀವು ಒಂದು ನಿರ್ದಿಷ್ಟ ಧರ್ಮವನ್ನು ಮಾರಾಟ ಮಾಡುತ್ತಿದ್ದೀರಿ'
ಇದೇ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕೋಮುವಾದದ ಬಗ್ಗೆ ಮಾತನಾಡುವುದು ಅಥವಾ ಯಾವುದೇ ಧರ್ಮದ ವಿರುದ್ಧ ಪ್ರಚೋದಿಸುವುದು ಎಂದಲ್ಲ. ಇಲ್ಲಿ ನೀವು ಒಂದು ನಿರ್ದಿಷ್ಟ ಧರ್ಮವನ್ನು ಮಾರಾಟ ಮಾಡುತ್ತಿದ್ದೀರಿ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ರಾಜ್ಯ ವಿಧಾನಸಭೆಯಲ್ಲಿ ಮಾಡಿದ ಭಾಷಣಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು. ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬಳಸುತ್ತಿದೆ. 'ಹೀಗೇ ಮುಂದುವರೆಯುತ್ತಿದ್ದರೆ ನಾನು ರಾಜೀನಾಮೆ ನೀಡುತ್ತೇನೆ' ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಾವು ವಿರೋಧ ಪಕ್ಷಗಳಿಗೆ ಮಾತನಾಡಲು ಶೇ. 50 ರಷ್ಟು ಸಮಯವನ್ನು ನೀಡಿದ್ದೇವೆ. ಅವರು ಸದನದೊಳಗೆ ಕಾಗದಗಳನ್ನು ಎಸೆದಿದ್ದಾರೆ. ನನ್ನ ವಿರುದ್ಧ ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಒಗ್ಗಟ್ಟಾಗಿವೆ. ಅವರು ನನ್ನ ಭಾಷಣ ಮಾಡಲು ಬಿಡಲಿಲ್ಲ. ಆದರೂ ಕೂಡ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ವದಂತಿಗಳನ್ನು ಬಿಜೆಪಿ ಶಾಸಕರು ಹರಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದನದಲ್ಲಿ ಆಕ್ರೋಶಗೊಂಡರು.
ಬಾಂಗ್ಲಾದೇಶದ ಮೂಲಭೂತವಾದಿಗಳೊಂದಿಗೆ ನನ್ನ ಮೇಲೆ ಒಪ್ಪಂದ ಮಾಡಿಕೊಂಡಿರುವುದಾಗಿ ವಿಪಕ್ಷ ಶಾಸಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಪ್ರಧಾನಿ ಮೋದಿಯವರಿಗೆ ದೂರು ನೀಡುತ್ತೇನೆ. ಅವರು ಬಾಂಗ್ಲಾದೇಶದ ಮೂಲಭೂತವಾದಿಗಳೊಂದಿಗೆ ನನಗೆ ಸಂಪರ್ಕವಿದೆ ಎಂದು ಬಿಜೆಪಿ ಸಾಬೀತುಪಡಿಸಿದರೆ, ನಾನು ರಾಜೀನಾಮೆ ನೀಡುತ್ತೇನೆ.












Click it and Unblock the Notifications