ವಿಜಯ್ ಮಲ್ಯ ಹಸ್ತಾಂತರ, ಇಂದು (ಗುರುವಾರ) ಮಹತ್ವದ ವಿಚಾರಣೆ
ನವದೆಹಲಿ, ಜುಲೈ 06 : ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸು ಬಗ್ಗೆ ಇಂದು (ಗುರುವಾರ) ಲಂಡನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ವಿಜಯ್ ಮಲ್ಯ ಅವರನ್ನು ವಶಕ್ಕೆ ಪಡೆಯಲು ಭಾರತ ಹರಸಾಹಸ ಪಡುತ್ತಿದ್ದು, ಈಗಾಗಲೇ ಸಂಬಂಧಿಸಿದ ದಾಖಲೆಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ.

ಕಳೆದ ಕೆಲವು ದಿನಗಳ ಹಿಂದೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಜಯ್ ಮಲ್ಯ ಹಸ್ತಾಂತರ ಕುರಿತು ಚರ್ಚಿಸಿದ್ದರು.
ಆದರೆ, ಅವರನ್ನು ಭಾರತಕ್ಕೆ ಮರಳಿ ಕರೆತರುವ ವಿಷಯದಲ್ಲಿ ಕಾನೂನು ತೊಡಕುಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.











Click it and Unblock the Notifications